Asianet Suvarna News Asianet Suvarna News

ಕೈ ಮೇಲೆ ಮುನಿಸು : ಬಿಜೆಪಿ ಸೇರಿದ ಮುಖಂಡ

ರಾಜ್ಯದಲ್ಲಿ ಚುನಾವಣೆ ಅಬ್ಬರ ಜೋರಾಗಿದ್ದು, ಇದೇ ಬೆನ್ನಲ್ಲೇ ಪಕ್ಷಾಂತರ ಪರ್ವವೂ ಜೋರಾಗಿದೆ. 

Gundlupete Leader Deepu Joins BJP snr
Author
Bengaluru, First Published Oct 20, 2020, 1:42 PM IST

ಗುಂಡ್ಲುಪೇಟೆ (ಅ.17): ಇಲ್ಲಿನ ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಾಂತರ ಪರ್ವವೂ ಕೂಡ ಜೋರಾಗಿದೆ.   ಪಕ್ಷೇತರ ಪುರಸಭೆ ಸದಸ್ಯ  ಪಿ ಶಶಿಧರ್ (ದೀಪು) ಬಿಜೆಪಿ ಸೇರಿದ್ದಾರೆ

ಬಿಜೆಪಿ ಜಿಲ್ಲಾಧ್ಯಕ್ಷ ಸುಂದರ್ ನೇತೃತ್ವದಲ್ಲಿ ಪಕ್ಷ ಸೇರಿದರು. 

ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡದ ಹಿನ್ನೆಲೆಯ ಪುರಸಭೆಯ 8ನೇ ವಾರ್ಡ್ ನ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸಿದ್ದರು. 

ಒಂದೇ ವೇದಿಕೆಯಲ್ಲಿ ರಾಜಕೀಯ ಬದ್ಧ ವೈರಿಗಳು, ಈ ವೇಳೆ ಸಿದ್ದುಗೆ ಟಾಂಗ್ ಕೊಟ್ಟ ಈಶ್ವರಪ್ಪ ...

ಪುರಸಭೆ ಅಧ್ಯಕ್ಷ ಸ್ಥಾನ ಚುನಾವಣಾ ಪೂರ್ವದಲ್ಲಿ ಬಿಸಿಎಂ ಗೆ ಮೀಸಲಾಗಿದ್ದ ಹಿನ್ನೆಲೆಯಲ್ಲಿ ಪುರಸಭೆ ಅಧ್ಯಕ್ಷಗಾದಿಯ ಕನಸು ಹೊತ್ತು ಕಾಂಗ್ರೆಸ್ ಬಿಜೆಪಿಗೆ ಸೆಡ್ಡು ಹೊಡೆದು ಗೆಲುವು ಸಾಧಿಸಿದ್ದರು. 

ಈಗ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಟಿಕೆಟ್ ತಪ್ಪಿಸಲು ಕಾರಣರಾಗಿದ್ದರೆ ಎಂದು ಹೇಳುತ್ತಾ ಎರಡು ವರ್ಷಗಳಿಂದ ತಟಸ್ಥರಾಗಿ ಉಳಿದು ಈಗ ಬಿಜೆಪಿ ಪಾಳಯಕ್ಕೆ ಸೇರಿದ್ದಾರೆ

ಈ ಸಂಬಂಧ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಪಿ ಗಿರೀಶ್ ತಮ್ಮ ಬೆಂಬಲಿಗ ಸದಸ್ಯ ಶಶಿದರ್ (ದೀಪು) ಮನೆಗೆ ತೆರಳಿ ಪಕ್ಷಕ್ಕೆ ಆಹ್ವಾನಿಸಿದ್ದರು.

Follow Us:
Download App:
  • android
  • ios