ಕೊಡಗು, ಕೇರಳಕ್ಕೆ ರಾಯರ ಮಠದಿಂದ ತಲಾ 15 ಲಕ್ಷ
ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿಗೆ ಸಿಲುಕಿರುವ ಕೊಡಗು ಜಿಲ್ಲೆ ಮತ್ತು ಕೇರಳ ರಾಜ್ಯಕ್ಕೆ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಿಂದ ತಲಾ
ರಾಯಚೂರು: 15 ಲಕ್ಷ ಜೊತೆಗೆ ಸಿದ್ಧಪಡಿಸಿದ ಆಹಾರ, ಬಟ್ಟೆ, ಔಷಧಿ, ದವಸ-ಧಾನ್ಯ ಇತರೆ ಸಾಮಗ್ರಿಗಳನ್ನು ವಿತರಿಸಲಾಗುವುದು ಎಂದು ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ತಿಳಿಸಿದ್ದಾರೆ.
ಮಂತ್ರಾಲಯದ ಶ್ರೀಮಠದಲ್ಲಿ ಗುರುವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಸೇರಿ ವಿವಿಧ ಪ್ರದೇಶಗಳಲ್ಲಿರುವ ಶ್ರೀರಾಯರ ಶಾಖಾ ಮಠಗಳ ಅಧಿಕಾರಿ, ಸಿಬ್ಬಂದಿ ಹಾಗೂ ಪದಾಧಿಕಾರಿಗಳ ಮತ್ತು ಭಕ್ತರ ತಂಡಗಳು ಕೊಡಗು, ಕೇರಳಗಳಿಗೆ ಹೋಗಿ ನೆರೆಸಂತ್ರಸ್ತರಿಗೆ ಸಹಾಯವನ್ನು ಮಾಡುತ್ತಿದ್ದಾರೆ ಎಂದರು. ಈ ಹಿಂದೆ ಕಾರ್ಗಿಲ್ ಯುದ್ಧದ ಸಂದರ್ಭ, ನಾಗಪಟ್ಟಣಂ, ಕಡಲೂರು ಸೇರಿದಂತೆ ಅನೇಕ ಪ್ರದೇಶದಲ್ಲಿ ಸುನಾಮಿ ಆಗಮಿಸಿದಾಗ, ತಮ್ಮ ಅವಧಿಯಲ್ಲಿ ನೇಪಾಳದಲ್ಲಿ ಸಂತ್ರಸ್ತರಿಗೆ ಬೃಹತ್ ಪ್ರಮಾಣದಲ್ಲಿ ಶ್ರೀಮಠದಿಂದ ದವಸಧಾನ್ಯಗಳನ್ನು ಸಂಗ್ರಹಿಸಿ ನೆರವು ನೀಡಲಾಗಿತ್ತು. ಇದೀಗ ಕೊಡಗು ಜಿಲ್ಲೆ ಹಾಗೂ ಕೇರಳ ರಾಜ್ಯಗಳಿಗೆ ತಾತ್ಕಾಲಿಕವಾಗಿ ಈ ನೆರವು ತೀಡುತ್ತಿದ್ದು, ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮಠ ಚಿಂತನೆ ನಡೆಸಿದೆ ಎಂದರು.
ಪ್ರವಾಹ ಸಂಬಂದಪಟ್ಟ ಸುದ್ಧಿಗಳಿಗೆ ಲಿಂಕ್:
45 ಕುಟುಂಬಗಳ ಜೀವ ಉಳಿಸಿದ 1 ‘ಸಂದೇಶ’
ಕೊಡಗಿನ ಬಗ್ಗೆ ಭಾವನಾತ್ಮಕ ಪತ್ರ ಬರೆದ ರಶ್ಮಿಕಾ ಮಂದಣ್ಣ
ಮಗನ ಮದುವೆ ಬೀಗರ ಔತಣದ ದುಡ್ಡು ದೇಣಿಗೆಗೆ: ಸಚಿವ