ಬೆಂಗಳೂರು, (ಅ.18): ರಾಜಕೀಯ ಬದ್ಧ ವೈರಿಗಳಾದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಕೆ.ಎಸ್. ಈಶ್ವರಪ್ಪ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು,ರಾಜಕೀಯ ವೈರತ್ವ ಮರೆತ  ಅಕ್ಕ ಪಕ್ಕ ಕುಳಿತುಕೊಂಡು ಆತ್ಮೀಯವಾಗಿ ಮಾತನಾಡಿದ್ದಾರೆ.

ಇಬ್ಬರೂ ನಾಯಕರು ಆತ್ಮೀಯವಾಗಿದ್ದರೂ ರಾಜಕೀಯವಾಗಿ ಕಚ್ಚಾಡುತ್ತಾರೆ. ರಾಜಕೀಯವಾಗಿ ಹಾವು ಮುಂಗುಸಿಯಂತೆ ಕಚ್ಚಾಡಿದರೂ ಸಮುದಾಯದ ಕೆಲಸದಲ್ಲಿ ಒಂದೇ ವೇದಿಕೆ ಹಂಚಿಕೊಂಡಿದ್ದಾರೆ.

ಬೈ ಎಲೆಕ್ಷನ್: ಶಿರಾದಲ್ಲಿ ಧೂಳೆಬ್ಬಿಸಿದ ಡಿಕೆ ಶಿವಕುಮಾರ್-ಸಿದ್ಧರಾಮಯ್ಯ

ಬೆಂಗಳೂರಿನಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟದ ಸಭೆಯಲ್ಲಿ ಅವರು ಜೊತೆಯಾಗಿ ಭಾಗಿಯಾಗಿದ್ದಾರೆ. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಜಾರಿಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಲು ಸಭೆ ನಡೆಸಲಾಗಿದೆ. ಸಭೆಯಲ್ಲಿ ವಿವಿಧ ಮಠಾಧೀಶರು, ಮುಖಂಡರು ಉಪಸ್ಥಿತರಿದ್ದರು.

ಈ ವೇಳೆ ಈ ಹಿಂದೆ ಸಮೀಕ್ಷೆ ಜಾರಿಗೆಗೆ ಬೀದಿಗಿಳಿದು ಹೋರಾಟ ಮಾಡುತ್ತೇ ಎಂದು ಹೇಳಿಕೆ ನೀಡಿದ್ದ ಸಿದ್ದರಾಮಯ್ಯನವರಿಗೆ ಈಶ್ವರಪ್ಪ ಟಾಂಗ್ ಕೊಟ್ಟಿದ್ದಾರೆ.

ಸಿದ್ದರಾಮಯ್ಯನವರನ್ನ ಕೇಳುತ್ತೇನೆ. ನಿಮ್ಮ ಸರ್ಕಾರ ಇದ್ದಾಗ ನೀವು ವರದಿ ಜಾರಿ ಮಾಡಲಿಲ್ಲ. ಈಗ ನಾವು ಬಮದ ಕೂಡಲೇ ಹೋರಾಟಕ್ಕೆ ಇಳಿಯುತ್ತೀರಾ..? ಎಂದು ಈಶ್ವರಪ್ಪ ಪ್ರಶ್ನಿಸಿದರು.

ನಾನು ಇಲ್ಲಿಗೆ ಏಕೆ ಬಂದಿದ್ದೇನೆ ಎಂದರೆ, ನೀವು ಬೀದಿಗಿಳಿಯಲು ನಾವು ಅವಕಾಶ ಕೊಡಲ್ಲ ಎಂದು ಹೇಳಲಿಕ್ಕೆ ಬಂದಿದ್ದೇನೆ. ನಾವು ಈ ವರದಿ ಆಗೀಕಾರ ಮಾಡುತ್ತೇವೆ. ಇದನ್ನು ಜಾರಿ ಮಾಡಲು ಸಿಎಂ ಬಿಎಸ್ ಯಡಿಯೂರಪ್ಪನವರ ಬಳಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.