ಚಿಕ್ಕೋಡಿ(ಮೇ.13): ಮನೆಗೆ ಬೆಂಕಿ ಬಿದ್ದ ಪರಿಣಾಮ ಗ್ರಾಮ ಪಂಚಾಯತ್‌ ಸದಸ್ಯರೊಬ್ಬರು ಸಜೀವವಾಗಿ ದಹನವಾದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ನಿನ್ನೆ(ಬುಧವಾರ) ರಾತ್ರಿ ನಡೆದಿದೆ. ಸೋಮಶೇಖರ್ ಶಿವಾನಂದ ಪಾಟೀಲ್(32) ಎಂಬುವರೇ ಸಜೀವವಾಗಿ ದಹನವಾದ ದುರ್ದೈವಿಯಾಗಿದ್ದಾರೆ.

ಎಸಿ ಶಾರ್ಟ್ ಸರ್ಕ್ಯೂಟ್ ಆದ ಪರಿಣಾಮ ಮನೆಗೆ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ. ಬೆಂಕಿ ಅವಘಡದಲ್ಲಿ ಶಿರಗುಪ್ಪಿ ಗ್ರಾಂ ಪಂಚಾಯ್ತಿ ಸದಸ್ಯ ಸೋಮಶೇಖರ್ ಮೃತಪಟ್ಟಿದ್ದಾರೆ. 

ಕೋವಿಡ್‌ಗೆ ಡಿಸಿಎಂ ಸವದಿ ಸಹೋದರ ಪರಪ್ಪ ಸವದಿ ಅವರ ಪುತ್ರ ವಿನೋದ ಸವದಿ ಬಲಿ

ಮನೆಯಲ್ಲಿ ಸೋಮಶೇಖರ್ ಒಬ್ಬರೇ ಮಲಗಿದ್ದ ವೇಳೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ದುರಂತದಿಂದ ಶಿರಗುಪ್ಪಿ ಗ್ರಾಮದ ಜನರು ಆಘಾತಕ್ಕೊಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.