Asianet Suvarna News Asianet Suvarna News

ಗುಲಾಬಿ ನಮ್ಮ ಮೆಟ್ರೋ ಮಾರ್ಗ ಸುರಂಗ 95% ರೆಡಿ: ಬಿಎಂಆರ್‌ಸಿಎಲ್

ಮುಂದಿನ ವರ್ಷಾಂತ್ಯಕ್ಕೆ ಕಾಳೇನ ಅಗ್ರಹಾರ- ನಾಗವಾರ ನಡುವೆ ವಾಣಿಜ್ಯ ಸಂಚಾರ ಆರಂಭಿಸುವ ಗುರಿಯೊಂದಿಗೆ ಸಾಗಿರುವ ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಸುರಂಗ ಕಾಮಗಾರಿ ಅಂತಿಮ ಘಟ್ಟ ತಲುಪಿದ್ದು, ಆಗಸ್ಟ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. 
 

Gulabi Namma Metro Marg Tunnel 95 percent Ready Says BMRCL gvd
Author
First Published Apr 28, 2024, 10:47 AM IST

ಬೆಂಗಳೂರು (ಏ.28): ಮುಂದಿನ ವರ್ಷಾಂತ್ಯಕ್ಕೆ ಕಾಳೇನ ಅಗ್ರಹಾರ- ನಾಗವಾರ ನಡುವೆ ವಾಣಿಜ್ಯ ಸಂಚಾರ ಆರಂಭಿಸುವ ಗುರಿಯೊಂದಿಗೆ ಸಾಗಿರುವ ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಸುರಂಗ ಕಾಮಗಾರಿ ಅಂತಿಮ ಘಟ್ಟತಲುಪಿದ್ದು, ಆಗಸ್ಟ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಒಟ್ಟಾರೆ 21.26 ಕಿ.ಮೀ. ಉದ್ದದ ಗುಲಾಬಿ ಮಾರ್ಗ 13.9 ಕಿ.ಮೀ. ಸುರಂಗ ಮಾರ್ಗವನ್ನು ಹೊಂದಿದೆ. ಬೆಂಗಳೂರು ಮೆಟ್ರೋ ರೈಲು ನಿಗಮವು 3 ಹಂತದಲ್ಲಿ ಸುರಂಗ ಕೊರೆಯುವ ಕೆಲಸ ಕೈಗೆತ್ತಿಕೊಂಡಿತ್ತು. ಇದರಲ್ಲಿ ಮೊದಲ ಹಂತದಲ್ಲಿ ಶಾದಿ ಮಹಲ್‌ನಿಂದ-ವೆಂಕಟೇಶಪುರದವರೆಗೆ ವೆಂಕಟೇಶಪುರದಿಂದ- ಕೆ.ಜಿ.ಹಳ್ಳಿವರೆಗೆ ಸುರಂಗ ಕಾಮಗಾರಿ ಮುಗಿದಿದೆ. ಸುರಂಗ ಕೊರೆವ ಕೆಲಸ ಹಾಗೂ ಶೇ.95ರಷ್ಟು ಪೂರ್ಣವಾಗಿದೆ. 

ಈ ಎರಡು ಹಂತಗಳ ಕಾಮಗಾರಿ ಮುಗಿದ ಬಳಿಕ ಮೂರನೇ ಹಂತದ ಕಾಮಗಾರಿ ಕೂಡ ಈಗಾಗಲೇ ಆರಂಭವಾಗಿದೆ. ಪ್ರಸ್ತುತ ತುಂಗಾ ಮತ್ತು ಭದ್ರಾ ಟಿಬಿಎಂ (ಸುರಂಗ ಕೊರೆಯುವ ಯಂತ್ರ) ಕೆ.ಜಿ. ಹಳ್ಳಿಯಿಂದ ನಾಗವಾರವರೆಗಿನ 935 ಮೀಟರ್ ಸುರಂಗ ಕೊರೆಯುವ ಕೆಲಸ ನಡೆಸುತ್ತಿವೆ. ಕಳೆದ ಎರಡು ವಾರದಿಂದ ದಕ್ಷಿಣಾಭಿಮುಖವಾಗಿ ತುಂಗಾ ಟಿಬಿಎಂ ಹಾಗೂ ಉತ್ತರಾಭಿಮುಖವಾಗಿ ಭದ್ರಾ ಸುರಂಗ ಕೊರೆಯುವ ಕಾರ್ಯ ಪ್ರಾರಂಭಿಸಿದೆ. ಸುಮಾರು 12ಕ್ಕೂ ಹೆಚ್ಚಿನ ರಿಂಗ್‌ಗಳನ್ನು ಸುರಂಗದಲ್ಲಿ ಈಗಾಗಲೇ ಅಳವಡಿಕೆ ಮಾಡಲಾಗಿದೆ. ಅಂದುಕೊಂಡಂತೆ ಯೋಜನೆ ಸಾಗಿದರೆ ಈ ಎರಡು ಟಿಬಿಎಂಗಳು ಕ್ರಮವಾಗಿ ಜು.31 ಹಾಗೂ ಆ.31 ರಂದು ಕೆಲಸ ಪೂರ್ಣಗೊಳಿಸಲಿವೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಟ್ರ್ಯಾಕ್ ಬ್ಲ್ಯಾಬ್ ಅಳವಡಿಕೆ: ಸುರಂಗ ಕೊರೆವ, ರಿಂಗ್ ಅಳವಡಿಕೆ ಮುಗಿದ ಕಡೆಗಳಲ್ಲಿ ಟ್ರ್ಯಾಕ್ ಬ್ಲ್ಯಾಬ್ ಅಳವಡಿಕೆ ಮಾಡಲಾಗುತ್ತಿದೆ. ಇದಾದ ಬಳಿಕ ಸಿಗ್ನ ಲಿಂಗ್ ಹಾಗೂ ಇತರೆ ಸೌಕರ್ಯದ ಉಳಿದ ಸಿವಿಲ್‌ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಲಾಬಿ ಮಾರ್ಗದ ಕಾಳೇನ ಅಗ್ರಹಾರ- ತಾವರೆಕೆರೆವರೆಗಿನ ಎಲಿವೆಟೆಡ್ ಕಾರಿ ಡಾರ್‌ನಲ್ಲಿ ಹಳಿ ಜೋಡಣೆ ಕೆಲಸ ನಡೆಯುತ್ತಿದೆ. ನಿಲ್ದಾಣ ಕಾಮಗಾರಿ ಕೂಡ ಭರದಿಂದ ಸಾಗುತ್ತಿದೆ. 2025ರ ಅಂತ್ಯಕ್ಕೆ ಈ ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತವಾ ಗುವ ನಿರೀಕ್ಷೆ ಇದೆ. ಸಕಾಲಕ್ಕೆ ರೈಲು ಪೂರೈಕೆ ಆಗುವ ವಿಶ್ವಾಸವನ್ನು ಬಿಎಂಆರ್‌ಸಿಲ್ ಹೊಂದಿದೆ.

Lok Sabha Elections 2024: ಗಣಿನಾಡು ಬಳ್ಳಾರಿಯಲ್ಲಿ ಕಾಂಗ್ರೆಸ್ Vs ಬಿಜೆಪಿ ಜಿದ್ದಾಜಿದ್ದಿ ಹೋರಾಟ

ಸುರಂಗ ಮಾರ್ಗದಲ್ಲಿ 12 ನಿಲ್ದಾಣ ನಿರ್ಮಾಣ: ಹಂತ-2ರ ಯೋಜನೆಯಡಿ ರೀಚ್ - 6 ಅಂದರೆ ಗುಲಾಬಿ ಮಾರ್ಗವು ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಒಟ್ಟು 18 ನಿಲ್ದಾಣಗಳನ್ನು ಹೊಂದಿದೆ. ಇದರಲ್ಲಿ 7.50 ಕಿ.ಮೀ. ಎತ್ತರಿಸಿದ ಮಾರ್ಗವಾಗಿದೆ. ಕಾಳೇನ ಅಗ್ರಹಾರದಿಂದ ಸ್ವಾಗತ್ ರಸ್ತೆವರೆಗೆ 6 ನಿಲ್ದಾಣ ಮತ್ತು 13.76 ಕಿ.ಮೀ. ಸುರಂಗ ಮಾರ್ಗದಲ್ಲಿ ಡೇರಿ ವೃತ್ತದಿಂದ ನಾಗವಾರದವರೆಗೆ 12 ನಿಲ್ದಾಣ ತಲೆ ಎತ್ತುತ್ತಿದೆ.

Latest Videos
Follow Us:
Download App:
  • android
  • ios