ಮೈಸೂರು (ಅ.22): ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬುದು ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರ ಅವರ ವೈಯಕ್ತಿಕ ಹೇಳಿಕೆ. ಈ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆಯಾಗಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಹೇಳಿದ್ದಾರೆ. 

ಮೈಸೂರಿನಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ವಿಚಾರ ಎಲ್ಲಿಯೂ ಪ್ರಸ್ತಾಪವಾಗಿಲ್ಲ. 

RR ನಗರ ಉಪಚುನಾವಣೆ: ಮುನಿರಾಜುಗೆ ಮುನಿರತ್ನ ಗೆಲ್ಲಿಸುವ ಉಸ್ತುವಾರಿ

ನೂರಕ್ಕೆ ನೂರು ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆಯ ವಿಷಯ ಇಲ್ಲ. ಯತ್ನಾಳ್‌ ಅವರ ಅನಿಸಿಕೆ, ಬಿಜೆಪಿಯವರ ಅನಿಸಿಕೆಯಲ್ಲ. 

ಪಕ್ಷದ ನಿರ್ಧಾರಗಳೇ ಬೇರೆ, ವೈಯಕ್ತಿಕ ಅಭಿಪ್ರಾಯಗಳೇ ಬೇರೆ ಎಂದರು. ನಾನು ಬಾಂಬೆ ಡೇಸ್‌ ಪುಸ್ತಕ ಬರೆಯುತ್ತಿದ್ದೇನೆ. ಆದರೆ, ಸಿಎಂ ಯಡಿಯೂರಪ್ಪ ಅವರನ್ನು ಬ್ಲಾಕ್‌ ಮೇಲ್‌ ಮಾಡಲು ಬರೆಯುತ್ತಿದ್ದಾರೆ ಎಂದು ಯಾರೋ ಪಿಐಎಲ್‌ ಹಾಕಿದ್ದಾರೆ ಎಂದರು.