ಮೈಸೂರಿಗೆ ಬಸವರಾಜ ಎಸ್‌. ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಿಗದ ಸಚಿವ ಸ್ಥಾನ ರಾಜೀನಾಮೆ ನೀಡಿ ಅನರ್ಹಗೊಂಡಿದ್ದ ಎಚ್‌. ವಿಶ್ವನಾಥ್‌ಗೆ ಚುನಾವಣಾ ಸೋಲಿನ ಬಳಿಕ ಕೈ ಕೊಟ್ಟ ಅದೃಷ್ಟ  

 ಮೈಸೂರು (ಆ.05): ಒಂದು ಕಾಲಕ್ಕೆ ರಾಜ್ಯ ಸಚಿವ ಸಂಪುಟದಲ್ಲಿ ಅವಿಭಜಿತ ಮೈಸೂರು ಜಿಲ್ಲೆಗೆ ಸಿಂಹಪಾಲು. ಆದರೆ ಬಸವರಾಜ ಎಸ್‌. ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಯಾರೊಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. 

2019 ರಿಂದ ಎರಡು ವರ್ಷ ಅಧಿಕಾರ ನಡೆಸಿದ ಹಿಂದಿನ ಬಿ.ಎಸ್‌. ಯಡಿಯೂರಪ್ಪ ಸರ್ಕಾರದಲ್ಲಿ ಕೂಡ ಇದೇ ರೀತಿಯಾಗಿತ್ತು.

ಎಚ್‌. ವಿಶ್ವನಾಥ್‌ಗೆ ಸಂಕಟ 

ಕಳೆದ ವಿಧಾನಸಭಾ ಚುನಾವಣೆ ಕಾಲಕ್ಕೆ ಮೈಸೂರು ಜಿಲ್ಲೆಯ ಹುಣಸೂರಿನಿಂದ ಜೆಡಿಎಸ್‌ ಟಿಕೆಟ್‌ ಮೇಲೆ ಗೆದ್ದು, ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿದ್ದ ಎಚ್‌. ವಿಶ್ವನಾಥ್‌ ಅವರು ಉಪ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೆ ಇಲ್ಲವೇ ಸೋಲದಿದ್ದರೆ ಮಂತ್ರಿಯಾಗುವುದು ಖಚಿತವಾಗಿತ್ತು.

ಬಿಜೆಪಿಯ ಯತ್ನಾಳ್, ವಿಶ್ವನಾಥ್ ಮೌನಕ್ಕೆ ಶರಣಾಗಿದ್ದೇಕೆ ..?

 ಆದರೆ ಉಪ ಚುನಾವಣೆಯಲ್ಲಿ ಸೋತು, ಅವಕಾಶ ಕಳೆದುಕೊಂಡರು. ನಂತರ ವಿಧಾನ ಪರಿಷತ್‌ ನಾಮ ನಿರ್ದೇಶಿತ ಸದಸ್ಯರಾದರು. ಆದರೆ ಚುನಾವಣೆಯಲ್ಲಿ ಗೆದ್ದುಬಾರದೇ (ವಿಧಾನಸಭೆಯಿಂದ ವಿಧಾನ ಪರಿಷತ್‌ಗಾದರೂ) ಮಂತ್ರಿ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟು ತೀರ್ಪು ನೀಡಿತು. ಇದರಿಂದ ಅವರಿಗೆ ಅವಕಾಶ ಸಿಕ್ಕಿಲ್ಲ.