ಚಾಮರಾಜನಗರ(ಜ.04): ಚುನಾವಣೆ ಎಂದರೇ ಜನರಿಗೆ ಹಣ, ಹೆಂಡ ಹಂಚುವ ಘಟನೆಗಳನ್ನು ನೋಡಿರುತ್ತೀರಿ. ಆದರೆ, ಈ ಘಟನೆ ಸ್ವಲ್ಪ ವಿಭಿನ್ನ. ನೆಚ್ಚಿನ ವ್ಯಕ್ತಿ ಹ್ಯಾಟ್ರಿಕ್‌ ಗೆಲವು ಬಾರಿಸಿದ್ದಕ್ಕೆ ರಾಯಲ್‌ ಎನ್‌ ಫೀಲ್ಡ್‌ ಬೈಕನ್ನೇ ಯುವಕರು ನೀಡಿದ್ದಾರೆ.

- ಹೌದು, ಚಾಮರಾಜನಗರ ತಾಲೂಕಿನ ಹರದನಹಳ್ಳಿ ಗ್ರಾಪಂಗೆ ತಾವರೆಕಟ್ಟೆಮೋಳೆ ಗ್ರಾಮದಿಂದ ಮೂರನೇ ಬಾರಿ ಆಯ್ಕೆಯಾದ ಮಹೇಶ್‌ ಎಂಬವರಿಗೆ ಗ್ರಾಮದ 50ಕ್ಕೂ ಹೆಚ್ಚು ಯುವಕರು ಚಂದಾ ಎತ್ತಿ ಬುಲೆಟ್‌ ಬೈಕನ್ನು ಉಡುಗೊರೆಯಾಗಿ ನೀಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

ಬಿಜೆಪಿ ಲಸಿಕೆ ಮೇಲೆ ಭರವಸೆ ಇಲ್ವಂತೆ, ನಪುಂಸಕರಾಗ್ತಾರಂತೆ...! ಒಳ್ಳೆಯ ಹೊತ್ತಲ್ಲಿ ಇದೆಂಥಾ ಕ್ಯಾತೆ.?

2.48 ಲಕ್ಷ ರು. ಮೌಲ್ಯದ ರಾಯಲ್‌ ಎನ್‌ ಫೀಲ್ಡ್‌ 350 ಅನ್ನು ಯುವಕರು ಉಡುಗೊರೆಯಾಗಿ ನೀಡಿ, ಮತ್ತಷ್ಟುಗ್ರಾಮದ ಅಭಿವೃದ್ಧಿ ಮಾಡುವಂತೆ ಹಾರೈಸಿದ್ದಾರೆ. ಈ ಕುರಿತು ಬೈಕ್‌ ಗಿಫ್ಟ್‌ ಪಡೆದ ಮಹೇಶ್‌ ಮಾತನಾಡಿ, ತಾನು ಬಿಜೆಪಿ ಬೆಂಬಲಿತನಾಗಿದ್ದು, ಹ್ಯಾಟ್ರಿಕ್‌ ಬಾರಿಸುವ ವಿಶ್ವಾಸ ಇತ್ತು.

ಗ್ರಾಮದ ಹತ್ತಾರು ಮಂದಿ ಯುವಕರು ಚಂದಾ ಎತ್ತಿ ಚುನಾವಣೆ ಖರ್ಚು ನೋಡಿಕೊಳ್ಳುವ ಜೊತೆಗೆ ಬೈಕನ್ನು ಗಿಫ್ಟಾಗಿ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಬೈಕ್‌ ಗಿಪ್ಟ್‌ ನೀಡಿದ ಯುವಕರೊಂದಿಗೆ ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.