Asianet Suvarna News Asianet Suvarna News

ಹಾನಗಲ್ ಪುರಸಭೆಗೆ ಶಾಸಕ ಮಾನೆ ಧಿಡೀರ್‌ ಭೇಟಿ

ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕ ಸಂಪರ್ಕಕ್ಕೆ ಸಿಗುತ್ತಿಲ್ಲ, ಕಚೇರಿಗೂ ಹಾಜರಾಗುತ್ತಿಲ್ಲ ಎನ್ನುವ ದೂರುಗಳ ಹಿನ್ನೆಲೆ, ಹಾನಗಲ್ಲ ಪುರಸಭೆಗೆ ಶಾಸಕ ಮಾನೆ ಧಿಡೀರ್‌ ಭೇಟಿ

MLA Shrinivas Mane suddenly visited Hanagalla Municipality rav
Author
First Published Sep 4, 2022, 10:46 AM IST

ಹಾನಗಲ್ಲ (ಸೆ.4) : ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕ ಸಂಪರ್ಕಕ್ಕೆ ಸಿಗುತ್ತಿಲ್ಲ, ಕಚೇರಿಗೂ ಹಾಜರಾಗುತ್ತಿಲ್ಲ ಎನ್ನುವ ದೂರುಗಳ ಹಿನ್ನೆಲೆಯಲ್ಲಿ ಹಾನಗಲ್ಲ ಪುರಸಭೆಗೆ ಶನಿವಾರ ಬೆಳಗ್ಗೆ ದಿಢೀರ್‌ ಭೇಟಿ ನೀಡಿದ ಶಾಸಕ ಶ್ರೀನಿವಾಸ ಮಾನೆ(MLA Shrinivas Mane) ಮುಖ್ಯಾಧಿಕಾರಿ ಸೇರಿದಂತೆ ಕೆಲ ಅಧಿಕಾರಿ, ಸಿಬ್ಬಂದಿಯ ಅನುಪಸ್ಥಿತಿ ಕಂಡು ಗರಂ ಆದ ಘಟನೆ ನಡೆಯಿತು. ತಮ್ಮ ಭೇಟಿ ಕುರಿತು ಗೌಪ್ಯತೆ ಕಾಯ್ದುಕೊಂಡಿದ್ದ ಶಾಸಕ ಮಾನೆ, ನೇರವಾಗಿ ಆಗಮಿಸಿ ಸಿಬ್ಬಂದಿ ಹಾಜರಿ ಪುಸ್ತಕದ ಮೇಲೆ ಕಣ್ಣಾಡಿಸಿದರು. ಕಚೇರಿ ಸಮಯ ಆರಂಭವಾದರೂ ಆಗಮಿಸದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾಹಿತಿ ಪಡೆದು ತಕ್ಷಣವೇ ನೋಟಿಸ್‌ ನೀಡುವಂತೆ ಕಚೇರಿ ವ್ಯವಸ್ಥಾಪಕಿ ಎನ್‌.ಎಸ್‌. ನಾಗನೂರ ಅವರಿಗೆ ಸೂಚಿಸಿದರು.

\ಹಾನಗಲ್ಲ: ಮಳೆಯಲ್ಲೇ ಗ್ರಾಮ ಸಂಚಾರ ಕೈಗೊಂಡ ಶಾಸಕ ಮಾನೆ

ಸರ್ಕಾರದ ನಿಯಮಾವಳಿ ಪ್ರಕಾರ ಮುಖ್ಯಾಧಿಕಾರಿ ನಗರದಲ್ಲೇ ವಾಸವಿದ್ದು ನಿವಾಸಿಗಳ ಆಗು- ಹೋಗುಗಳಿಗೆ ಸ್ಪಂದಿಸುವುದು ಕಡ್ಡಾಯ. ನಿರ್ಲಕ್ಷ್ಯ ವಹಿಸಿದರೆ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಧಿಕಾರಿಗಳು, ಸಿಬ್ಬಂದಿ ರಜಾದಿನ ಹೊರತು ಪಡಿಸಿ ನಿರ್ದಿಷ್ಟಸಮಯ ನಿಗದಿ ಪಡಿಸಿ ಆ ವೇಳೆ ಕಚೇರಿಯಲ್ಲಿ ಸಾರ್ವಜನಿಕರ ಭೇಟಿಗೆ ಲಭ್ಯವಾಗಬೇಕು. ದೂರು- ದುಮ್ಮಾನ ಹೊತ್ತು ಬರುವ ನಿವಾಸಿಗಳನ್ನು ಅನವಶ್ಯಕವಾಗಿ ಅಲೆದಾಡಿಸಿದರೆ ಸುಮ್ಮನಿರುವುದಿಲ್ಲ ಎಂದು ತಾಕೀತು ಮಾಡಿದರು.

ಬೆಳಗ್ಗೆ ಕಚೇರಿಯಲ್ಲಿದ್ದು ಸಾರ್ವಜನಿಕ ಸಂಪರ್ಕಕ್ಕೆ ಲಭ್ಯವಿರಬೇಕು. ಕಚೇರಿ ಹೊರಗಿನ ಕೆಲಸ-ಕಾರ್ಯಗಳಿಗೆ ಮಧ್ಯಾಹ್ನ ಸಮಯ ನಿಗದಿ ಪಡಿಸಿಕೊಳ್ಳಬೇಕು. ಈಗಾಗಲೇ ಈ ಕುರಿತು ಅಧಿಕಾರಿಗಳಿಗೆ ಹಲವು ಬಾರಿ ಸೂಚನೆ ನೀಡಲಾಗಿದ್ದು, ಜವಾಬ್ದಾರಿ ತೋರದವರ ವಿರುದ್ಧ ಕ್ರಮ ಜರುಗಿಸಲು ಹಿಂದೆ-ಮುಂದೆ ನೋಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

Hanagal: ನನ್ನ ಸ್ಪೀಡ್‌ಗೆ ನೀವೆಲ್ಲ ಅಡ್ಜೆಸ್ಟ್‌ ಆಗಬೇಕು: ಶಾಸಕ ಮಾನೆ

ಕರ್ತವ್ಯ ಪಾಲನೆಗೆ ನಿರ್ಲಕ್ಷ್ಯ ವಹಿಸುವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪುರಸಭೆ ಅಧ್ಯಕ್ಷ ಅನಂತವಿಕಾಸ ನಿಂಗೋಜಿ ಮೊದಲಾದವರು ಈ ಸಂದರ್ಭದಲ್ಲಿದ್ದರು.

Follow Us:
Download App:
  • android
  • ios