Asianet Suvarna News Asianet Suvarna News

ಹಾನಗಲ್ಲ ಬಗ್ಗೆ ಸರ್ಕಾರದ ಮಲತಾಯಿ ಧೋರಣೆ; ಶಾಸಕ ಮಾನೆ ಅಸಮಾಧಾನ

  • ಹಾನಗಲ್ಲ ಬಗ್ಗೆ ಸರ್ಕಾರದ ಮಲತಾಯಿ ಧೋರಣೆ
  • ಶಾಸಕ ಶ್ರೀನಿವಾಸ ಮಾನೆ ಅಸಮಾಧಾನ
  • ಗ್ರಾಮ ಸಂಚಾರ ಕೈಗೊಂಡ ಶಾಸಕ
Hanagal neglected by the government says MLA Srinivas mane rav
Author
First Published Oct 23, 2022, 12:30 PM IST

ಹಾನಗಲ್ಲ (ಅ.23) ಸರ್ಕಾರ ಹಾನಗಲ್ಲ ಕ್ಷೇತ್ರದ ಬಗೆಗೆ ಪ್ರತಿ ಹಂತದಲ್ಲಿಯೂ ಸಹ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ಅನುದಾನಕ್ಕೂ ಕೊಕ್ಕೆ ಹಾಕುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಹಾನಗಲ್ ಪುರಸಭೆಗೆ ಶಾಸಕ ಮಾನೆ ಧಿಡೀರ್‌ ಭೇಟಿ

ಹಾನಗಲ್ಲ ತಾಲೂಕಿನ ಮುಳಥಳ್ಳಿಯಲ್ಲಿ ಗ್ರಾಮ ಸಂಚಾರ ಕೈಗೊಂಡು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಮಾತನಾಡಿದ ಅವರು, ನಮ್ಮ ಕ್ಷೇತ್ರಕ್ಕೆ ವಿಶೇಷ ಅನುದಾನದಡಿ ಕೇವಲ . 20 ಕೋಟಿ ಮಾತ್ರ ನೀಡಲಾಗಿದ್ದು, ಇನ್ನುಳಿದ ಕ್ಷೇತ್ರಗಳಿಗೆ . 60, 70 ಕೋಟಿ ನೀಡಲಾಗಿದೆ. ಪ್ರತಿ ಕ್ಷೇತ್ರಗಳಿಗೆ 40 ಶಾಲಾ ಕೊಠಡಿ ನೀಡಲಾಗಿದ್ದು, ನಮಗೆ ಕೇವಲ 20 ಕೊಠಡಿ ಕೊಡಲಾಗಿದೆ. ತಾಲೂಕಿನಲ್ಲಿ ಪ್ರಮುಖ ಹುದ್ದೆಗಳೆಲ್ಲವೂ ಖಾಲಿ ಇವೆ. ಹೀಗಿರುವಾಗ ಆಡಳಿತ ಸವಾಲಿನಿಂದ ಕೂಡಿದ್ದರೂ ವ್ಯವಸ್ಥೆಯ ಸುಧಾರಣೆಗೆ ಸಮಯ ವ್ಯರ್ಥ ಮಾಡದೇ ಶಕ್ತಿ ಮೀರಿ ಶ್ರಮ ವಹಿಸಲಾಗಿದೆ. ಈ ಬಾರಿ ಎಲ್ಲೆಡೆ ಕಾಂಗ್ರೆಸ್‌ ಪರ ಅಲೆ ಸೃಷ್ಟಿಯಾಗಿದ್ದು, ಕಾಂಗ್ರೆಸ್‌ ಮತ್ತೊಮ್ಮೆ ಆಡಳಿತಕ್ಕೆ ಬರುವ ಎಲ್ಲ ಲಕ್ಷಣಗಳೂ ಇವೆ. ಹಿಂದೆ ಸಿದ್ದರಾಮಯ್ಯ ಅವರ 5 ವರ್ಷಗಳ ಅವಧಿಯಲ್ಲಿ ಕೊಟ್ಟಜನಪರ ಆಡಳಿತದಂತೆ ರಾಜ್ಯದಲ್ಲಿ ಮತ್ತೊಮ್ಮೆ ಸುವರ್ಣಯುಗ ಕಾಣಲಿದ್ದೇವೆ. ಆ ಸಂದರ್ಭದಲ್ಲಿ ಜನತೆಯ ಆಶೋತ್ತರಗಳನ್ನೆಲ್ಲ ಈಡೇರಿಸಿ, ಅಭಿವೃದ್ಧಿಯಲ್ಲಿ ಮೈಲಿಗಲ್ಲು ಸಾಧಿಸಿ ಮಾದರಿ ತಾಲೂಕು ನಿರ್ಮಾಣಕ್ಕೆ ಗಮನ ಹರಿಸುವ ವಿಶ್ವಾಸ ವ್ಯಕ್ತಪಡಿಸಿದರು.

MLC Election: ಡೋಂಗಿ ದೇಶ​ಭ​ಕ್ತ​ರಿಗೆ ಮತ ಹಾಕ​ದಿ​ರಿ: ಶ್ರೀನಿವಾಸ ಮಾನೆ

ಪಂ ಮಾಜಿ ಸದಸ್ಯ ಮಹದೇವಪ್ಪ ಬಾಗಸರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ ಗೊರಣ್ಣನವರ, ಪ್ರಮುಖರಾದ ಉಮೇಶ ಗೌರಕ್ಕನವರ, ದಯಾನಂದಪ್ಪ ಹಂಚಿನಮನಿ, ರಾಜೇಸಾಬ ಕಾಡಜ್ಜಿ, ಗಿರೀಶ್‌ ಹಂಚಿನಮನಿ, ಸಿದ್ದಪ್ಪ ಕಾಳಣ್ಣನವರ, ರುದ್ರಪ್ಪ ಹತ್ತಿಮತ್ತೂರ, ವೀರಭದ್ರಪ್ಪ ಹಂಚಿನಮನಿ, ತಾಜುದ್ದೀನ್‌ ಕಣವಿ, ಮಲ್ಲೇಶಪ್ಪ ಬಾಳಂಬೀಡ, ವೀರಭದ್ರಪ್ಪ ಬಂಕಾಪೂರ, ಷಣ್ಮುಖಪ್ಪ ಭಜಂತ್ರಿ, ನಿಂಗಪ್ಪ ದೊಡ್ಡಚಿಕ್ಕಣ್ಣನವರ, ಕರಿಯಪ್ಪ ಗಂಟೇರ ಮೊದಲಾದವರು ಈ ಸಂದರ್ಭದಲ್ಲಿದ್ದರು.

ಇದೇ ಸಂದರ್ಭದಲ್ಲಿ ಶಾಸಕ ಶ್ರೀನಿವಾಸ ಮಾನೆ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಹಲವುಗಳಿಗೆ ಸ್ಥಳದಲ್ಲೇ ಪರಿಹಾರ ದೊರಕಿಸಿದರು. ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆ ಕುರಿತು ಗಮನ ಸೆಳೆದರು.

ರಾಜ್ಯದಲ್ಲಿ ಸರ್ಕಾರ ಇದೆಯೋ, ಇಲ್ಲವೋ ಎನ್ನುವ ಸ್ಥಿತಿ ಇದೆ

ಈ ಸರ್ಕಾರ ಬಿದ್ದ ಮನೆಗಳಿಗೂ ಹಣ ನೀಡುತ್ತಿಲ್ಲ, ಶೌಚಾಲಯಕ್ಕೂ ಪೋ›ತ್ಸಾಹಧನ ವಿತರಿಸುತ್ತಿಲ್ಲ. ಜನಸಂಕಷ್ಟಗಳಿಗೆ ಕಿವಿಗೊಟ್ಟು ಪರಿಹಾರಕ್ಕೆ ಗಟ್ಟಿತನ ಪ್ರದರ್ಶಿಸುತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ಇದೆಯೋ, ಇಲ್ಲವೋ ಎನ್ನುವ ಸ್ಥಿತಿ ಇದೆ ಎಂದು ಶಾಸಕ ಶ್ರೀನಿವಾಸ ಮಾನೆ ಹರಿಹಾಯ್ದರು. ಹಾನಗಲ್ಲ ತಾಲೂಕಿನ ಮಾಳಾಪುರದಲ್ಲಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ವಿಶೇಷ ಘಟಕ ಯೋಜನೆಯಡಿ ಪಕ್ಕಾ ಗಟಾರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ, ಸ್ವಸಹಾಯ ಸಂಘಗಳಿಗೆ ಪೋ›ತ್ಸಾಹಧನದ ಚೆಕ್‌ ವಿತರಿಸಿ ಮಾತನಾಡಿದರು.

ಎಲ್ಲರನ್ನೂ ಜತೆಗೂಡಿಸುವ, ಒಗ್ಗೂಡಿಸುವ ಕೆಲಸ ಮಾಡದೇ ಒಡೆದು ಆಳುವ ನೀತಿಯನ್ನು ಪ್ರದರ್ಶಿಸಲಾಗುತ್ತಿದೆ. ಎಲ್ಲರನ್ನೂ ಜತೆಗೆ ಕರೆದೊಯ್ಯುವ ಕಾರ್ಯ ಈ ಸರ್ಕಾರದಿಂದ ನಡೆಯುತ್ತಿಲ್ಲ. ರೈತ ಶೋಚನೀಯ ಸ್ಥಿತಿ ತಲುಪಿದ್ದರೂ ಕಣ್ಣೀರು ಒರೆಸುವ ಪ್ರಯತ್ನ ನಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸಲು ಮಹಿಳೆಯರು ಶ್ರಮ ವಹಿಸಿದ್ದಾರೆ. ಮಹಿಳೆಯರಿಗೆ ಉದ್ಯೋಗಾವಕಾಶ ಸೃಷ್ಟಿಸಿ ಅವರಿಗೆ ಬಲ ತುಂಬಲು ಕಾಳಜಿ ವಹಿಸಿದ್ದೇನೆ. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಸ್ತ್ರೀಶಕ್ತಿಯನ್ನು ಸದ್ವಿನಿಯೋಗ ಪಡಿಸಿಕೊಳ್ಳಬೇಕಿದೆ. ಹಿಂದೆ ಕಾಂಗ್ರೆಸ್‌ ಸರ್ಕಾರದ ಸಂದರ್ಭದಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ಆರ್ಥಿಕ ಪೋ›ತ್ಸಾಹ ನೀಡಿದಂತೆ ಈಗಿನ ಸರ್ಕಾರವೂ ಗಮನ ಹರಿಸಬೇಕಿದೆ ಎಂದರು.

ಮುಖಂಡ ಬಸವಂತ ನಾಯ್ಕ ಮಾತನಾಡಿ, ಅವಧಿ ಅಲ್ಪ ಇದ್ದರೂ ಕೂಡ ತಮ್ಮ ಕೆಲಸ-ಕಾರ್ಯಗಳ ಮೂಲಕ ಶಾಸಕ ಶ್ರೀನಿವಾಸ ಮಾನೆ ಮನೆಮಾತಾಗಿದ್ದಾರೆ. ಅಧಿಕಾರಿಗಳ ಚಳಿ ಬಿಡಿಸಿ, ಆಡಳಿತ ವ್ಯವಸ್ಥೆಗೆ ಹೊಸ ಸ್ಪರ್ಶ ನೀಡಿದ್ದಾರೆ. ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಮಸ್ಯೆ ಅರಿಯುವ ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ ಎಂದರು.

ಸೋಮಣ್ಣ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮಾಜಿ ಸದಸ್ಯರಾದ ಫಯಾಜ್‌ ಲೋಹಾರ, ಭೀಮಣ್ಣ ಲಮಾಣಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ ಗೊರಣ್ಣನವರ, ರಾಮಚಂದ್ರ ಕಲ್ಲೇರ, ಸರೋಜವ್ವ ಲಮಾಣಿ, ವಾಲೇಶಪ್ಪ ಲಮಾಣಿ, ಶಾಂತಣ್ಣ, ಚಂದ್ರಪ್ಪ ಲಮಾಣಿ, ಭೀಮಣ್ಣ ಭಂಡಾರಿ, ರೇಖಾ ಮಾರನಬೀಡ, ಸವಿತಾ ಹಳ್ಳಿಗುಡಿ, ಸೋಮವ್ವ ದೊಡ್ಡಮನಿ, ಗದಿಗೆವ್ವ ಹಳ್ಳಿಬೈಲ್‌, ಪುಟ್ಟವ್ವ ಲಮಾಣಿ ನೊದಲಾದವರು ಈ ಸಂದರ್ಭದಲ್ಲಿದ್ದರು.

Follow Us:
Download App:
  • android
  • ios