ಕುಪ್ಪಳ್ಳಿಯಲ್ಲಿ ಸರ್ಕಾರ ಸ್ಥಾಪಿಸಿರುವ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಹಂಪನಾ ಖ್ಯಾತಿಯ ಹಂಪ ನಾಗರಾಜಯ್ಯ ರಾಜೀನಾಮೆ ನೀಡಿದ್ದಾರೆ.
ಬೆಂಗಳೂರು (ಮೇ 30): ರಾಷ್ಟ್ರಕವಿ ಕುವೆಂಪು ಅವಹೇಳನ ಮಾಡಿರುವ ರೋಹಿತ್ ಚಕ್ರತೀರ್ಥ (Rohith Chakrathirtha) ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಡೆಯುತ್ತಿರುವ ಹೊರಾಟ ಮಹತ್ವದ ತಿರುವು ಪಡೆದುಕೊಂಡಿದೆ. ರೋಹಿತ್ ಚಕ್ರತೀರ್ಥ ವಿರುದ್ಧ ಸಾಹಿತಿ, ಚಿಂತಕರ ಪತ್ರ ಸಮರ ಈಗ ರಾಜೀನಾಮೆ ಪರ್ವಕ್ಕೆ ನಾಂದಿ ಹಾಡುವ ಲಕ್ಷಣವಿದೆ. ಕುಪ್ಪಳ್ಳಿಯಲ್ಲಿ ಸರ್ಕಾರ ಸ್ಥಾಪಿಸಿರುವ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಹಂಪನಾ ಖ್ಯಾತಿಯ ಹಂಪ ನಾಗರಾಜಯ್ಯ (Hampa Nagarajaiah) ರಾಜೀನಾಮೆ ನೀಡಿದ್ದಾರೆ.
"ರಾಷ್ಟ್ರಕವಿ ಕುವೆಂಪು ಅವರಿಗೆ ಆಗುತ್ತಿರುವ ಅವಮಾನವನ್ನು ನೋಡುತ್ತಾ ಸುಮ್ಮನೆ ಕೂರಲಾಗದು. ರಾಷ್ಟ್ರಕವಿಗಳಿಗೆ ಅವಮಾನ ಮಾಡಿದವರಿಗೆ ಸರ್ಕಾರ ಮಹತ್ವದ ಸ್ಥಾನಗಳನ್ನು ನೀಡಬಾರದು. ಕುವೆಂಪು ಅವರಿಗೆ ಅವಮಾನ ಮಾಡಿದವರ ಮೇಲೆ ಕ್ರಮ ಜರುಗಿಸಬೇಕು. ಇಲ್ಲವೇ ತಮ್ಮ ರಾಜೀನಾಮೆ ಅಂಗೀಕರಿಸಬೇಕು ಎಂದು ಸಿಎಂಗೆ ರವಾನಿಸಿರುವ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಷ್ಟ್ರಕವಿ ಕುವೆಂಪು ರವರನ್ನು ನಿಂದಿಸಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸದ ರಾಜ್ಯ ಸರ್ಕಾರದ ನಡೆ ಖಂಡಿಸಿ " ಕುವೆಂಪು ಪ್ರತಿಷ್ಠಾನದ" ಅಧ್ಯಕ್ಷ ಸ್ಥಾನಕ್ಕೆ ಹಂಪ ನಾಗರಾಜಯ್ಯ ರಾಜೀನಾಮೆ ಸಲ್ಲಿಸಿದ್ದಾರೆ. "ರಾಷ್ಟ್ರಕವಿಗಳಿಗೆ ಆಗುತ್ತಿರುವ ಅವಮಾನ ನೋಡುತ್ತಾ ಸುಮ್ಮನೆ ಕೂರಲಾಗದು, ಸರ್ಕಾರ ಇಂತಹವರನ್ನ ಪುರಸ್ಕರಿಸುವುದನ್ನು ಸಹಿಸಲಾಗದು" ಎಂದು ಹಂಪನಾ ಹೇಳಿದ್ದಾರೆ. ಕೂಡಲೇ ಮುಖ್ಯಮಂತ್ರಿಗಳು ತಮ್ಮ ರಾಜೀನಾಮೆ ಅಂಗೀಕರಿಸಬೇಕು ಎಂದು ಸಿಎಂಗೆ ಹಂಪನಾ ಪತ್ರ ರವಾನಿಸಿದ್ದಾರೆ.
ಇದನ್ನೂ ಓದಿ:Textbook Controversy: ಪಠ್ಯ ಪರಿಷ್ಕರಣೆಗೆ ಹೆಚ್ಚಾಗುತ್ತಿದೆ ವಿರೋಧದ ಕೂಗು!
ರೋಹಿತ್ ಚಕ್ರತಿರ್ಥ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ: "ಇನ್ನು ರೋಹಿತ್ ಚಕ್ರತಿರ್ಥ ಬಂಧನಕ್ಕೆ ಆಗ್ರಹಿಸಿ ಸಿಟಿ ಸಿವಿಲ್ ಕೋರ್ಟ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಮಕ್ಕಳ ಮೇಲೆ ಕೋಮುವಾದಿಕರಣ , ಬ್ರಾಹ್ಮಣಿಕರಣ ಹೇರಿಕೆಗೆ ವಿರೋಧೀಸಿ ಹಾಗೂ ನಾಡಿನ ಸಾಹಿತಿಗಳನ್ನು ಬುದ್ದಿ ಜೀವಿಗಳನ್ನು ಅವಮಾನ ಮಾಡಿರುವ ಚಕ್ರತೀರ್ಥರನ್ನು ಬಂದಿಸಿ ಎಂದು ಆಗ್ರಹಸಿದ್ದಾರೆ.
ವಕೀಲರ ಸಂಘಟನೆ ಮಾಜಿ ಅಧ್ಯಕ್ಷ ರಂಗನಾಥ್ ನೇತೃತ್ವದ ಪ್ರತಿಭಟನೆ ನಡೆದಿದ್ದು, ಪ್ರತಿಭಟನೆಯಲ್ಲಿ ದಲಿತ ಸಮಿತಿ ಮಾಜಿ ಅಧ್ಯಕ್ಷ ಸಿಎಸ್ ದ್ವಾರಕನಾಥ್ ಭಾಗವಹಿಸಿದ್ದಾರೆ.
ಭಗತ್ ಸಿಂಗ್ ಪಠ್ಯ ಕ್ರಮ ಪುಸ್ತಕದಲ್ಲಿ ಇರುವಂತೆ ಹಾಗೂ ಕುವೆಂಪು ಅವರ ಪಠ್ಯಕ್ರಮ ತೆಗೆಯದಂತೆ ಆಗ್ರಹಿಸಿದ್ದಾರೆ. ಅಲ್ಲದೇ ಬರಗೂರು ರಾಮಚಂದ್ರಪ್ಪ ಅವರ ಪರಿಷ್ಕೃತ ಪಠ್ಯ ಪುಸ್ತಕ ಜಾರಿಗೆ ತರುವಂತೆ ಆಗ್ರಹಸಿದ್ದಾರೆ. ಕನ್ನಡ ಚಳುವಳಿಗಾರು, ವಕೀಲರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ನಾಡಗೀತೆ ತಿರುಚಿದ ಬಗ್ಗೆ ಪತ್ರ ಗಂಭೀರವಾಗಿ ಪರಿಗಣನೆ: ಸಿಎಂ
