Asianet Suvarna News Asianet Suvarna News

ಯಾವುದೇ ನೆರೆರಾಜ್ಯದ ಭಾಷೆ ಪ್ರಭಾವಕ್ಕೊಳಗಾಗದ ಅಚ್ಚುಕನ್ನಡ ನಾಡು, ಕನ್ನಡದ ಗಟ್ಟಿಬೀಡು ಕೊಪ್ಪಳ: ಹಾಲಪ್ಪ ಆಚಾರ್

ರಾಯಚೂರು ಕಡೆ ಹೋದರೆ ಆಂಧ್ರ, ಬೆಳಗಾವಿ ಕಡೆ ಮಹಾರಾಷ್ಟ್ರ, ಬೆಂಗಳೂರು, ಮೈಸೂರು ಕಡೆ ತಮಿಳರ ಪ್ರಭಾವ ಹೆಚ್ಚಿದ್ದು, ಕೊಪ್ಪಳ ಮಾತ್ರ ಯಾವುದೇ ಭಾಷೆಯವರ ಪ್ರಭಾವಕ್ಕೆ ಒಳಗಾಗಿಲ್ಲ. ಜಿಲ್ಲೆ ಅಚ್ಚುಕನ್ನಡ ನಾಡು, ಕನ್ನಡದ ಗಟ್ಟಿಬೀಡು ಕೊಪ್ಪಳ ಜಿಲ್ಲೆ ಎಂದು ಸಚಿವ ಹಾಲಪ್ಪ ಆಚಾರ ಬಣ್ಣಿಸಿದರು.

Halappa achar speech at 2nd Taluk Kannada Literature Conference Koppal  rav
Author
First Published Mar 24, 2023, 10:50 AM IST

ಅಮರೇಶ್ವರಸ್ವಾಮಿ ಕಂದಗಲ್ಲಮಠ

 ಕುಕನೂರು (ಮಾ.24) L ರಾಯಚೂರು ಕಡೆ ಹೋದರೆ ಆಂಧ್ರ, ಬೆಳಗಾವಿ ಕಡೆ ಮಹಾರಾಷ್ಟ್ರ, ಬೆಂಗಳೂರು, ಮೈಸೂರು ಕಡೆ ತಮಿಳರ ಪ್ರಭಾವ ಹೆಚ್ಚಿದ್ದು, ಕೊಪ್ಪಳ ಮಾತ್ರ ಯಾವುದೇ ಭಾಷೆಯವರ ಪ್ರಭಾವಕ್ಕೆ ಒಳಗಾಗಿಲ್ಲ. ಜಿಲ್ಲೆ ಅಚ್ಚುಕನ್ನಡ ನಾಡು, ಕನ್ನಡದ ಗಟ್ಟಿಬೀಡು ಕೊಪ್ಪಳ ಜಿಲ್ಲೆ ಎಂದು ಸಚಿವ ಹಾಲಪ್ಪ(Halappa Achar) ಆಚಾರ ಬಣ್ಣಿಸಿದರು.

ತಾಲೂಕಿನ ರಾಜೂರು ಗ್ರಾಮದ ಶ್ರೀಲಿಂ.ಶ್ರೀಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಮಹಾವೇದಿಕೆಯಲ್ಲಿ ಗುರುವಾರ ತಾಲೂಕು ಕಸಾಪ ವತಿಯಿಂದ ಜರುಗಿದ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನ(Kannada literature convention)ದಲ್ಲಿ ದಿಕ್ಸೂಚಿ ನುಡಿಗಳನ್ನಾಡಿದ ಅವರು, ರಾಜೂರು ಪುಣ್ಯಭೂಮಿ,ಇಲ್ಲಿ ಸಮ್ಮೇಳನ ಜರುಗುತ್ತಿರುವುದು ಹೆಮ್ಮೆ ಸಂಗತಿ ಎಂದರು.

ಕಾಂಗ್ರೆಸ್‌ ಆಡಳಿತ ದೇಶಕ್ಕೆ ಮಾರಕ: ಸಚಿವ ಹಾಲಪ್ಪ ಆಚಾರ್‌

ಇಂಗ್ಲಿಷ್‌ಗೆ ಹೆಚ್ಚು ಒತ್ತು ಕೊಟ್ಟು ಕನ್ನಡ ಮರೆಯುವ ಸ್ಥಿತಿ ಬಂದಿದೆ. ಮಾತೃ ಭಾಷೆ ಉಳಿಸುವ ಕಾರ್ಯ ಮಾಡದೆ ಇದ್ದರೆ ಹೆತ್ತ ತಂದೆ ತಾಯಿಗೆ ಅವಮಾನಿಸಿದಂತೆ. ಹೆತ್ತವರನ್ನು ಗೌರವಿಸಿದಂತೆ ಕನ್ನಡ ಭಾಷೆ ಗೌರವಿಸಬೇಕು. ಕನ್ನಡ ಆಡು ಭಾಷೆಯಾಗಿ ಉಳಿಯುವ ಆತಂಕ ಸಹ ಹೆಚ್ಚಾಗಿದೆ. ಅದರ ಬಗ್ಗೆ ಪ್ರತಿಯೊಬ್ಬರೂ ಚಿಂತನೆ ಮಾಡಬೇಕು. ತಾಲೂಕಿನ ಚನ್ನಕವಿ, ಕಲ್ಲಿನಾಥ ಶಾಸ್ತ್ರೀ, ಸಿದ್ದಯ್ಯ ಪುರಾಣಿಕ, ನಿಜಲಿಂಗಯ್ಯ ಹಿರೇಮಠ, ಬಸವರಾಜ ಬಿನ್ನಾಳ, ಬಿ.ವಿ.ಶಿರೂರು, ರಂ.ರಾ. ನಿಡಗುಂದಿ, ಡಾ. ಬಸವರಾಜ ಸಬರದ, ಎ.ಪಿ ಮೂಧೋಳ, ಆರ್‌.ಪಿ.ರಾಜೂರು, ಮುನಿಯಪ್ಪ ಹುಬ್ಬಳ್ಳಿ, ಫಕೀರಪ್ಪ ವಜ್ರಬಂಡಿ, ಹನುಂತರಾವ್‌, ಲಕ್ಷ್ಮವ ಹರಿಜನ, ಚುಟ್ಟವ್ವ ಹರಿಜನ ಸಾಹಿತ್ಯ ಕ್ಷೇತ್ರವನ್ನು ಸಮೃದ್ಧಗೊಳಿಸಿದ್ದಾರೆ. ಶಾಸಕರಾಗಿದ್ದ ಆಡೂರಿನ ದಿ.ಶಿರೂರು ವೀರಭದ್ರಪ್ಪ ಅವರು ಅತ್ಯಂತ ಪ್ರಾಮಾಣಿಕ ಶಾಸಕರಾಗಿದ್ದರು. ಅವರಂಥ ವ್ಯಕ್ತಿ ಸಿಗುವುದು ದುರ್ಲಭ ಎಂದು ಶ್ಲಾಘಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್‌ಪಾಟೀಲ, ಕನ್ನಡ ಅಸ್ಮಿತೆ ಬಗ್ಗೆ ಚಿಂತನೆ ಆಗಬೇಕಿದೆ. ಕಸಾಪ ಕನ್ನಡಿಗರ ಪ್ರಾತಿನಿತ್ಯ ಸಂಸ್ಥೆ ಆಗಿದೆ. ಕೇಂದ್ರ ಸಾಹಿತ್ಯ ಪರಿಷತ್‌ ಸಬಲೀಕರಣ ಆಗಬೇಕಿದೆ. ರಾಜ್ಯ ಸಾಹಿತ್ಯ ಪರಿಷತ್ತಿನಲ್ಲಿ ವರ್ಷದೊಳಗೆ ಲಕ್ಷ ಅಜೀವ ಸದಸ್ಯತ್ವ ಹೊಂದುವ ಉದ್ದೇಶ ಕಸಾಪ ಹೊಂದಿದೆ. ಕನ್ನಡಕ್ಕೆ ಎರಡು ಸಾವಿರ ಇತಿಹಾಸ ಇದೆ. ಕನ್ನಡ ಭಾಷೆಯ ಸದೃಢತೆಯಿಂದ, ವಿಶಾಲತೆಯಿಂದ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಕನ್ನಡದಲ್ಲಿ ಸಾಹಿತ್ಯ ಕೃಷಿ ಅಪಾರ ಆಗಿದೆ.ಭಾಷೆ ಉಳಿಸುವ ಸಮೃದ್ಧ ಕೆಲಸ ಆಗಬೇಕು. ಆಂಗ್ಲ ವ್ಯಾಮೋಹ ಮಾತ್ರವಲ್ಲದೆ, ಆಂಗ್ಲ ಭಾಷೆಯನ್ನು ಕನ್ನಡದಲ್ಲಿ ವಿಲಿನ ಮಾಡಿಕೊಂಡು ಮಾತನಾಡುವ ಕನಿಷ್ಠತೆಗೆæ ಹೋಗಿದ್ದೇವೆ. ಭಾಷೆ ಹೃದಯದ ಭಾಷೆ ಆಗಬೇಕಿದೆ. ಕನ್ನಡಭಾಷೆ ವಿಶ್ವ ಸಮ್ಮೇಳನ ಭಾಷೆ ಆಗಬೇಕಿದೆ ಎಂದರು.

ಹಿರಿಯ ಸಾಹಿತಿ ಬಸವರಾಜ ಬಿನ್ನಾಳ ಅವರ ಶ್ರೀಚನ್ನವೀರ ಶರಣರ ಮಹಾತ್ಮೆ ಕೃತಿ ಹಾಗು ಸಮ್ಮೇಳನಾಧ್ಯಕ್ಷ ನುಡಿಯನ್ನು ಹಿರಿಯ ಸಾಹಿತಿ ಡಾ. ಕೆ.ಬಿ ಬ್ಯಾಳಿ ಬಿಡುಗಡೆಗೊಳಿ ಮಾತನಾಡಿ,ಆರ್‌.ಪಿ ರಾಜೂರು ಅವರು ತತ್ವಪದಕಾರರು. ತತ್ವಪದ ಸಾಹಿತ್ಯ ಜನರ ಬದುಕಿಗೆ ದಾರಿದೀಪ. ಆ ನಿಟ್ಟಿನಲ್ಲಿ ಆರ್‌.ಪಿ ರಾಜೂರು ಅವರ ಸಾಹಿತ್ಯ ಜನಮಾನಸದಲ್ಲಿ ಬೇರೂರಿದೆ ಎಂದರು.

 

ಮೋದಿ, ಬೊಮ್ಮಾಯಿ ಆಡಳಿತದಿಂದ ರಾಜ್ಯದಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ ಖಚಿತ: ಸಚಿವ ಹಾಲಪ್ಪ ಆಚಾರ್‌

ಉದ್ಘಾಟಕರಾದ ಬಿ.ವಿ ಶಿರೂರು, ಸರ್ವಾಧ್ಯಕ್ಷ ಆರ್‌.ಪಿ ರಾಜೂರು, ಶ್ರೀಅಭಿನವ ಪಂಚಾಕ್ಷರ ಶಿವಾಚಾರ್ಯರು, ಡಾ.ಕೆ.ಬಿ ಬ್ಯಾಳಿ, ನಬಿಸಾಬ್‌ ಕುಷ್ಟಗಿ, ಕಸಾಪ ತಾಲೂಕಾಧ್ಯಕ್ಷ ಕಳಕಪ್ಪ ಕುಂಬಾರ, ದತ್ತಿದಾನಿ ಶರಣಪ್ಪ ರುದ್ರಪ್ಪ ಅಂಗಡಿ, ಗ್ರಾಪಂ ಅಧ್ಯೆಕ್ಷೆ ರತ್ನಮ್ಮ ಆಡೂರು, ವೀರಣ್ಣ ನಿಂಗೋಜಿ, ಲಕ್ಷ್ಮಣ ಹಿರೇಮನಿ, ಎ.ಪಿ ಮೂಧೋಳ, ವೀರಣ್ಣ ಅಣ್ಣಿಗೇರಿ, ಬಸನಗೌಡ ತೊಂಡಿಹಾಳ, ರಾಮಣ್ಣ ಭಜಂತ್ರಿ, ಶಿವಕುಮಾರ ನಾಗಲಾಪೂರಮಠ, ಅರವಿಂದಗೌಡ, ಬಸವರಾಜ ಬಿನ್ನಾಳ, ಮಹೇಶ ಸಬರದ, ಎಂ.ಬಿ. ಅಳವಂಡಿ, ವಿ.ಎಸ್‌ ಬೆಣಕಲ್ಲ, ಮಾರುತಿ ತಳವಾರ, ಬಸವರಾಜ ಮೇಟಿ, ಫೀರಸಾಬ್‌ ದಫೇದಾರ್‌, ನಾಗರಾಜ ಬೆಣಕಲ್ಲ, ಗ್ರಾಪಂ ಉಪಾಧ್ಯಕ್ಷೆ ಹುಲ್ಲಮ್ಮ ಹಿರೇಮನಿ, ಗ್ರಾಪಂ ಸದಸ್ಯರಾದ ಶಾಂತಮ್ಮ, ಬಸವರೆಡ್ಡಿ ಬೀಡಿನಾಳ, ಕೃಷ್ಣಾ, ರಮೇಶ ಕುಲಕರ್ಣಿ, ಎಸ್‌.ಎಸ್‌ ಕೊಪ್ಪದ, ನಿಂಗಪ್ಪ ಗೊರ್ಲೆಕೊಪ್ಪ, ಕೊಟ್ರಪ್ಪ ತೋಟದ, ಭೀಮರೆಡ್ಡಿ ಶ್ಯಾಡ್ಲಗೇರಿ, ಜಗದೀಶ ಚಟ್ಟಿ, ಉಮೇಶ ಕಂಬಳಿ, ಫಕೀರಸಾಬ್‌ ರಾಜೂರು, ಜಗದೀಶ ಬಡಿಗೇರ ಇತರರಿದ್ದರು.

Follow Us:
Download App:
  • android
  • ios