ಬೆಳಗಾವಿ(ಮೇ.12): ಸಾರಿಗೆ ಸಚಿವರೂ ಆದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಸಹೋದರನ ಪುತ್ರ ಕೊರೋನಾಗೆ ಸಾವನ್ನಪ್ಪಿದ್ದಾರೆ. ವಿನೋದ ಸವದಿ ಅವರನ್ನ ಮಹಾಮಾರಿ ಕೋವಿಡ್‌ ಬಲಿ ತೆಗೆದುಕೊಂಡಿದೆ.

ಕೃಷ್ಣ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಪುತ್ರ ವಿನೋದ ಸವದಿ  ಕೊರೋನಾದಿಂದ ನಿಧನರಾಗಿದ್ದಾರೆ.ಶಿಕ್ಷಣ ಹಾಗೂ ಸಹಕಾರ ಕ್ಷೇತ್ರದಲ್ಲಿ ವಿನೋದ ಸವದಿ ಅವರು ಗುರುತಿಸಿಕೊಂಡಿದ್ದರು. ಕೊರೋನಾ ಮೊದಲನೇ ಅಲೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವರಾಗಿದ್ದ ಸುರೇಶ್‌ ಅಂಗಡಿ ಅವರೂ ಕೂಡ ಬಲಿಯಾಗಿದ್ದರು.

"

ದೆಹಲಿಯ ಮಣ್ಣಲ್ಲಿ ಮಣ್ಣಾದ ಕನ್ನಡದ ಮಣ್ಣಿನ ಮಗ ಸುರೇಶ್ ಅಂಗಡಿ

ಲಕ್ಷ್ಮಣ ಸವದಿ ಅವರ ಸಹೋದರನ ಪುತ್ರ ವಿನೋದ ಸವದಿ  ನಿಧನಕ್ಕೆ ಮತ್ತೋರ್ವ ಉಪಮುಖ್ಯಮಂತ್ರಿಯೂ ಆದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಸಂತಾಪ ಸೂಚಿಸಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona