Hassan: ಹಲಾಲ್-ಝಟ್ಕಾ ವಿವಾದದ ಮಧ್ಯೆ ಗುಡ್ಡೆ ಮಾಂಸ ಕಟ್ ದರ್ಬಾರ್: ಏನಿದು ಹೊಸ ಪದ್ದತಿ?
* ಸಮ ಹಣ- ಸಮ ಗುಡ್ಡೆ- ಸಮಪಾಲು
* ಹೇಗಿರುತ್ತೆ ಗುಡ್ಡೆ ಬಾಡು ಕಟ್ ವಿಧಾನ?
* ಹಲಾಲ್ ಕಟ್, ಝಟ್ಕಾ ಕಟ್ ನಡುವೆ ಗುಡ್ಡೆ ಬಾಡು ಕಟ್
ವರದಿ- ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್. ಹಾಸನ
ಹಾಸನ(ಏ.03): ಹಾಸನದ(Hassan) ಜನರು ಯುಗಾದಿ(Yugadi) ಹಬ್ಬ ಮುಗಿಸಿ ಇಂದು ಹೊಸ ತೊಡಕು ಆಚರಿಸುತ್ತಿದ್ದಾರೆ. ಹೊಸತೊಡಕು ಹಿನ್ನೆಲೆ ಹಲಾಲ್, ಝಟ್ಕಾ ಕಟ್ ಸಾಕಷ್ಟು ವಿವಾದ ಸೃಷ್ಟಿಯಾಗಿದೆ. ಹಿಂದೂಗಳು ಹಲಾಲ್ ಕಟ್ ಮಾಂಸ ಖರೀದಿಸಬೇಡಿ, ಝಟ್ಕಾ ಕಟ್ ಖರೀದಿಸಿ ಎಂದು ಹಿಂದೂ ಪರ ಸಂಘಟನೆಗಳು ಹಾಸನದಲ್ಲಿ ಕರೆ ನೀಡಿದ್ದವು. ಹಲಾಲ್, ಝಟ್ಕಾ ಕಟ್ ವಿವಾದದ(Controversy) ನಡುವೆ ಹಾಸನದ ಗವೇನಹಳ್ಳಿ ಜನರು ಗುಡ್ಡೆ ಮಾಂಸ ಕಟ್ ಮೊರೆ ಹೋಗಿದ್ದಾರೆ. ಹಲಾಲ್ ಕಟ್, ಝಟ್ಕಾ ಕಟ್ ಸಹವಾಸ ಬಿಟ್ಟು ಗುಡ್ಡೆ ಬಾಡು ಕಟ್ ಮಾಡಿಕೊಂಡಿದ್ದಾರೆ. ಹತ್ತಾರು ಹೋತಗಳ ಕಡಿದು, ಕ್ವಿಂಟಾಲ್ ಗಟ್ಟಲೆ ಮಾಂಸವನ್ನು ಗುಡ್ಡೆ ಬಾಡು ಮಾಡಿಕೊಂಡಿದ್ದಾರೆ. 71 ಜನರು ಒಂದೇ ಕಡೆ ಗುಡ್ಡೆ ಮಾಂಸ ಕಟ್ ಮಾಡಿಕೊಂಡು ಹಂಚಿಕೊಂಡಿದ್ದಾರೆ.
ನಾವು ಹಲಾಲ್(Halal) ಕಟ್, ಝಟ್ಕಾ(Jhatka) ಕಟ್ ಗೊಂದಲ ಹೊರತಾಗಿ ಗುಡ್ಡೆ ಮಾಂಸ ಕಟ್(Gudde Meat Cut) ಮಾಡಿಕೊಂಡು ಹಂಚಿಕೊಂಡಿದ್ದೇವೆ. ನಮಗೆ ಗುಡ್ಡೆ ಮಾಂಸವೇ ಇಷ್ಟ ಹಾಗಾಗಿ ಗ್ರಾಮಸ್ಥರೆಲ್ಲ ಒಟ್ಟಿಗೆ ಹೋತಗಳ ಕಡಿದು ಗುಡ್ಡೆಬಾಡು ಮಾಡಿಕೊಂಡು ಹಂಚಿಕೊಂಡಿದ್ದೇವೆಂದು ಗ್ರಾಮಸ್ಥರು ಹೇಳಿದರು.
Hassan: ಅಂಗಡಿ ಖಾಲಿ ಮಾಡುವಂತೆ ಬೇಲೂರು ಚನ್ನಕೇಶವ ದೇಗುಲದಿಂದ ಮುಸ್ಲಿಂ ವ್ಯಾಪಾರಿಗೆ ನೊಟೀಸ್
ಹಲಾಲ್ ಕಟ್, ಝಟ್ಕಾ ಕಟ್ ನಡುವೆ ಗುಡ್ಡೆ ಬಾಡು ಕಟ್
ಗುಡ್ಡೆ ಬಾಡು ಕಟ್ ಅಂದ್ರೆ ಹೆಸರೇ ಸೂಚಿಸುವ ಹಾಗೆ ಮಾಂಸ ಗುಡ್ಡೆ ಗುಡ್ಡೆ ಹಾಕಿ ಹಂಚಿಕೊಳ್ಳುವುದು. ಆದ್ರೆ ಅದರೊಳಗೊಂದು ವಿಶೇಷವಿದೆ. ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿರೋ ಗ್ರಾಮದ ಜನರು, ಈ ಯುಗಾದಿ ಹೊಸತೊಡಕು ದಿನ ಎಲ್ಲರೂ ಒಗ್ಗಟ್ಟು ಪ್ರದರ್ಶಿಸುತ್ತಾರೆ. ಹೊಸತೊಡಕು ಗುಡ್ಡೆ ಬಾಡು ಕೂಟಕ್ಕೆ ಮೊದಲೇ ಸೇರಿಕೊಂಡಿರುತ್ತಾರೆ. ಎಷ್ಟು ಜನ ಗುಂಪಿನಲ್ಲಿ ಇರುತ್ತಾರೋ ಅಷ್ಟು ಜನಕ್ಕೆ ಅನುಗುಣವಾಗಿ ಕುರಿಗಳನ್ನು ತಂದುಕೊಳ್ಳುತ್ತಾರೆ. ಉತ್ತಮವಾದ ಕುರಿಗಳನ್ನು ಸಾಕಿರುವ ಜಾಗದಲ್ಲಿ ಹೋಗಿ ಕುರಿ ಖರೀದಿ ಮಾಡುತ್ತಾರೆ. ನಂತರ ಅವುಗಳನ್ನು ಊರಿಗೆ ತಂದು ವಿಶಾಲವಾದ ಮನೆ ಜಾಗದಲ್ಲಿ ಕಡಿದು ಪಾಲು ಹಾಕುತ್ತಾರೆ.
Hassan: ಸರ್ಕಾರದ ಖಜಾನೆಯಿಂದ ದೇಗುಲಕ್ಕೆ ಬೇಲೂರು ಚನ್ನಕೇಶವ ಸ್ವಾಮಿ ಆಭರಣ
ಹೇಗಿರುತ್ತೆ ಗುಡ್ಡೆ ಬಾಡು ಕಟ್ ವಿಧಾನ?
ಗುಡ್ಡೆ ಬಾಡು ಕಟ್ ವಿಧಾನ ವಿಭಿನ್ನ ಎಷ್ಟು ಜನ ಒಂದು ಗುಂಪಿನಲ್ಲಿರುತ್ತಾರೋ ಅಷ್ಟು ಮಾಂಸದ(Meat) ಗುಡ್ಡೆ ಹಾಕಲಾಗುತ್ತದೆ. ಗವೇನಹಳ್ಳಿಯಲ್ಲಿ 71 ಜನ ಹೊಸತೊಡಕು ಗುಡ್ಡೆ ಮಾಂಸ ಕೂಟದಲ್ಲಿದ್ದರು. ಹೀಗಾಗಿ 71ಮಾಂಸದ ಗುಡ್ಡೆ ಹಾಕಲಾಗಿತ್ತು. ಈ ಊರಿನ ಜನರು 10 ಕುರಿಗಳನ್ನು ತಂದಿದ್ದರು. 10 ಕುರಿಗಳನ್ನು(Sheep) ಕಡಿದು, ಎಲ್ಲರೂ ಮಾಂಸ ಕಟ್ ಮಾಡಿದರು. ನಂತರ ಗುಂಪಿನಲ್ಲಿದ್ದ ಒಬ್ಬರಿಗೆ ಗುಡ್ಡೆಗಳ ವಿಂಗಡಿಸಲು ಬಿಡುತ್ತಾರೆ. ನಂತರ ಆತ ಮಾಂಸದ ಗುಡ್ಡೆಗಳನ್ನು ಮಾಡಿದರು.
ಸಮ ಹಣ- ಸಮ ಗುಡ್ಡೆ- ಸಮಪಾಲು
ಗುಡ್ಡೆ ಬಾಡು ಕಟ್ ಹೊಸ ಪದ್ದತಿಯೇನಲ್ಲ. ಆದ್ರೆ ಈಗಿನ ಹಲಾಲ್ ಕಟ್, ಝಟ್ಕಾ ಕಟ್ ವಿವಾದದ ನಡುವೆ ಗುಡ್ಡೆ ಬಾಡ್ ಕಟ್ ಪದ್ದತಿಯನ್ನು ಹಲವು ಗ್ರಾಮಗಳ ಜನರು ಈ ಬಾರಿ ಅನುಸರಿಸುತ್ತಿದ್ದಾರೆ. ಹಾಸನದ ಗವೇನಹಳ್ಳಿ, ಗುಡ್ಡೇನಹಳ್ಳಿ, ಸಕಲೇಶಪುರ(Sakaleshpur) ತಾಲ್ಲೂಕಿನ ಅತ್ತಿಹಳ್ಳಿ ಸೇರಿ ಇತರೆ ಹಳ್ಳಿಗಳಲ್ಲಿ ಗುಡ್ಡೆಬಾಡು ಕಟ್ ಅನುಸರಿಸಿದ್ದಾರೆ. ಇಲ್ಲಿ ಯಾವುದೋ ಮಟಲ್‌ಸ್ವಾಲ್ ಎದುರು ನಿಲ್ಲುವುದು, ಅವರು ಯಾವ ಕುರಿ, ಹೋತನ ಮಟನ್(Mutton) ಕೊಡ್ತಾರೋ ಅದನ್ನೆ ತಂದು ತಿನ್ನಬೇಕೆಂದು ಪ್ರಮೇಯ ಇಲ್ಲಿಲ್ಲ. ಮೊದಲೇ ಕುರಿ,ಹೋತಗಳ ಆಯ್ಕೆ ಮಾಡಿ ತಂದಿರುತ್ತಾರೆ. ತಂದಿದ್ದ ಅಷ್ಟು ಕುರಿಗಳನ್ನು ಕಡಿದು, ಒಟ್ಟಿಗೆ ಮಾಂಸ ಸೇರಿಸುತ್ತಾರೆ. ಹೀಗಾಗಿ ಯಾರಿಗೂ ಮೋಸವಿಲ್ಲದೆ ಉತ್ತಮ ಮಾಂಸ ಸಿಗುತ್ತದೆ. ಗುಡ್ಡೆ ಮಾಂಸದಲ್ಲಿ ಗುಂಪಿನಲ್ಲಿರುವವರೆಲ್ಲಾ ಸಮ ಹಣ ಹಾಕಿರುತ್ತಾರೆ. ಹಾಗೇಯೇ ಸಮ ಮಾಂಸದ ಗುಡ್ಡೆಯನ್ನು ಪಡೆಯುತ್ತಾರೆ. ತೂಕ ಸ್ವಲ್ಪವೂ ವ್ಯತ್ಯಾಸವಾಗದಂತೆ ಮಾಂಸ ತೂಗಿ ಗುಡ್ಡೆಗಳ ಮಾಡಿ ಹಂಚಿಕೊಳ್ಳುತ್ತಾರೆ. ತಲೆ,ಕಾಲು ಮಾಂಸವನ್ನು ಸಹ ಗುಡ್ಡೆ ಮಾಡಿ ಎಲ್ಲರೂ ಸಮವಾಗಿ ಹಂಚಿಕೊಳ್ತಾರೆ.