ಮೈಸೂರು (ಮಾ.15) :  ಕುಮಾರಸ್ವಾಮಿ ಅವರೆ ಶಕುನಿ, ಮಂದರೆ ಮಾತು ಕೇಳಬೇಡಿ ಎಂದು ಜಿಟಿ ದೇವೇಗೌಡ ಅಸಮಾಧಾನ ಹೊರಹಾಕಿದ್ದಾರೆ. 

ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮಾತನಾಡಿದ ಜಿಟಿ ದೇವೇಗೌಡ ಕುಮಾರಸ್ವಾಮಿ ವಿರುದ್ಧ ಗುಡುಗಿದ್ದಾರೆ.

ಸಾ.ರಾ.ಮಹೇಶ್ ಹೆಸರು ಎತ್ತದೆ ಶಕುನಿ ಎಂದಿದ್ದು,  ಶಕುನಿ ಕೌರವನ ಜೊತೆ ಸೇರಿ ಕೌರವ ವಂಶವನ್ನೇ ನಾಶ ಮಾಡಿದ. ಮಂದರೆ ರಾಮನ ಪಟ್ಟಾಭಿಷೇಕ ತಪ್ಪಿಸಿ ಕಾಡಿಗೆ ಕಳುಹಿಸಿದಳು ಎಂದರು.

 ಸರ್ಕಾರದ ಸ್ಪೀಡ್‌ಗೆ ಬ್ರೇಕ್‌ ಹಾಕೋದಕ್ಕೆ ಸೀಡಿ ಷಡ್ಯಂತ್ರ : ಸಾಹುಕಾರ್ ಪರ HDK ಬ್ಯಾಟಿಂಗ್..

ಕುಮಾರಸ್ವಾಮಿ ನಾಟಕದಲ್ಲಿ ಹೇಳುವ ಈ ಪ್ರಸಂಗಗಳಂತೆ ನಡೆದುಕೊಳ್ಳಬೇಡಿ. ನೀವು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು. ಅರ್ಥಪೂರ್ಣವಾಗಿ ತಿಳಿದುಕೊಳ್ಳಿ.  ಅವರು ಹೇಳಿದ್ದನ್ನೇ ಕಾಪಿ, ಜರಾಕ್ಸ್ ಹೊಡೆಯಲು ಹೋಗಬೇಡಿ. ನಿಮ್ಮ ನಾಯಕತ್ವಕ್ಕೆ ಬೆಲೆ ಇದೆ. ಅದಕ್ಕೆ ಕುಂದು ತರುವ ಮಾತು ಆಡಿಲ್ಲ ಎಂದು ಜಿ ಟಿ ದೇವೇಗೌಡ ಅಸಮಾಧಾನ ಹೊರಹಾಕಿದರು. 

ಇದೀಗ ಮೈಮುಲ್ ಚುನಾವಣೆ ಸಂಬಂಧ ಪೈಪೋಟಿ ನಡೆಯುತ್ತಿದ್ದು, ಎಚ್‌ಡಿಕೆ ಹಾಗೂ ಜಿಡಿಟಿ ಅವರದ್ದೇ ಬಣದ ನಡುವೆ ಪೈಪೋಟಿ ನಡೆಯುತ್ತಿದೆ.