ಶಿವಮೊಗ್ಗ ಜಿಲ್ಲೆಯಲ್ಲಿ ಮಧ್ಯಾಹ್ನ ಲಾಕ್‌ಡೌನ್ ಮುಂದುವರಿಕೆ

ಜಿಲ್ಲೆಯಲ್ಲಿ ಯಥಾ ಪ್ರಕಾರ ಮಧ್ಯಾಹ್ನ 2ರ ಬಳಿಕ ಲಾಕ್‌ಡೌನ್‌ ಮುಂದುವರಿಯಲಿದೆ. ಹಾಗೆಯೇ 28ಕ್ಕೂ ಹೆಚ್ಚು ಸೀಲ್‌ಡೌನ್‌ ಪ್ರದೇಶವನ್ನು ಒಂದೇ ಕಂಟೈನ್ಮೆಂಟ್‌ ವಲಯ ಎಂದು ಪರಿಗಣಿಸಿ ಇಡೀ ಹಳೆ ಶಿವಮೊಗ್ಗ ಭಾಗವನ್ನು ಜುಲೈ 23ರ ಬೆಳಗ್ಗೆಯಿಂದ ಸೀಲ್‌ಡೌನ್‌ ಮಾಡಲು ತೀರ್ಮಾನಿಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

half day Lockdown will Continues in Shivamogga Says District Minister KS Eshwarappa

ಶಿವಮೊಗ್ಗ(ಜು.22): ಸಭೆ ಸೇರಿ ಮುಂದಿನ ನಿರ್ಣಯ ಕೈಗೊಳ್ಳುವವರೆಗೂ ಮಧ್ಯಾಹ್ನ ಬಳಿಕದ ಲಾಕ್‌ಡೌನ್‌ ಜಿಲ್ಲೆಯಲ್ಲಿ ಜಾರಿಯಲ್ಲಿರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೆ ಶಿವಮೊಗ್ಗ ಭಾಗವನ್ನು ಕಂಟೈನ್ಮೆಂಟ್‌ ವಲಯ ಎಂದು ಘೋಷಿಸಿರುವ ಪಾಲಿಕೆ ಆಯುಕ್ತರ ಆದೇಶವೂ ನಿಗ​ದಿಯಂತೆ ಜುಲೈ 23ರಿಂದಲೇ ಜಾರಿಗೆ ಬರಲಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಯಥಾ ಪ್ರಕಾರ ಮಧ್ಯಾಹ್ನ 2ರ ಬಳಿಕ ಲಾಕ್‌ಡೌನ್‌ ಮುಂದುವರಿಯಲಿದೆ. ಹಾಗೆಯೇ 28ಕ್ಕೂ ಹೆಚ್ಚು ಸೀಲ್‌ಡೌನ್‌ ಪ್ರದೇಶವನ್ನು ಒಂದೇ ಕಂಟೈನ್ಮೆಂಟ್‌ ವಲಯ ಎಂದು ಪರಿಗಣಿಸಿ ಇಡೀ ಹಳೆ ಶಿವಮೊಗ್ಗ ಭಾಗವನ್ನು ಜುಲೈ 23ರ ಬೆಳಗ್ಗೆಯಿಂದ ಸೀಲ್‌ಡೌನ್‌ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಪರಿಸ್ಥಿತಿ ಕೈ ಮೀರಿ ಹೋಗಿಲ್ಲ. ಹಾಗೆಯೇ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಲ್ಲಿ ಮಧ್ಯಾಹ್ನದ ನಂತರ ಲಾಕ್‌ಡೌನ್‌ ಮಾಡುತ್ತಿದ್ದರೂ ಕೊರೋನಾ ಸಂಪೂರ್ಣ ನಿಯಂತ್ರಣಕ್ಕೂ ಬಂದಿಲ್ಲ. ಹೀಗಾಗಿ ಮುಂದಿನ ತೀರ್ಮಾನದವರೆಗೂ ಜಿಲ್ಲೆಯಲ್ಲಿ ಲಾಕ್‌ಡೌನ್‌ ಮುಂದುವರಿಸಲು ನಿರ್ಧರಿಸಲಾಗಿದೆ ಎಂದರು.

ದಿನಕ್ಕೆ ಕನಿಷ್ಠ 10 ಸಾವಿರ ಸೋಂಕು ಪರೀಕ್ಷೆ ನಡೆಸಿ: ಕೊರೋನಾ ಕಾರ್ಯಪಡೆ ಸಲಹೆ

ಮಂಗಳವಾರ(ಜು.21) ಶಿವಮೊಗ್ಗದಲ್ಲಿ ಹೊಸದಾಗಿ 64 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದವು. ಇನ್ನು ಎರಡು ಮಂದಿಯನ್ನು ಕೋವಿಡ್ 19 ಹೆಮ್ಮಾರಿ ಬಲಿ ಪಡೆದಿದೆ. ಇದರ ಬೆನ್ನಲ್ಲೇ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.
 

Latest Videos
Follow Us:
Download App:
  • android
  • ios