Asianet Suvarna News Asianet Suvarna News

ಚಾಮರಾಜನಗರ: ಕಡವೆ ಬೇಟೆಗೆ ಕಾಡಿಗೆ ನುಗ್ಗಿದ್ದ ಬೇಟೆಗಾರರ ತಂಡ, ಅರಣ್ಯದಲ್ಲಿ ನಡೀತು ಗುಂಡಿನ ಚಕಮಕಿ

ಈ ಸಮಯದಲ್ಲೇ ಕಡವೆ ಮಾಂಸವನ್ನು ಚೀಲಕ್ಕೆ ತುಂಬಿ ಹೊತ್ತೊಯ್ಯುವ ವೇಳೆ ಅರಣ್ಯದ ಗಸ್ತಿನಲ್ಲಿದ್ದ ಕಳ್ಳಬೇಟೆ ಶಿಬಿರದ ಅರಣ್ಯ ಸಿಬ್ಬಂದಿ ಕಣ್ಣಿಗೆ ಬಿದ್ದಿದ್ದಾರೆ. ಈ ವೇಳೆ ಅರಣ್ಯ ಸಿಬ್ಬಂದಿ ಏರ್ ಫೈರ್ ಮಾಡಿ ಬೇಟೆಗಾರರಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಅರಣ್ಯ ಸಿಬ್ಬಂದಿ  ಮೇಲೆ ಗುಂಡಿನ ದಾಳಿ ನಡೆಸಿದ್ದ ಬೇಟೆಗಾರರು 

Group of Armed Hunters who Entered the Forest to Hunt Animal in Chamarajanagara grg
Author
First Published Nov 5, 2023, 9:49 PM IST

ವರದಿ- ಪುಟ್ಟರಾಜು. ಆರ್. ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ(ನ.05):  ಅದು ಅರಣ್ಯದಲ್ಲಿ ಪ್ರಾಣಿಗಳನ್ನು ಬೇಟೆಯಾಡುವ ಗ್ಯಾಂಗ್. ರಾತ್ರೋರಾತ್ರಿ ಅರಣ್ಯ ಪ್ರವೇಶಿಸಿ  120 ಕೆಜಿ ತೂಕದ ಒಂದು ಕಡವೆ ಬೇಟೆಯಾಡಿದ್ದರು. ಕಡವೆಗೆ ಫೈರ್ ಮಾಡುವ  ಶಬ್ದ ಕೇಳ್ತಿದ್ದಂತೆ ಅರಣ್ಯ ಸಿಬ್ಬಂದಿ ಅಲರ್ಟ್ ಆಗಿದ್ರು, ಕಳ್ಳಬೇಟೆ ಶಿಬಿರದ ಸಿಬ್ಬಂದಿ ಸರ್ಚಿಂಗ್ ನಡೆಸಿದ್ದರು. ಈ ವೇಳೆ ಕಡವೆ ಬೇಟೆಯಾಡಿದ ಗ್ಯಾಂಗ್ ಅರಣ್ಯ ಸಿಬ್ಬಂದಿ ಕಣ್ಣಿಗೆ ಬಿದ್ದಿದೆ. ಈ ವೇಳೆ ಬೇಟೆಗಾರರು ತಪ್ಪಿಸಿಕೊಳ್ಳಲು ಅರಣ್ಯ ಸಿಬ್ಬಂದಿ ಮೇಲೆ ಫೈರಿಂಗ್ ನಡೆಸಿದ್ದಾರೆ. ಗುಂಡಿನ ಚಕಮಕಿ ವೇಳೆ ಅರಣ್ಯ ಸಿಬ್ಬಂದಿ ಗುಂಡು ಒಬ್ಬ ಬೇಟೆಗಾರನ ಎದೆ ಸೀಳಿದೆ. ಇದೆಲ್ಲಾ ನಡೆದಿದ್ದು ಎಲ್ಲಿ?  ಬೇಟೆಗಾರರ ಬಗ್ಗೆ ಮಾಹಿತಿ ಹೇಗೆ ಸಿಕ್ತು ಅನ್ನೋ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..

ಹುಲಿಸಂರಕ್ಷಿತಾರಣ್ಯದಲ್ಲಿ ಸತ್ತು ಬಿದ್ದಿರುವ ವ್ಯಕ್ತಿ. ಪರಿಶೀಲನೆ ನಡೆಸ್ತಿರೋ ಪೊಲೀಸ್, ಅರಣ್ಯ ಇಲಾಖೆ ಸಿಬ್ಬಂದಿ ಮತ್ತೊಂದೆಡೆ ಮಗನನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಕುಟುಂಬಸ್ಥರು. ಯೆಸ್ ಇದೆಲ್ಲಾ ನಮಗೆ ಕಂಡುಬಂದಿದ್ದು ಬಂಡೀಪುರ ಹುಲಿಸಂರಕ್ಷಿತಾರಣ್ಯದಲ್ಲಿ. ತಡರಾತ್ರಿ ಕಾಡು ಪ್ರಾಣಿಗಳನ್ನು  ಬೇಟೆಯಾಡಲೂ 10 ಮಂದಿ ಬೇಟೆಗಾರರ ತಂಡ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಮದ್ದೂರು ವಲಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ರಾತ್ರೋರಾತ್ರಿ ಈ ಗ್ಯಾಂಗ್ ಬೇಟೆಗಾಗಿ ಕಾದಿದ್ದಾರೆ ಈ ವೇಳೆ ಇವರ ಮುಂದೆ  ಕಡವೆಯೊಂದು ಬೇಟೆಗಾರರ ಕಣ್ಣಿಗೆ ಬಿದ್ದಿದೆ.  ತಕ್ಷಣ ಕಡವೆ ಮೇಲೆ ಫೈರಿಂಗ್ ಮಾಡಿ ಬೇಟೆಯಾಡಲಾಗಿದೆ ಈ ವೇಳೆಗಾಗಲೆ ಅರಣ್ಯ ಇಲಾಖೆಯ ಕ್ಯಾಂಪ್ ನಲ್ಲಿದ್ದ ಸಿಬ್ಬಂದಿಗೆ ಫೈರಿಂಗ್ ಶಬ್ದ ಕೇಳಿಸುತ್ತಿದ್ದಂತೆಯೆ ಆಲರ್ಟ ಆದ ಸಿಬ್ಬಂದಿ ಬೇಟೆಗಾರರ ಹುಡುಕಾಟ ಪ್ರಾರಂಬಿಸಿದ್ದಾರೆ. 

ಚಾಮರಾಜನಗರ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಕಾಂಗ್ರೆಸ್‌ನಲ್ಲಿ ಭಾರೀ ಪೈಪೋಟಿ!

ಈ ಸಮಯದಲ್ಲೇ ಕಡವೆ ಮಾಂಸವನ್ನು ಚೀಲಕ್ಕೆ ತುಂಬಿ ಹೊತ್ತೊಯ್ಯುವ ವೇಳೆ ಅರಣ್ಯದ ಗಸ್ತಿನಲ್ಲಿದ್ದ ಕಳ್ಳಬೇಟೆ ಶಿಬಿರದ ಅರಣ್ಯ ಸಿಬ್ಬಂದಿ ಕಣ್ಣಿಗೆ ಬಿದ್ದಿದ್ದಾರೆ. ಈ ವೇಳೆ ಅರಣ್ಯ ಸಿಬ್ಬಂದಿ ಏರ್ ಫೈರ್ ಮಾಡಿ ಬೇಟೆಗಾರರಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಬೇಟೆಗಾರರು ಅರಣ್ಯ ಸಿಬ್ಬಂದಿ  ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಪ್ರಾಣ ಉಳಿಸಿಕೊಳ್ಳಲೂ ಅರಣ್ಯ ಸಿಬ್ಬಂದಿ ಕೂಡ ಫೈರಿಂಗ್ ಮಾಡಿದ್ದು ಈ ವೇಳೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ಬೇಟೆಗಾರ ಮನು ಎಂಬಾತನಿಗೆ ಗುಂಡು ಬಿದ್ದಿದ್ದು ಸ್ಥಳದಲ್ಲೆ ಸಾವನ್ನಪ್ಪುತ್ತಿದ್ದಂತೆಯೆ ಉಳಿದ ಒಂಬತ್ತು ಮಂದಿ ಬೇಟೆಗಾರರು ಪರಾರಿಯಾಗಿದ್ದಾರೆ..

ಬಂಡಿಪುರ ಅರಣ್ಯದಲ್ಲಿ ಗುಂಡಿನ ಚಕಮಕಿ ನಡೆದು ಬೇಟೆಗಾರನ ಸಾವು ಪ್ರಕರಣದಲ್ಲಿ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೋ ಬೇಟಿ ನೀಡಿ   ಮಹಜರು ನಡೆಸಿ 120 ಕೆ.ಜಿ. ಕಡವೆ  ಮಾಂಸ ಒಂದು ಸಿಂಗಲ್ ಬ್ಯಾರೆಲ್ ಗನ್ ಹಾಗು ಪ್ರಾಣಿ ಬೇಟೆಯಾಡುವ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ      ಇನ್ನೂ ಬೇಟೆಗಾರನಿಗೆ ಗುಂಡು ಬಿದ್ದ ತಕ್ಷಣವೇ ಇನ್ನುಳಿದ ಒಂಬತ್ತು ಮಂದಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.ಇದೀಗಾ ಅವರನ್ನು ಬಂಧಿಸಲು ಕೂಡ ತಲಾಶ್ ನಡೆಸಲಾಗ್ತಿದೆ.ಗುಂಡಿನ ಕಾಳಗ ನಡೆದ ಸ್ಥಳಕ್ಕೆ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್ ಸ್ಥಳ ಮಹಜರು ನಡೆಸಿದ್ದಾರೆ.ಈ ವೇಳೆ ಕುಟುಂಬಸ್ಥರು ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ಮನು ಸಾವಿನಿಂದ ನಮಗೆ ನೋವಾಗಿದೆ. ಅರಣ್ಯ ಸಿಬ್ಬಂದಿ ಕಾಲಿಗೆ ಗುಂಡು ಹೊಡೆದಿದ್ದರು ಕೂಡ ಹೇಗೊ ಬದುಕುತ್ತಿದ್ದ ಹೀಗಾ ಜೀವ ಹೋಗಿದೆ.  ಆದರೆ ಮಗನ ತಪ್ಪಿನ ಅರಿವಿಲ್ಲದೆ ಅರಣ್ಯ ಇಲಾಖೆ ಪರಿಹಾರ ಕೊಡಬೇಕು ಅಂತಾ ಅಳಲು ತೋಡಿಕೊಳ್ತಿದ್ದಾರೆ.

ಒಟ್ನಲ್ಲಿ ಕಾಡು ಪ್ರಾಣಿಗಳ ರಕ್ಷಣೆಗೆ  ಕಾಡು ಪ್ರಾಣಿಗಳನ್ನು ಬೇಟೆಯಾಡಲು ಹೋಗಿದ್ದ ಗ್ಯಾಂಗ್ ಜೊತೆ ಪ್ರಾಣವನ್ನೆ ಪಣಕ್ಕಿಟ್ಟು ಅರಣ್ಯ ಸಿಬ್ಬಂದಿ  ಹೊರಾಡಿದ್ದಾರೆ.  ಇದೀಗಾ ಬೇಟೆಯಾಡಲೂ ಬಂದಿದ್ದ ಒಬ್ಬ ಮೃತಪಟ್ಟಿದ್ದು, ಇನ್ನುಳಿದ ಒಂಬತ್ತು ಮಂದಿಯ ಬಂಧನಕ್ಕೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಸ್ಪೆಷಲ್ ಟೀಂ ಮೂಲಕ ಬಂಧನಕ್ಕೆ ಜಾಲ ಎಣೆಯುತ್ತಿದ್ದಾರೆ. ಇತ್ತಿಚ್ಚಿನ ದಿನಗಳಲ್ಲಿ ಅರಣ್ಯಕ್ಕೆ ನುಗ್ಗಿ ಬೇಟೆಯಾಡುವ ಕೃತ್ಯ ಕೂಡ ಹೆಚ್ಚಾಗ್ತಿರೋದು ಆತಂಕಕಾರಿ ಬೆಳವಣಿಗೆಯಾಗಿದೆ. ಅರಣ್ಯ ಇಲಾಖೆ ಮತ್ತಷ್ಟು ಎಚ್ಚರಿಕೆ ವಹಿಸಬೇಕಿದೆ.

Follow Us:
Download App:
  • android
  • ios