ಶಿವಮೊಗ್ಗದ ಭದ್ರಾವತಿಯಲ್ಲಿ ಪೊಲೀಸರು ರೌಡಿಶೀಟರ್ ಶಾಹಿದ್ ಖುರೇಶಿ ಮತ್ತು ರವಿ ಅಲಿಯಾಸ್ ಗುಂಡ ಎಂಬುವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ ಶಾಹಿದ್ ಮತ್ತು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರವಿಯ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಶಿವಮೊಗ್ಗ (ಫೆ.24): ಭದ್ರಾವತಿಯಲ್ಲಿ ಮತ್ತೆ ಪೊಲೀಸರ ಗುಂಡಿನ ಸದ್ದು ಮೊಳಗಿದೆ. ರೌಡಿಶೀಟರ್ ಶಾಹಿದ್ ಖುರೇಶಿ ಮೇಲೆ ಫೈರಿಂಗ್ ನಡೆಸಲಾಗಿದೆ. ರೌಡಿಶೀಟರ್ ಶಾಹಿದ್ ಖುರೇಶಿ ಕಾಲಿಗೆ ಪೊಲೀಸರು ಗುಂಡೇಟು ಹಾಕಿದ್ದಾರೆ. ಭದ್ರಾವತಿ ಪೇಪರ್ ಟೌನ್ ಠಾಣೆಯ ಇನ್ಸ್‌ಪೆಕ್ಟರ್ ನಾಗಮ್ಮ, ಶಾಹಿದ್ ಖುರೇಷಿ ಕಾಲಿಗೆ ಗುಂಡು ಹೊಕ್ಕಿಸಿದ್ದಾರೆ. ರೌಡಿಶೀಟರ್ ಸಾತು ಆಲಿಯಾಸ್ ಸಿದ್ದಿಕ್ ಕೊಲೆ ಯತ್ನದ ಪ್ರಕರಣದಲ್ಲಿ ಶಾಹಿದ್ ಖುರೇಶಿ ಭಾಗಿಯಾಗಿದ್ದ. ತಲೆಮರೆಸಿಕೊಂಡಿದ್ದ ಶಾಹಿದ್ ಖುರೇಶಿಯನ್ನು ಬಂಧಿಸಲು ತೆರಳಿದಾಗ ಪೊಲೀಸ್ ಪೇದೆ ನಾಗರಾಜ್ ಮೇಲೆ ಶಾಹಿದ್ ಖುರೇಶಿ ಹಲ್ಲೆಗೆ ಯತ್ನಿಸಿದ್ದಾರೆ. ರಕ್ಷಣೆಗಾಗಿ ರೌಡಿಶೀಟರ್ ಶಾಹಿದ್ ಖುರೇಶಿಯ ಮೇಲೆ ಇನ್ಸ್ಪೆಕ್ಟರ್ ನಾಗಮ್ಮ ಫೈರಿಂಗ್ ಮಾಡಿದ್ದಾರೆ. ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ದಿನಗಳ ಹಿಂದೆ ಭದ್ರಾವತಿಯ ಹೊಸಮನೆ ಪೊಲೀಸರು ರವಿ ಅಲಿಯಾಸ್ ಗುಂಡ ಎಂಬ ರೌಡಿಶೀಟರ್ ಮೇಲೆ ಫೈರಿಂಗ್ ಮಾಡಿದ್ದರು. ಅಲ್ಲಿಯೂ ಕೂಡ ಪ್ರಕರಣವೊಂದರಲ್ಲಿ ಬಂಧಿಸಲು ತೆರಳಿದ್ದಾಗ ಆರೋಪಿ ಪೊಲೀಸರ ಮೇಲೆಯೇ ದಾಳಿ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಹೊಸಮನೆ ಪೊಲೀಸ್ ಠಾಣೆಯ ಪಿಎಸ್ಐ ಕೃಷ್ಣ ತಮ್ಮ ಸಿಬ್ಬಂದಿಯ ರಕ್ಷಣೆಗಾಗಿ ಅನಿವಾರ್ಯವಾಗಿ ಫೈರಿಂಗ್ ಮಾಡಿದ್ದರು.
ಶಾಸಕ ಬಿಕೆ ಸಂಗಮೇಶ್ ಪುತ್ರನ ಗೂಂಡಾಗಿರಿ, ಮಹಿಳಾ ಅಧಿಕಾರಿಗೆ ಸೊಂಟದ ಕೆಳಗಿನ ಪದ ಬಳಸಿ ನಿಂದನೆ!
ದರ್ಶನ್ ಎಂಬ ಸಿಬ್ಬಂದಿಯ ಮೇಲೆ ಹಲ್ಲೆಗೆ ಮುಂದಾದಾಗ, ಪಿಎಸ್ಐ ಕೃಷ್ಣ ಅವರು ಶರಣಾಗುವಂತೆ ರವಿಗೆ ಎಚ್ಚರಿಕೆ ನೀಡಿದ್ದರು.ಇದನ್ನು ಲೆಕ್ಕಿಸದೇ ಪರಾರಿಯಾಗಲು ಯತ್ನಿಸಿದಾಗ ರವಿಯ ಬಲಗಾಲಿಗೆ ಪಿಎಸ್ಐ ಗುಂಡು ಹಾರಿಸಿದ್ದಾರೆ. ಪೊಲೀಸ್ ಸಿಬ್ಬಂದಿಯನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆ ದಾಖಲಿಸಿದರೆ, ಗಾಯಾಳು ರವಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.
ಗಣಪತಿ ವಿಸರ್ಜನೆ ವೇಳೆ ಡೊಳ್ಳು ಬಾರಿಸುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ!

