ತುಮಕೂರು (ಅ.18): ‘ನನ್ನ ಹೆಂಡತಿ, ಮಗ, ಡ್ರೈವರ್‌ ಸೇರಿ ಎಲ್ಲರಿಗೂ ಕೊರೋನಾ ಬಂದ ಕಾರಣ ಶಿರಾ ಉಪಚುನಾವಣೆ ಪ್ರಚಾರಕ್ಕೆ ಹೋಗಿಲ್ಲ’ ಎಂದು ಗುಬ್ಬಿ ಜೆಡಿಎಸ್‌ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಸ್ಪಷ್ಟಪಡಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಮನೆಯವರು ಒಂದು ತಿಂಗಳು ಆಸ್ಪತ್ರೆಯಲ್ಲಿದ್ದರು. ನಾನೂ ಕೂಡ ಕ್ವಾರಂಟೈನ್‌ನಲ್ಲಿದ್ದಿದ್ದರಿಂದ ಪ್ರಚಾರ ಸಭೆಗೆ ಹೋಗಲು ಆಗಲಿಲ್ಲ. ಕುಮಾರಸ್ವಾಮಿ, ದೇವೇಗೌಡ, ರೇವಣ್ಣ ಬಂದಾಗಲೂ ಹೋಗಲು ಸಾಧ್ಯವಾಗಲಿಲ್ಲ. 

ಭಾವನೆಗೆ ಧಕ್ಕೆ ತಂದು ನೋವಾಗಿದ್ದರೆ ನನ್ನ ಕ್ಷಮಿಸಿ : ಅಸಮಾಧಾನಗೊಂಡು ಎದ್ದು ಹೊರನಡೆದ ಎಚ್‌ಡಿಕೆ ...

ನಮಗೆ ಜವಾಬ್ದಾರಿ ಕೊಟ್ಟಿಲ್ಲ ಎಂದರು. ನನ್ನ ಬೇಜಾರು ಏನೆಂಬುದನ್ನು ಹೇಳಿದ್ದೇನೆ. ಮುಂದೆಯೂ ಹೇಳುತ್ತೇನೆ. ಪಕ್ಷ ಬದಲಾವಣೆ ಮಾಡುವ ಬಗ್ಗೆ ಯೋಚನೆ ಮಾಡಿಲ್ಲ. ರಾಜಕಾರಣದಲ್ಲಿ ಮುಂದಿನ ದಿನದಲ್ಲಿ ಏನೇನು ಆಗುತ್ತದೆ ಎಂದು ಹೇಳಲು ಬರುವುದಿಲ್ಲ ಎಂದರು.