Chikkamagaluru: ಕರ್ತವ್ಯಲೋಪದ ಆರೋಪ: ಗ್ರಾಮ ಪಂಚಾಯತಿ ಪಿಡಿಓ ಗೋಪಾಲಹಾಂಡ ಸಸ್ಪೆಂಡ್!
ಇ ಸ್ವತ್ತು ನಮೂನೆ ವಿತರಣೆಯಲ್ಲಿ ಅಕ್ರಮ ನಡೆದಿರುವ ಆರೋಪ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ವಿದ್ಯಾರಣ್ಯಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೇಳಿಬಂದಿದೆ. ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಪಿಡಿಓ ಗೋಪಾಲ ಹಂಡ ಅವರನ್ನು ಕರ್ತವ್ಯಲೋಪದ ಆರೋಪದ ಮೇರೆಗೆ ಅಮಾನತ್ತುಗೊಳಿಸಿ ಆದೇಶಿಸಲಾಗಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಫೆ.04): ಇ ಸ್ವತ್ತು ನಮೂನೆ ವಿತರಣೆಯಲ್ಲಿ ಅಕ್ರಮ ನಡೆದಿರುವ ಆರೋಪ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ವಿದ್ಯಾರಣ್ಯಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೇಳಿಬಂದಿದೆ. ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಪಿಡಿಓ ಗೋಪಾಲ ಹಂಡ ಅವರನ್ನು ಕರ್ತವ್ಯಲೋಪದ ಆರೋಪದ ಮೇರೆಗೆ ಅಮಾನತ್ತುಗೊಳಿಸಿ ಆದೇಶಿಸಲಾಗಿದೆ.
ತನಿಖೆ ನಡೆಸಿದ ಜಿ.ಪಂ ಉಪಕಾರ್ಯದರ್ಶಿಗಳು: ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನ್ಯಕಾಂತವಾಗಿರುವ ಬಡಾವಣೆಯಲ್ಲಿನ ನಿವೇಶನಗಳಿಗೆ ನಿಯಮಮೀರಿ ಇ-ಸ್ವತ್ತು ನಮೂನೆ ವಿತರಿಸಲಾಗಿರುವ ಆರೋಪದ ಜೊತೆಗೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಗಳ ನಡವಳಿಯನ್ನು ನಿಯಮಾನುಸಾರ ಪೂರ್ಣವಾಗಿ ಗಾಳಿಗೆ ತೂರಿದ ಆರೋಪ ಕೇಳಿಬಂದಿತ್ತು.ಅಲ್ಲದೆ ಗ್ರಾಮ ಪಂಚಾಯಿತಿಯ ಶಬರೀಶ್ ಎಂಬ ಸದಸ್ಯರಿಗೆ ಸಭಾ ಭತ್ಯೆಯನ್ನು ಪಾವತಿಸಿರುವುದಿಲ್ಲವೆಂದು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಿರುವ ದೂರಿನ ಕುರಿತು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿರವರು 01.10.2022 ರಂದು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ತನಿಖೆ ನಡೆಸಿದ್ದರು. ಅದರ ವರದಿಯಂತೆ ಮೇಲ್ನೋಟಕ್ಕೆ ಕರ್ತವ್ಯ ಲೋಪ ಸಾಬೀತಾಗಿದೆ.
ಕನ್ನಡಪ್ರಭ, ಸುವರ್ಣನ್ಯೂಸ್ ‘ರೈತ ರತ್ನ’ ಪ್ರಶಸ್ತಿಗೆ ಆಹ್ವಾನ: 11 ವಿಭಾಗದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ
ಅಮಾನತುಗೊಳಿಸಿ ಸಿಓಇ ಆದೇಶ: ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೇ ನಿವೇಶನಗಳಿಗೆ ಇ-ಸ್ವತ್ತು ನಮೂನೆ ವಿತರಿಸಿರುವುದು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಚನೆಯಾಗಿರುವ ಲೇ ಔಟ್ ಗಳಲ್ಲಿರುವ ನಿವೇಶನಗಳ ದಾಖಲಾತಿ ಕುರಿತು ಸೂಕ್ತ ಕಡತ ನಿರ್ವಹಿಸದೇ ಕರ್ತವ್ಯಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲಾ ಪಂಚಸಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು. ಜಿ ಅಮಾನತುಗೊಳಿಸಿ ಆದೇಶಿಸಲಾಗಿದೆ. ಶೃಂಗೇರಿ ಅಕ್ರಮ ಹಕ್ಕುಪತ್ರ ಹಗರಣದ ಹಕ್ಕುಪತ್ರಗಳಿಗೆ ಗೋಪಾಲ ಹಂಡ ಈ ಸ್ವತ್ತು ನೀಡಿ ನಂತರ ಅದನ್ನು ಡಿಲೀಟ್ ಮಾಡಿ ಅದರಲ್ಲೂ ಅಕ್ರಮ ಎಸಗಿದ್ದರು, ಈ ಕುರಿತು ಸಾಮಾಜಿಕ ಕಾರ್ಯಕರ್ತ ಅಶ್ವಿನ್ ಎಂಬುವವರು ದೂರು ಸಹ ನೀಡಿದ್ದರು.