ಮಾಜಿ ಸ್ಪೀಕರ್‌ಗೆ ತಲೆ ಕೆಟ್ಟಿದೆ, ಒದ್ದು ಜೈಲಿಗೆ ಹಾಕಿ ಎಂದ ಹಳ್ಳಿಹಕ್ಕಿ
ರಮೇಶ್ ಕುಮಾರ್ ಒಬ್ಬ ಹುಚ್ಚ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೆ ತಲೆ ಕೆಟ್ಟಿದೆ ಎಂದು ಎಚ್. ವಿಶ್ವನಾಥ್ ತಿಳಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು(ಮಾ.10): ರಮೇಶ್ ಕುಮಾರ್ ಒಬ್ಬ ಹುಚ್ಚ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೆ ತಲೆ ಕೆಟ್ಟಿದೆ ಎಂದು ಎಚ್. ವಿಶ್ವನಾಥ್ ತಿಳಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಮೇಶ್ ಕುಮಾರ್ ಒಬ್ಬ ಹುಚ್ಚ. ಆತ ಆರೋಗ್ಯ ಮಂತ್ರಿ ಆಗಿದ್ದಾಗ ಯಶಸ್ವಿನಿ ಯೋಜನೆ ರದ್ದು ಮಾಡಿದ್ದಾನೆ. ಯಾವುದಾದರು ಸ್ಪೀಕರ್ ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿದ್ರೆ ಅದು ರಮೇಶ್ ಕುಮಾರ್. ಸಿದ್ದರಾಮಯ್ಯ ಕುಮ್ಮಕ್ಕಿನಿಂದ ಹಾಗೆ ನಡೆದುಕೊಂಡ್ರು ಎಂದಿದ್ದಾರೆ.
ಜೈಲಿಗೆ ಹೋದವ್ರ ಜೊತೆ ವೇದಿಕೆ ಹಂಚ್ಕೊಳಲ್ಲ: ಸಚಿವ ನಾರಾಯಣ ಗೌಡ
ರಾಜ್ಯದಲ್ಲಿ ರಾಕ್ಷಸ ರಾಜಕಾರಣ ಇದೆ. ಅದನ್ನ ವಿರೋಧಿಸಿ ರಾಜಿನಾಮೆ ನೀಡಿದ್ದೆ. ಕಾಂಗ್ರೆಸ್ ನವರು ಸಿಎಎ, ಶಾದಿ ಭಾಗ್ಯ ವಿಚಾರ ಇಟ್ಟಿಕೊಂಡು ರಾಜಕೀಯ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.
'ಒದ್ದು ಜೈಲಿಗೆ ಹಾಕಿ':
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೆ ತಲೆ ಕೆಟ್ಟಿದೆ. ದೇಶವೇ ಒಪ್ಪಿರುವ ಪ್ರಧಾನ ಮಂತ್ರಿಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ರಮೇಶ್ ಕುಮಾರ್‌ನನ್ನು ಒದ್ದು ಜೈಲಿಗೆ ಹಾಕಿ. ಆತ ದೇಶ ಒಡೆಯುವ ಹೇಳಿಕೆ ನೀಡಿ ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿದ್ದಾನೆ . ರಾಜ್ಯ ಸರ್ಕಾರ ಕೂಡಲೇ ಆತನ ಮೇಲೆ ಎಫ್. ಐ. ಆರ್ ದಾಖಲು ಮಾಡಬೇಕು ಎಂದಿದ್ದಾರೆ.
ಸತ್ಯದ ಸಾಕ್ಷಾತ್ಕಾರವನ್ನು ಮಾತಿನ ಚಮತ್ಕಾರದಿಂದ ಮುಚ್ಚುವ ಕೆಲಸ ಮಾಡ್ತಿದ್ದಾರೆ. ಬರಿ ಮುಸ್ಲಿಂರ ಕೇರಿಗಳಲ್ಲಿ ಮಾತ್ರ ಯಾಕೆ ಸಿಎಎ ಬಗ್ಗೆ ಭಾಷಣ ಮಾಡ್ತೀರಿ. ಈ ಮೂಲಕ ಮುಸ್ಲಿಂರನ್ನ ತಬ್ಬಲಿಗಳಾಗಿ ಮಾಡ್ತಿದ್ದೀರಿ. ಹಿಂದೂ ಕೇರಿಗಳಲ್ಲಿ ಯಾಕೆ ಸಿಎಎ ಬಗ್ಗೆ ಭಾಷಣ ಮಾಡ್ತಿಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.