ಜೈಲಿಗೆ ಹೋದವ್ರ ಜೊತೆ ವೇದಿಕೆ ಹಂಚ್ಕೊಳಲ್ಲ: ಸಚಿವ ನಾರಾಯಣ ಗೌಡ
ಜೈಲಿಗೆ ಹೋಗಿ ಬಂದವ್ರ ಜೊತೆ ವೇದಿಕೆ ಹಂಚಿಕೊಳ್ಳಲ್ಲ. ಕಳ್ಳರು, ಕಾಕರು, ಜೈಲಿಗೆ ಹೋದವರನ್ನು ಕರೆದ್ರೆ ಏನಪ್ಪ ಅರ್ಥ..? ಎಂದು ಸಚಿವ ಕೆ. ಸಿ. ನಾರಾಯಣ ಗೌಡ ಮಂಡ್ಯದಲ್ಲಿ ಪ್ರಶ್ನಿಸಿದ್ದಾರೆ.
ಮಂಡ್ಯ(ಮಾ.10): ಜೈಲಿಗೆ ಹೋಗಿ ಬಂದವ್ರ ಜೊತೆ ವೇದಿಕೆ ಹಂಚಿಕೊಳ್ಳಲ್ಲ. ಕಳ್ಳರು, ಕಾಕರು, ಜೈಲಿಗೆ ಹೋದವರನ್ನು ಕರೆದ್ರೆ ಏನಪ್ಪ ಅರ್ಥ..? ಎಂದು ಸಚಿವ ಕೆ. ಸಿ. ನಾರಾಯಣ ಗೌಡ ಮಂಡ್ಯದಲ್ಲಿ ಪ್ರಶ್ನಿಸಿದ್ದಾರೆ.
ಸಚಿವ ನಾರಾಯಣಗೌಡ ಹೊಸ ವರಸೆ ಆರಂಭಿಸಿದ್ದು ಜೈಲಿಗೆ ಹೋದವರ ಜೊತೆ ವೇದಿಕೆ ಹಂಚಿಕೊಳ್ಳಲ್ಲ ಎಂದಿದ್ದಾರೆ. ಸಚಿವ ನಾರಾಯಣಗೌಡ ಕೆ.ಆರ್. ಪೇಟೆ ಮಡಿವಾಳ ಜನಾಂಗದ ತಾಲೂಕು ಅಧ್ಯಕ್ಷನಿಗೆ ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೆಜಿಗೆ 60 ರೂಪಾಯಿಗಿಳಿದ ಕೋಳಿ ಬೆಲೆ, ಕುರಿ ಮಾಂಸಕ್ಕೆ ಭಾರೀ ಬೇಡಿಕೆ
ನಾರಾಯಣಗೌಡರನ್ನ ಅಭಿನಂಧಿಸಲು ಮನೆಗೆ ಬಂದಿದ್ದ ತಾಲೂಕು ಅಧ್ಯಕ್ಷ ಸಿದ್ದೇಶ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಮುದಾಯದ ಗೌರವ ಕಳೆಯುವ ಹಾಗೆ ಮಾಡಬೇಡಿ. ನನ್ನ ಚೀಫ್ ಗೆಸ್ಟ್ ಆಗಿ ಹಾಕೊಂಡು ಎಲ್ಲರನ್ನೂ ವೇದಿಕೆಗೆ ಹತ್ತಿಸಿದ್ರೆ ಗೌರವ ಇರುತ್ತಾ..? ಕಳ್ಳರು, ಕಾಕರು, ಜೈಲಿಗೆ ಹೋದವರನ್ನು ಕರೆದ್ರೆ ಏನಪ್ಪ ಅರ್ಥ ಎಂದು ಪ್ರಶ್ನಿಸಿದ್ದಾರೆ.
ನೀನು ಕಾರ್ಯಕ್ರಮ ಮಾಡೋದಾದ್ರೆ ಮಾಡ್ಕೊ ನನ್ನದೇನು ಅಭ್ಯಂತರವಿಲ್ಲ. ಸಮುದಾಯ ನನ್ ಜೊತೆ ಇದೆ. ಸಮುದಾಯದ ಬಗೆಗೆ ನನಗೆ ಗೌರವನೂ ಇದೆ. ನೀನು ಅಧ್ಯಕ್ಷನಾಗಿದ್ದೀಯಾ, ರಾಜಕೀಯ ಮಾಡದಾದ್ರೆ ಬೇರೆ ವೇದಿಕೆಯಲ್ಲಿ ಮಾಡ್ಕೊ. ಬೇರೆ ರೀತಿಯಲ್ಲಿ ಮಾಡು. ಕಳ್ಳರು,ಕಾಕರು ಜೈಲಿಗೆ ಹೋಗಿರುವವರು ನಾನಿರೊ ವೇದಿಕೆಗೆ ಬಂದ್ರೆ ತಪ್ಪಾಗಲ್ವಾ ಎಂದಿದ್ದಾರೆ.
ಪ್ರೇಮಿಗಳಿಗೆ ಸಹಾಯ ಮಾಡಿದ್ದನೆಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಜೈಲಿಗೆ ಹೋದವರನ್ನೆಲ್ಲ ವೇದಿಕೆಗೆ ಹತ್ತಿಸಿದ್ರೆ ಅದ್ಕೆ ಏನರ್ಥ ಎಂದು ತರಾಟೆಗೆ ತೆಗೆದುಕೊಂಡಿದ್ದು, ಫೆ.28 ರಂದು ಕೆಆರ್‌ಪೇಟೆಯಲ್ಲಿ ಮಡಿವಾಳ ಮಾಚಿದೇವರ ಜಯಂತಿ ನಡೆದಿತ್ತು. ಜಯಂತಿಯಲ್ಲಿ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಪ್ರಕಾಶ್ ಜೆಡಿಎಸ್ ಮುಖಂಡ ದೇವರಾಜು ಹಾಗು ಇತರರು ಪಾಲ್ಗೊಂಡಿದ್ದರು.
ಆ ಕಾರ್ಯಕ್ರಮ ಕುರಿತು ಪ್ರಸ್ತಾಪ ಮಾಡಿದ ನಾರಾಯಣಗೌಡ, ಅಂದು ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡ ಪತ್ನಿ ದೇವಕಿ ಹೊರತು ಪಡಿಸಿ ಉಳಿದವರೆಲ್ಲರೂ ನಾರಾಯಣಗೌಡ ವಿರೋಧಿಗಳು. ತಮ್ಮ ವಿರೋಧಿಗಳನ್ನ ಕಳ್ಳರು, ಕಾಕರು, ಜೈಲಿಗೆ ಹೋದವರೆಂದು ಹೇಳೊ ಮೂಲಕ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ.
#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"