ಮಂಗಳೂರು(ಏ.25): ಮನೆಯಲ್ಲಿ ಅಮಲು ಪದಾರ್ಥ ಸೇವಿಸಿದ ಮಗ ತಾಯಿ ಹಾಗೂ ತನ್ನಿಬ್ಬರು ಪುಟ್ಟಮಕ್ಕಳಿಗೆ ಬಾಸುಂಡೆ ಬರುವಂತೆ ಹೊಡೆದಿದ್ದು, ಏಟಿಗೆ ಹೆದರಿ ರಾತ್ರಿಯಿಡೀ ಪಕ್ಕದ ಗುಡ್ಡದಲ್ಲಿ ತಂಗಿದ್ದು, ಇದೀಗ ಸ್ಥಳೀಯರ ಸಹಕಾರದಿಂದ ಆ ಮೂವರಿಗೂ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಂಪಾಜೆ ಗ್ರಾಮದ ಗೂನಡ್ಕ ಬೈಲೆ ಸಮೀಪದ ಗುಳಿಗಪಾರೆ ಎಂಬಲ್ಲಿ ಉಮೇಶ ಎಂಬಾತ ಅಮಲು ಪದಾರ್ಥ ಸೇವಿಸಿ ತನ್ನ 84 ವರ್ಷ ಪ್ರಾಯದ ತಾಯಿ ಹಾಗೂ ಸಣ್ಣ ಮಕ್ಕಳಿಬ್ಬರಿಗೆ ಮನಬಂದಂತೆ ಹೊಡೆದು ಮನೆಯಿಂದ ಹೋಗುವಂತೆ ಬೆದರಿಸಿದ್ದಾನೆ.

30 ವರ್ಷಗಳ ನಂತರ ಮರಳಿ ಬಂದ ಡಾಲ್ಫಿನ್, ಇದೆಕ್ಕೆಲ್ಲ ಕಾರಣ ಕೊರೋನಾ!

ಪ್ರತಿ ದಿನ ಮನೆಯಲ್ಲಿ ಗಲಾಟೆ ನಡೆಯುತ್ತಿದ್ದು, ಗಂಡನ ಜಗಳದಿಂದ ಪತ್ನಿ ತಿಂಗಳ ಹಿಂದೆ ದೇಲಂಪಾಡಿಯ ತನ್ನ ತವರು ಮನೆಗೆ ಹೋಗಿದ್ದಾರೆ. ಪತ್ನಿ ಮನೆ ಬಿಟ್ಟು ಹೋಗುವಾಗ ಮಕ್ಕಳನ್ನು ಕರೆದುಕೊಂಡು ಹೋಗಲು ಪತಿ ಉಮೇಶ ಬಿಡಲಿಲ್ಲವೆನ್ನಲಾಗಿದೆ. ಪತ್ನಿ ಹೋದ ಬಳಿಕ ತಾಯಿ ಹಾಗೂ ಮಕ್ಕಳಿಗೆ ಉಮೇಶ್‌ ಹೊಡೆಯಲು ಆರಂಭಿಸಿದ್ದಾನೆ. ಗುರುವಾರ ಸಂಜೆ ಜಗಳ ಆರಂಭಿಸಿದ್ದ ಉಮೇಶ, ತಾಯಿ ಹಾಗೂ ಮಕ್ಕಳಿಗೆ ಬಾಸುಂಡೆ ಬರುವಂತೆ ಹೊಡೆದಿದ್ದಾನೆ.

ಲಾಕ್ ಡೌನ್ ಇನ್ನೊಂದು ಮುಖ; ಆಹಾರ ಸಿಗದೇ ಪ್ರಾಣಿಗಳ ಪರದಾಟ

ಇದರಿಂದ ಹೆದರಿದ ಅಜ್ಜಿ ಮೊಮ್ಮಕ್ಕಳೊಂದಿಗೆ ಗುರುವಾರ ರಾತ್ರಿ ಮನೆ ಸಮೀಪದ ಗುಡ್ಡದಲ್ಲಿ ತಂಗಿದ್ದಾರೆ. ಶುಕ್ರವಾರ ಸ್ಥಳೀಯರ ಸಹಕಾರದೊಂದಿಗೆ ಸ್ಥಳೀಯ ಪೊಲೀಸ್‌ ಹೊರಠಾಣೆಗೆ ಹೋಗಿ ಅಲ್ಲಿಂದ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾರೆ. ಅಲ್ಲಿ ವೈದ್ಯಾಧಿಕಾರಿಗಳು ಅಜ್ಜಿ ಗಂಗಮ್ಮ ಹಾಗೂ ಮಕ್ಕಳಾದ ರಾಜೇಶ್‌ ಮತ್ತು ಅನುಷಾಳನ್ನು ತಪಾಸಣೆ ನಡೆಸಿದಾಗ ಬಾಸುಂಡೆಗಳು ಕಂಡು ಬಂದವು.