ಬೆಲೆ ಕುಸಿತ: ಹೂವು ರಸ್ತೆಗೆ ಸುರಿದು ಕಣ್ಣೂರಿನ ರೈತರು ಕಣ್ಣೀರು
ದಸರಾ, ದೀಪಾವಳಿ ಸರಣಿ ಹಬ್ಬಗಳಲ್ಲಿ ಹೂಗಳ ಬೆಲೆ ಗಗನಕ್ಕೇರಿತ್ತು. ಹೊಸ ಹೊಸ ಮಾರುಕಟ್ಟೆಗಳು ತಲೆ ಎತ್ತಿದ್ದವು. ಅದರಲ್ಲೂ ಚೆಂಡುಹೂ, ಮಲ್ಲಿಗೆ, ಕನಕಾಂಬರ ಹೂವುಗೆ ಭಾರೀ ಬೇಡಿಕೆ ಇದ್ದಿದ್ದರಿಂದ ಬೆಲೆಯೂ ದುಪ್ಪಟ್ಟಾಗಿತ್ತು. ಹೂ ಬೆಳೆಗಾರರು ಸಂತಸದಲ್ಲಿದ್ದರು. ಇದೀಗ ಹಬ್ಬಗಳು ಮುಗಿಯುತ್ತಿದ್ದಂತೆ ಹೂಗಳನ್ನು ಕೇಳುವವರು ಇಲ್ಲದಂತಾಗಿದೆ.
ಕೋಲಾರ (ನ.5) : ನವರಾತ್ರಿ, ದಸರಾ, ದೀಪಾವಳಿ ಸರಣಿ ಹಬ್ಬಗಳಲ್ಲಿ ಹೂಗಳ ಬೆಲೆ ಗಗನಕ್ಕೇರಿತ್ತು. ಹೊಸ ಹೊಸ ಮಾರುಕಟ್ಟೆಗಳು ತಲೆ ಎತ್ತಿದ್ದವು. ಅದರಲ್ಲೂ ಚೆಂಡುಹೂ, ಮಲ್ಲಿಗೆ, ಕನಕಾಂಬರ ಹೂವುಗೆ ಭಾರೀ ಬೇಡಿಕೆ ಇದ್ದಿದ್ದರಿಂದ ಬೆಲೆಯೂ ದುಪ್ಪಟ್ಟಾಗಿತ್ತು. ಹೂ ಬೆಳೆಗಾರರು ಸಂತಸದಲ್ಲಿದ್ದರು. ಇದೀಗ ಹಬ್ಬಗಳು ಮುಗಿಯುತ್ತಿದ್ದಂತೆ ಹೂಗಳನ್ನು ಕೇಳುವವರು ಇಲ್ಲದಂತಾಗಿದೆ. ಹಬ್ಬದ ದಿನಗಳಲ್ಲಿ ದಿನಕ್ಕೆ ಮಾರಾಟವಾಗಿ ಖಾಲಿಯಾಗಿಬಿಡುತ್ತಿದ್ದ ಹೂವು, ಈಗ ಎರಡು ಕೆಜಿ ಮಾರಾಟವಾಗದೆ ಹಾಗೆ ಉಳಿದಿರುವುದರಿಂದ ಎರಡು ಮೂರು ದಿನದಲ್ಲೇ ಕಣ್ಣುಮುಂದೆ ಕೊಳೆತುಹೋಗುತ್ತಿದೆ. ಇನ್ನೊಂದೆಡೆ ಹಬ್ಬ ಮುಗಿಯುತ್ತಿದ್ದಂತೆ ಹೂವಿನ ಬೆಲೆ ಭಾರೀ ಇಳಿಕೆಯಾಗಿರುವುದು. ರೈತರನ್ನು ಚಿಂತೆಗೀಡುಮಾಡಿದೆ.
ಜಿಲ್ಲೆಯಲ್ಲಿ ಬಹಳಷ್ಟು ರೈತರಿಗೆ ಹೂವು ಬೆಳೆಯನ್ನೇ ನೆಚ್ಚಿಕೊಂಡಿದ್ದಾರೆ. ಹಬ್ಬದ ಸಮಯವಾದ್ದರಿಂದ ಇತರೆ ಬೆಳೆ ಬೆಳೆಯದೆ ಹೂವು ಮಾತ್ರ ಬೆಳೆದಿದ್ದರು. ಇದೀಗ ಜಮೀನಿನಲ್ಲಿ ಬೆಳೆ ಹೂ ಬೆಲೆ ಇಳಿಕೆಯಿಂದ ಮಾರಾಟವಾಗದ ಕೊಳೆಯುತ್ತಿದೆ. ದಿಢೀರ್ ಬೆಲೆ ಇಳಿಕೆಯಿಂದ ರೈತರಿಗೆ ಸಾಲದ ಹೊರೆ ಬಿದ್ದಿದೆ. ಆರ್ಥಿಕ ತೊಂದರೆಗೆ ಸಿಲುಕಿದ್ದಾರೆ.
ಹೂವು ಮಾರಾಟವಾಗದ ಹಿನ್ನೆಲೆ ಕೋಲಾರ ನಗರ ಹೊರವಲಯದ ಕೊಂಡರಾಜನಹಳ್ಳಿ ರಾಷ್ಟ್ರೀಯ ಹೆದ್ದಾರಿಗೆ ಸುರಿದು ಕಣ್ಣೂರಿನ ರೈತರು ಕಣ್ಣೀರು ಹಾಕಿರುವ ಘಟನೆ ನಡೆದಿದೆ. ಮಾರುಕಟ್ಟೆಯಲ್ಲಿ ಹೂವಿಗೆ ಬೆಲೆ ಇಲ್ಲದಾಗಿದೆ. ಹಾಕಿದ ಬಂಡವಾಳವೂ ವಾಪಸ್ಸು ಬಂದಿಲ್ಲ. ಮೈಮೇಲೆ ಸಾಲ ಮಾಡಿಕೊಂಡು ಬೆಳೆದಿದ್ದ ರೈತರು ಇದೀಗ ಕೆಜಿಗೆ 2-5 ರೂಪಾಯಿಗೆ ಮಾರಾಟವಾಗುತ್ತಿದೆ. ಇದರಿಂದ ಬಂಡವಾಳವೂ ಬರುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ರೈತರು ಹೂಗಳನ್ನು ಕಿತ್ತು, ರಸ್ತೆ ಮೇಲೆ ಎಸೆದು ಆಕ್ರೋಶ ಹೊರಹಾಕಿದ್ದಾರೆ
ಚಳಿ ಎಫೆಕ್ಟ್: ಹೂವಿನ ಪೂರೈಕೆ ಇಳಿಕೆ, ದರ ಭಾರೀ ಏರಿಕೆ..!