Asianet Suvarna News Asianet Suvarna News

ಹೊರ ರಾಜ್ಯಕ್ಕೆ ದ್ರಾಕ್ಷಿ ಸಾಗಣೆಗೆ ಅನುಮತಿ

ಬೆಂಗಳೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಬೆಳೆದ ದ್ರಾಕ್ಷಿಯನ್ನು ಹೊರ ರಾಜ್ಯಕ್ಕೆ ಸಾಗಣೆ ಮಾಡಲು ಅನುಮತಿ ನೀಡಲಾಗಿದೆ ಎಂದು ರಾಜ್ಯ ಸರ್ಕಾರ, ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

 

Grapes to be transported to other states from karnataka
Author
Bangalore, First Published Apr 26, 2020, 3:09 PM IST

ಕೋಲಾರ(ಏ.26):  ಬೆಂಗಳೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಬೆಳೆದ ದ್ರಾಕ್ಷಿಯನ್ನು ಹೊರ ರಾಜ್ಯಕ್ಕೆ ಸಾಗಣೆ ಮಾಡಲು ಅನುಮತಿ ನೀಡಲಾಗಿದೆ ಎಂದು ರಾಜ್ಯ ಸರ್ಕಾರ, ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರೈತರ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಸೌಲಭ್ಯ ಇಲ್ಲವಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರಿ ವಕೀಲರು ಈ ಮಾಹಿತಿ ನೀಡಿದರು.

ಬಾರ್ ಇಲ್ಲದಿದ್ರೂ ಮದ್ಯಪ್ರಿಯರಿಗಿಲ್ಲ ಟೆನ್ಶನ್! ಇಲ್ಲಿ ಮನೆಯಲ್ಲೆ ರೆಡಿಯಾಗುತ್ತೆ!

ಈ ವರ್ಷದಲ್ಲಿ ಬೆಂಗಳೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರದ ಸುಮಾರು 3,815 ಹೆಕ್ಟೇರ್‌ ಪ್ರದೇಶದಲ್ಲಿ ಅಂದಾಜು 88,771 ಮೆಟ್ರಿಕ್‌ ಟನ್‌ ದ್ರಾಕ್ಷಿ ಬೆಳೆಯಲಾಗಿದೆ. ಲಾಕ್‌ಡೌನ್‌ ಆರಂಭದ ದಿನಗಳಲ್ಲಿ ಅಂತಾರಾಜ್ಯ ಸಂಚಾರವನ್ನು ನಿಷೇಧ ಮಾಡಿದ ಪರಿಣಾಮ ದ್ರಾಕ್ಷಿ ಮಾರುಕಟ್ಟೆಸೌಲಭ್ಯ ಇಲ್ಲವಾಗಿತ್ತು.

ರಂಜಾನ್‌ ಖರೀದಿ ಅಬ್ಬರದಲ್ಲಿ ಲಾಕ್‌ಡೌನ್ ಮರೆತ ಜನ, ಮಾರ್ಕೆಟ್ ಫುಲ್ ರಶ್

ಇದೀಗ ದ್ರಾಕ್ಷಿ ಮಾರಾಟಕ್ಕೆ ಸೂಕ್ತ ಮಾರುಕಟ್ಟೆವ್ಯವಸ್ಥೆ ಕಲ್ಪಿಸಲಾಗಿದೆ. ಕೇರಳ, ಒಡಿಶಾ, ದೆಹಲಿ, ತೆಲಂಗಾಣ ಸೇರಿದಂತೆ ಇತರೆ ಹೊರ ರಾಜ್ಯಗಳಿಗೆ ದ್ರಾಕ್ಷಿ ಸರಬರಾಜು ಮಾಡಲು ರೈತರಿಗೆ ಅನುಮತಿ ನೀಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

Follow Us:
Download App:
  • android
  • ios