30 ವರ್ಷಗಳ ನಂತರ ಮರಳಿ ಬಂದ ಡಾಲ್ಫಿನ್, ಇದೆಕ್ಕೆಲ್ಲ ಕಾರಣ ಕೊರೋನಾ!

ಕೋಲ್ಕತ್ತಾ ತೀರಕ್ಕೆ ಬಂದ ಅಪರೂಪದ ಡಾಲ್ಫಿನ್ ಗಳು/ ಕ್ಯಾಮರಾದಲ್ಲಿ ಸೆರೆಯಾದ ಡಾಲ್ಫಿನ್ ಗಳ ಆಟ/ ಇದೆಲ್ಲ ಲಾಕ್ ಡೌನ್ ಪರಿಣಾಮ/ ಶುದ್ಧವಾದ ನದಿ

After 30 Years South Asian River Dolphins Return To The Ghats Of Kolkata

ಕೋಲ್ಕತ್ತಾ(ಏ. 24) ಈ  ಸುದ್ದಿಯನ್ನು ನೀವು ಊಹೆ ಮಾಡಲು ಸಾಧ್ಯವಿಲ್ಲ. ಒಂದರ್ಥದಲ್ಲಿ ಲಾಕ್ ಡೌನ್ ಪ್ರಾಣಿ-ಪಕ್ಷಿ-ಜಲಚರಗಳಿಗೆ ಲಾಭವನ್ನೇ ತಂದಿದೆ, ಹೌದು ಕೋಲ್ಕತ್ತಾದ ತೀರಕ್ಕೆ ದಕ್ಷಿಣ ಏಷ್ಯಾದ ಅಪರೂಪದ ಡಾಲ್ಫಿನ್ ಬಂದಿವೆ.

ಸುಮಾರು 30 ವರ್ಷಗಳ ನಂತರ ಈ ದೃಶ್ಯ ನೋಡಸಿಕ್ಕಿದೆ. ರೀವರ್ ಡಾಲ್ಫಿನ್ ಮನಸೋ ಇಚ್ಛೆ ಆಟಡುತ್ತಿವೆ.  ಲಾಕ್ ಡೌನ್ ಪರಿಣಾಮ ಹೂಗ್ಲಿ ನದಿ ಸ್ವಚ್ಛವಾಗಿದೆ. ಮಾಲಿನ್ಯ ಪ್ರಮಾಣ ಗಣನೀಯವಾಗಿ ಇಳಿದಿದೆ.  ಬಾಬುಘಾಟ್ ನಲ್ಲಿ ಜೋಡಿ ಡಾಲ್ಫಿನ್ ಗಳು ಆಟ ಆಡುತ್ತಿವೆ.

ಲಾಕ್ ಡೌನ್ ಇನ್ನೊಂದು ಮುಖ; ಆಹಾರ ಸಿಗದೇ ಪ್ರಾಣಿಗಳ ಪರದಾಟ
 
ಈ ಹಿಂದೆ ಸಹ ಅಂತಾರಾಷ್ಟ್ರೀಯ ಮಾಧ್ಯಮಗಳು ಪ್ರಾಣಿ ಪಕ್ಷಿಗಳ ಸ್ವಚ್ಛಂದ ಆಟ-ಹಾರಾಟವನ್ನು ಸುದ್ದಿ ಮಾಡಿದ್ದವು. ಮಾನವ ತನ್ನ ಸ್ವಾರ್ಥ ಮತ್ತು ದೈನಂದಿನ ಉಪಯೋಗಕ್ಕೆಂದು ನಿಸರ್ಗವನ್ನು ಪ್ರತಿದಿನ ಬಲಿಕೊಡುತ್ತ ಬಂದಿದ್ದಕ್ಕೆ ವರ್ಷಗಳೆ ಕಳೆದುಹೋಗಿದೆ.  ಇಂಥ ದೃಶ್ಯಗಳನ್ನು ಮತ್ತೆ ನೋಡಲು ಸಾಧ್ಯಮಾಡಿದ ಕೊರೋನಾಕ್ಕೆ ಪ್ರಾಣಿಗಳು ಧನ್ಯವಾದ ಹೇಳುತ್ತಾ ಇರಬಹುದೆನೋ? !

ಮಹಾನಗರದಲ್ಲಿಯೂ ಪ್ರಾಣಿಗಳ ಓಡಾಟ ಕಂಡುಬಂದಿದ್ದು ಸುದ್ದಿಯಾಗಿತ್ತು. ರಷ್ಯಾದಲ್ಲೂ ಪ್ರಾಣಿಗಳನ್ನೆ ಹೊರಬಿಡಲಾಗಿತ್ತು. ಒಟ್ಟಿನಲ್ಲಿ  ಮಾನವ ಮನೆ ಒಳಗೆ ಕುಳಿತಿದ್ದರಿಂದ ಮೂಕ ಪ್ರಾಣಿಗಳ ಸ್ವಾತಂತ್ರ್ಯ ಹೆಚ್ಚಾಯಿತು. ನದಿ ಶುದ್ಧವಾಯಿತು. ಸೋಶಿಯಲ್  ಮೀಡಿಯಾ ಈ  ಭಿನ್ನ ಅಭಿಪ್ರಾಯವನ್ನು ಪೋಸ್ಟ್ ಮಾಡುತ್ತ ಬಂದಿದೆ.

 

 

 

Latest Videos
Follow Us:
Download App:
  • android
  • ios