ಎಚ್‌.ಎಂ.ಗಣೇಶ್‌ಪ್ರಸಾದ್‌ ಶಾಸಕರಾದ ಮರು ದಿನವೇ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ನನಗೆ ಹಾರ, ತುರಾಯಿ ಬೇಕಿಲ್ಲ, ಫ್ಲೆಕ್ಸ್‌, ಬ್ಯಾನರ್‌ ಬದಲಿಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಾರ, ಪೇಟ, ಶಾಲು, ಫ್ಲೆಕ್ಸ್‌ನ ಹಣ ನೀಡುವಂತೆ ಕೋರಿದ್ದರು.

ಗುಂಡ್ಲುಪೇಟೆ(ಮೇ.28): ನೂತನ ಶಾಸಕ ಎಚ್‌.ಎಂ.ಗಣೇಶ್‌ಪ್ರಸಾದ್‌ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕವೂ ನುಡಿದಂತೆ ನಡೆದುಕೊಳ್ಳುವ ಮೂಲಕ ಕ್ಷೇತ್ರದಲ್ಲಿ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ.
ಎಚ್‌.ಎಂ.ಗಣೇಶ್‌ಪ್ರಸಾದ್‌ ಶಾಸಕರಾದ ಮರು ದಿನವೇ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ನನಗೆ ಹಾರ, ತುರಾಯಿ ಬೇಕಿಲ್ಲ, ಫ್ಲೆಕ್ಸ್‌, ಬ್ಯಾನರ್‌ ಬದಲಿಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಾರ, ಪೇಟ, ಶಾಲು, ಫ್ಲೆಕ್ಸ್‌ನ ಹಣ ನೀಡುವಂತೆ ಕೋರಿದ್ದರು.

ಸರ್ಕಾರ ರಚನೆಯಾದ ಬಳಿಕ ವಿಧಾನಸಭೆಯಲ್ಲಿ ಶಾಸಕ ಸ್ಥಾನದ ಪ್ರಮಾಣ ವಚನ ಸ್ವೀಕರಿಸಿದ ನಂತರ ಗುಂಡ್ಲುಪೇಟೆಗೆ ನೂತನ ಶಾಸಕರಾಗಿ ಪ್ರವಾಸಿ ಮಂದಿರಕ್ಕೆ ಆಗಮಿಸಿದಾಗ ಕ್ಷೇತ್ರದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾರ, ತುರಾಯಿ, ಶಾಲು ತಂದಿರಲಿಲ್ಲ.

Chamarajanagar: ತಾತ, ಅಪ್ಪನಂತೆ ಸೋಲದೆ ಗೆದ್ದ ಶಾಸಕ ಎಚ್‌.ಎಂ.ಗಣೇಶ್‌ ಪ್ರಸಾದ್‌!

ಕ್ಷೇತ್ರದ ಪ್ರಥಮ ಪ್ರಜೆಯಾಗಿ ಕ್ಷೇತ್ರಕ್ಕೆ ಮೊದಲ ಭೇಟಿಯ ದಿನ ಪ್ರವಾಸಿ ಮಂದಿರಕ್ಕೆ ಶಾಸಕರು ಆಗಮಿಸಿದಾಗಲೂ ಶಾಸಕರ ಸಲಹೆಯಂತೆ ಒಂದು ಪಟಾಕಿ ಸದ್ದು ಮಾಡಲಿಲ್ಲ, ಇಂದು ಪ್ರಜ್ಞಾವಂತ ಶಾಸಕರಿಗೆ ಇರಬೇಕಾದ ಗುಣವಿದು ಎಂಬುದು ಜನರ ಮಾತು.

ಕಳೆದರೆಡರು ವರ್ಷಗಳಿಂದ ಪಟ್ಟಣದಲ್ಲಿ ಫ್ಲೆಕ್ಸ್‌ಗಳ ಹಾವಳಿಗೆ ಜನರು ಬೇಸತ್ತಿದ್ದರು. ಗಣೇಶ್‌ಪ್ರಸಾದ್‌ ಶಾಸಕರಾದ ನಂತರ ಫ್ಲೆಕ್ಸ್‌ ಸಂಸ್ಕೃತಿಗೆ ವಿದಾಯ ಹೇಳುವ ಮೂಲಕ ಗಣೇಶ್‌ಪ್ರಸಾದ್‌ ಮೊದಲ ಹೆಜ್ಜೆಯಲ್ಲೇ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ.

ಶಾಸಕರಾಗುವ ಮುಂಚೆ ಹೇಗಿದ್ದರೋ ಅದೇ ರೀತಿಯಲ್ಲಿ ಪ್ರವಾಸಿ ಮಂದಿರದ ನವೀಕೃತ ಶಾಸಕರ ಕೊಠಡಿ ಉದ್ಘಾಟಿಸಿದರು. ನಂತರ ಕ್ಷೇತ್ರದಲ್ಲಿ ಹಲವು ಗ್ರಾಮಗಳಲ್ಲಿ ಮಳೆ, ಗಾಳಿಗೆ ಹಾನಿಯಾಗಿದ್ದ ಸ್ಥಳ ಪರಿಶೀಲನೆಗೆ ಹೋಗಿ, ಮನೆಗೆ ಹಾನಿಯಾದ ಕುಟುಂಬಸ್ಥರಿಗೆ ಶಾಸಕರಾಗಿದ್ದುಕೊಂಡು ವೈಯಕ್ತಿಕವಾಗಿ ನೆರವು ನೀಡಿದ್ದು ಸಾರ್ವಜನಿಕರು ಹುಬ್ಬೇರಿಸುವಂತೆ ಮಾಡಿದ್ದಾರೆ.

ಎಚ್‌.ಎಂ.ಗಣೇಶ್‌ಪ್ರಸಾದ್‌ ಶಾಸಕರಾದರೂ ಯಾವುದೇ ಹಮ್ಮು, ಬಿಮ್ಮು ಇಲ್ಲದಂತೆ ಶಾಸಕರಾಗುವ ಮುಂಚೆ ಹೇಗಿದ್ದರೋ ಅದೇ ರೀತಿ ಕಾರ್ಯಕರ್ತರು ಹಾಗೂ ಜನರೊಂದಿಗೆ ಬೆರೆಯುತ್ತಿದ್ದಾರೆ. ಇಂತ ಶಾಸಕ ಪ್ರಸ್ತುತ ಬೇಕಿತ್ತು ಎಂದು ಮತದಾರನೊಬ್ಬ ಹೇಳಿದ.