ಗ್ರಾಮ ಪಂಚಾಯಿತಿ ಸದಸ್ಯ ಕೊರೋನಾ ಸೋಂಕಿತರಿಗೆ ನೆರವಾಗಿ ಗಮನ ಸೆಳೆದಿದ್ದಾರೆ   ಪಾಸಿಟಿವ್‌ ಬಂದ ರೋಗಿಗಳನ್ನು ಕಾಪಾಡುವುದೇ ತನ್ನ ಧ್ಯೇಯ ಎನ್ನುವ ಮುಖಂಡ ತನ್ನದೇ ಸ್ವಂತ ಕಾರಿನಲ್ಲಿ ಗ್ರಾ ಪಂ ಸದಸ್ಯರಿಗೆ ನೆರವು

ವರದಿ : ದುಗ್ಗಳ ಸದಾನಂದ

ನಾಪೋಕ್ಲು (ಜೂ.28):  ಬೇತು ಗ್ರಾಮದಿಂದ ಆರಿಸಿ ಬಂದು ಕಳೆದ ಸಾಲಿನಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿದ್ದು, ಎರಡನೇ ಬಾರಿಗೆ ಅದೇ ಕ್ಷೇತ್ರದಿಂದ ಆರಿಸಿ ಬಂದು ಗ್ರಾಮ ಪಂಚಾಯಿತಿ ಸದಸ್ಯರಾಗಿರುವ ಕಾಳೆಯಂಡ ಸಾಬ ತಿಮ್ಮಯ್ಯ ಕೊರೋನಾ ಸೋಂಕಿತರಿಗೆ ನೆರವಾಗಿ ಗಮನ ಸೆಳೆದಿದ್ದಾರೆ.

ರಾಜ್ಯದಲ್ಲಿ ಇಳಿದ ಕೊರೋನಾ ಕೇಸ್‌: ಪಾಸಿಟಿವಿಟಿ ದರ ಶೇ 2.18ಕ್ಕೆ ಇಳಿಕೆ .

ಕೊರೋನಾ ಎರಡನೇ ಅಲೆಯಿಂದ ಈ ವಿಭಾಗದಲ್ಲಿ ಪಾಸಿಟಿವ್‌ ಬಂದ ರೋಗಿಗಳನ್ನು ಕಾಪಾಡುವುದೇ ತನ್ನ ಧ್ಯೇಯ ಎಂದು ಧೈರ್ಯದಿಂದ ಸುಮಾರು 110ಕ್ಕೂ ಅಧಿಕ ಸೋಂಕಿತರನ್ನು ಸ್ವಂತ ಕಾರಿನಲ್ಲಿ ತಾವೇ ಡ್ರೈವಿಂಗ್‌ ಮಾಡಿಕೊಂಡು ರೋಗಿಗಳನ್ನು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಕೋವಿಡ್‌ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಅವರಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಈ ಮೂಲಕ ರೋಗಿಗಳಿಗೆ ಧೈರ್ಯವನ್ನು ತುಂಬುವ ಕೆಲಸ ಮಾಡಿದ್ದಾರೆ.

ಬಳ್ಳಾರಿ- ವಿಜಯನಗರ ಜಿಲ್ಲೆಗಳಲ್ಲಿ 9 ಲಕ್ಷ ಜನರಿಗೆ ಕೋವಿಡ್‌ ಪರೀಕ್ಷೆ..! ...

ಗುಣಮುಖರಾದವರನ್ನು ವಾಪಾಸ್‌ ಅವರವರ ಮನೆಗೆ ತಂದು ಬಿಟ್ಟು ಉದಾರತೆ ಮೆರೆದಿದ್ದಾರೆ. ಜಾತಿ, ಮತ, ಭೇದ ಇಲ್ಲದೆ ಯಾರೇ ಆಗಲಿ ರೋಗಿಗಳು ಅವರನ್ನು ಸಂಪರ್ಕಿಸಿದರೆ ಕೂಡಲೇ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ರೋಗಿಗಳ ಶುಶ್ರೂಷೆ ಮಾಡಿ ಅವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾ ಜನ ಮನ್ನಣೆಗಳಿಸಿದ ಅವರಿಗೆ ಈಗಾಗಲೇ ಹಲವು ಸಂಘ ಸಂಸ್ಥೆಗಳು ಸನ್ಮಾನ ಮಾಡಿ ಅಭಿನಂದಿಸಿದ್ದಾರೆ. ಮುಂದೆಯೂ ಜನರ ಸೇವೆಯೇ ನನ್ನ ಗುರಿ ಎನ್ನುತ್ತಾರೆ ಸಾಬ ತಿಮ್ಮಯ್ಯ.