HDK ಒಲವು ಬಿಜೆಪಿಯತ್ತ: ಸರ್ಕಾರ ಸೇಫ್ ಮಾಡ್ತಾರಂತೆ ಕುಮಾರಸ್ವಾಮಿ!

ಸಾರ್ವತ್ರಿಕ ಚುನಾವಣೆಗೆ ಹೋಗೋಕೆ ಆಗುವುದಿಲ್ಲ| ಮೂರುವರೇ ವರ್ಷಗಳ ಕಾಲ ಸ್ಥಿರ ಸರ್ಕಾರ ಬೇಕು| ರಾಜ್ಯ ಜನರು ಕಷ್ಟದಲ್ಲಿ ಇದ್ದಾರೆ| ನಾವು ಚುನಾವಣೆ ನಡೆಸಿಕೊಂಡು ಹೋದ್ರೆ, ಜನರ ಕಷ್ಡ ಕೇಳೋದು ಯಾರು? ಎಂದ ಕುಮಾರಸ್ವಾಮಿ| 
 

H D Kumaraswamy Said I will Save the Government

ಬೆಂಗಳೂರು(ನ.24): ನಾನು ಸರ್ಕಾರ ಕಾಪಾಡುತ್ತೇನೆ ಎಂದು ಹೇಳಿದ್ದೇನೆ. ಆದರೆ ಯಾವ ಸರ್ಕಾರ ಅಂತಾ ಹೇಳಿಲ್ಲ. ಒಟ್ಟಾರೆ ಸರ್ಕಾರ ಕಾಪಾಡ್ತೇನೆ. ಯಾವ ಸರ್ಕಾರ ಅನ್ನೋದನ್ನು ಡಿ.9 ರ ನಂತರ ತೀರ್ಮಾನ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಹೇಳು ಮೂಲಕ ರಾಜಕೀಯ ವಲಯದಲ್ಲಿ ಭಾರೀ ಸಂಚಲನವನ್ನ ಸೃಷ್ಟಿಸಿದ್ದಾರೆ. 

ಸಾರ್ವತ್ರಿಕ ಚುನಾವಣೆಗೆ ಹೋಗೋಕೆ ಆಗುವುದಿಲ್ಲ. ಮೂರುವರೇ ವರ್ಷಗಳ ಕಾಲ ಸ್ಥಿರ ಸರ್ಕಾರ ಬೇಕು. ರಾಜ್ಯ ಜನರು ಕಷ್ಟದಲ್ಲಿ ಇದ್ದಾರೆ. ನಾವು ಚುನಾವಣೆ ನಡೆಸಿಕೊಂಡು ಹೋದ್ರೆ, ಜನರ ಕಷ್ಡ ಕೇಳೋದು ಯಾರು? ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಾನು ಬಿಜೆಪಿ ಸರ್ಕಾರ ಉಳಿಸುತ್ತೇನೆ ಎಂದು ಹೇಳಿಲ್ಲ, ನನ್ನ ಮಾತಿನ‌ ಅರ್ಥ ರಾಜಕೀಯದಲ್ಲಿ ಅತ್ಯಂತ ಸೂಕ್ಷ್ಮವಾಗಿ ಗ್ರಹಿಸೋರು ಯಾರು ಇದ್ದಾರೆ ಅವರಿಗೆ ನನ್ನ ಮಾತಿನ ಅರ್ಥ ಗೊತ್ತಾಗುತ್ತದೆ. ಸಚಿವ ಆರ್. ಅಶೋಕ್ ನವಂತವರಿಗೆ ಪಾಪ ಏನು ಗೊತ್ತಾಗುತ್ತೆ, ಅಶೋಕ್ ಇನ್ನೂ ಪಾಠ ಕಲಿಯೋದು ಬಹಳ ಇದೆ ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.

ನವೆಂಬರ್ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Latest Videos
Follow Us:
Download App:
  • android
  • ios