ಭತ್ತಕ್ಕೆ ಜಿಗಿಹುಳು ಕಾಟ: ಗದ್ದೆಗಳಿಗೆ ವಿಜ್ಞಾನಿಗಳ ಭೇಟಿ
- ಭತ್ತಕ್ಕೆ ಜಿಗಿಹುಳು ಕಾಟ: ಗದ್ದೆಗಳಿಗೆ ವಿಜ್ಞಾನಿಗಳ ಭೇಟಿ
- ಕೀಟಬಾಧೆ ಹತೋಟಿಗೆ ವಿವಿಧ ಸಲಹೆ ನೀಡಿದ ವಿಜ್ಞಾನಿಗಳು
ಶಿರಸಿ (ನ.9) : ಭತ್ತದ ಬೆಳೆ ರೈತರ ಕೈಗೆ ಬರುವ ಈ ಸಂದರ್ಭದಲ್ಲಿ ಕಂದು ಜಿಗಿಹುಳು ಕಾಟ ಆರಂಭವಾಗಿದೆ. ಶಿರಸಿ, ತಾಲೂಕಿನಲ್ಲಿ ಭತ್ತದಲ್ಲಿ ಬಿಳಿ ಬೆನ್ನಿನ ಜಿಗಿಹುಳು ಮತ್ತು ಕಂದು ಜಿಗಿಹುಳುವಿನ ಬಾಧೆ ಕಂಡು ಬಂದಿದೆ.
ಕೃಷಿ ಬೆಲೆ ಆಯೋಗಕ್ಕೆ 4 ತಿಂಗಳಿಂದ ಅಧ್ಯಕ್ಷರೇ ಇಲ್ಲ!
ತಾಲೂಕಿನ ಬನವಾಸಿ ಹೋಬಳಿಯಲ್ಲಿ ಈ ಸಮಸ್ಯೆ ತೀವ್ರವಾಗಿದೆ. ಇದು ಭತ್ತಕ್ಕೆ ಮಾರಕವಾಗಿರುವ ಪ್ರಮುಖ ಕೀಟ. ಇದರ ಹಾವಳಿಯಿಂದ ರೈತರಿಗೆ ಶೇ. 10- 90ರಷ್ಟುಇಳುವರಿಯಲ್ಲಿ ಮತ್ತು ಹುಲ್ಲಿನಲ್ಲಿ ನಷ್ಟವಾಗುತ್ತದೆ.
ವಾತಾವರಣದಲ್ಲಿ ಏರುಪೇರಾದಾಗ ಅಂದರೆ ಅತೀ ಹೆಚ್ಚು ತೇವಾಂಶ ಮತ್ತು ಅತೀ ಹೆಚ್ಚು ಉಷ್ಣತೆ ಈ ಕೀಟಗಳಿಗೆ ಪೂರಕವಾದ ಅಂಶವಾಗಿದೆ. ಅಲ್ಲದೇ ಅಪರೂಪವಾಗಿ ಬರುವ ಈ ಕೀಟದ ನಿರ್ವಹಣೆ ರೈತರಿಂದ ಸಾಧ್ಯವಾಗದಂತಾಗಿದೆ. ಇದು ವೇಗವಾಗಿ ವೃದ್ಧಿಹೊಂದಿ ಕೇವಲ ಒಂದೇ ವಾರದಲ್ಲಿ ಇಡೀ ಬೆಳೆಯನ್ನು ನಾಶ ಮಾಡುವ ಅತೀವ ಶಕ್ತಿ ಹೊಂದಿದ ಕೀಟವಾಗಿದ್ದು, ಭತ್ತದ ಬುಡದಲ್ಲಿ ರಸ ಹೀರುವುದರಿಂದ ಗರಿಗಳು ಹಳದಿ ಬಣ್ಣಕ್ಕೆ ತಿರುಗಿ, ಪೈರು ಸುಟ್ಟಂತೆ ಮತ್ತು ಕುಸಿದಂತೆ ಕಾಣತ್ತದೆ. ಇದರಿಂದ ಭತ್ತದ ಕಾಳು ತುಂಬುದೇ ಜೊಳ್ಳಾಗುತ್ತದೆ. ಅಲ್ಲದೇ ಹುಲ್ಲು ಕೂಡ ದುರ್ವಾಸನೆಯಿಂದ ಹಾಳಾಗುತ್ತಿದೆ.
ರೈತರ ಹೊಲಗಳಿಗೆ ನಗರದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಕೃಷಿ ಇಲಾಖೆ ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ರೈತರು ಕೀಟನಾಶಕಗಳ ಬಳಕೆ ಮಾಡುವುದು ಅನಿವಾರ್ಯವಾಗಿದೆ. ಈ ಕೀಟದ ಬಾಧೆ ಕಂಡುಬಂದಾಗ ಗದ್ದೆಯಲ್ಲಿನ ನೀರನ್ನು ತೆಗೆಯಬೇಕು. ಕೀಟನಾಶಕಗಳಾದ 0.3 ಮಿಲಿ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ…. ಅಥವಾ 2.5 ಮಿಲೀ ಕ್ಲೋಪೈರ್ ರಿಫಾಸ್ 20 ಇ.ಸಿ ಅಥವಾ 0.2 ಗ್ರಾಂ ಥಯೋಮಿಥಾಕ್ಸಾಮ್ 25 ಡಬ್ಲೂಜಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಾಧ್ಯವಾದಷ್ಟುಬುಡಕ್ಕೆ ಸಿಂಪಡಿಸಬೇಕು ಎಂದು ಸಲಹೆ ನೀಡಿದ್ದಾರೆ.
ಬೆಲೆ ಕುಸಿತ: ಹೂವು ರಸ್ತೆಗೆ ಸುರಿದು ಕಣ್ಣೂರಿನ ರೈತರು ಕಣ್ಣೀರು
ಭತ್ತದಲ್ಲಿ ಅನೇಕ ಬಗೆಯ ಜೇಡ, ಗುಲಗಂಜಿ, ಹುಳುಗಳು ಮತ್ತು ತಿಗಣಿಗಳು ಇದ್ದು ಹಾನಿಕಾರಕ ಕೀಟಗಳನ್ನು ಹಿಡಿದುಕೊಂಡು ತಿನ್ನುತ್ತವೆ. ಇವುಗಳನ್ನು ಪೋ›ತ್ಸಾಹಿಸುವುದು ಅತೀ ಅವಶ್ಯಕ. ಆದ್ದರಿಂದ ಸಿಂಪರಣೆಯನ್ನು ಸಾಧ್ಯವಾದಷ್ಟುಪೈರಿನ ಬುಡಕ್ಕೆ ತಾಗುವಂತೆ ಮಾಡಬೇಕು. ಕೀಟನಾಶಕ ಬದಲಿಗೆ ಬೇವು ಆಧಾರಿತ ಕೀಟನಾಶಕಗಳನ್ನು ಸಿಂಪಡಿಸಬಹುದು. ಪ್ರತಿ ಎಕರೆಗೆ 200 ರಿಂದ 250 ಲೀ. ಸಿಂಪರಣಾ ದ್ರಾವಣ ಬಳಸಬೇಕು. ಹರಳು ರೂಪದ ಕೀಟನಾಶಕ ಕಾರ್ಬೊಫ್ಯುರಾನ್ ಉಪಯೋಗಿಸಿದಾಗ 30 ದಿನಗಳ ವರೆಗೆ ಮೇವು ಮತ್ತು ಕಾಳನ್ನು ಬಳಕೆಗೆ ಉಪಯೋಗಿಸಬಾರದು ಎಂದು ತಾಲೂಕು ಕೃಷಿ ಅಧಿಕಾರಿ ಮಧುಕರ ನಾಯ್ಕ ತಿಳಿಸಿದ್ದಾರೆ.