ಕೊರೋನಾ ಸಂಕಷ್ಟ: ಕೂಲಿ ಮಾಡಲು ಮುಂದಾದ ಪದವೀಧರೆ..!

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಮಾಡುತ್ತಿರುವ ಬಿಎಡ್‌ ಪದವೀಧರೆ| ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಚಿಕ್ಕಹರಳಹಳ್ಳಿ ಗ್ರಾಮದ ಲಾಲವ್ವ ಲಮಾಣಿ ಕಳೆದ ಕೆಲವು ದಿನಗಳಿಂದ ನರೇಗಾದಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿರುವ ಪದವೀಧರೆ| ಹರಿಹರದ ಶ್ರೀಶೈಲ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮೂರು ತಿಂಗಳ ಹಿಂದಷ್ಟೇ ಲಾಲವ್ವ ಲಮಾಣಿ ಬಿಎಡ್‌ ಪದವಿ ಪೂರೈಸಿದ್ದಾರೆ| 

Graduated Young woman Work in  Mahatma Gandhi Employment Guarantee Scheme in Haveri

ಹಾವೇರಿ(ಮೇ.14):  ಕೊರೋನಾ ಸಂಕಷ್ಟಕ್ಕೆ ಇಡೀ ಜಗತ್ತೆ ಕಂಗಾಲಾಗಿದೆ. ಇಂತಹ ಸಂದರ್ಭದಲ್ಲಿ ಮೂರು ತಿಂಗಳ ಹಿಂದಷ್ಟೇ ಬಿಎಡ್‌ ಮುಗಿಸಿರುವ ಯುವತಿಯೊಬ್ಬಳು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಮಾಡಿ ಇತರರಿಗೆ ಮಾದರಿಯಾಗಿದ್ದಾಳೆ. 

ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಚಿಕ್ಕಹರಳಹಳ್ಳಿ ಗ್ರಾಮದ ಲಾಲವ್ವ ಲಮಾಣಿ ಕಳೆದ ಕೆಲವು ದಿನಗಳಿಂದ ನರೇಗಾದಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿರುವ ಪದವೀಧರೆ. ಹರಿಹರದ ಶ್ರೀಶೈಲ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮೂರು ತಿಂಗಳ ಹಿಂದಷ್ಟೇ ಲಾಲವ್ವ ಲಮಾಣಿ ಬಿಎಡ್‌ ಪದವಿ ಪೂರೈಸಿದ್ದಾರೆ. ಶೇ.76ರಷ್ಟು ಫಲಿತಾಂಶದೊಂದಿಗೆ ಬಿಎಡ್‌ ಪಾಸಾಗಿರುವ ಲಾಲವ್ವ ಯಾವುದಾದರೂ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಬಯಕೆ ಹೊಂದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಲಾಲವ್ವ ಲಮಾಣಿ, ಸ್ವಾಭಿಮಾನದಿಂದ ದುಡಿಯಲು ಕೂಲಿ ಕೆಲಸ ತಪ್ಪಲ್ಲ. ಇದರಿಂದ ನನ್ನ ಕುಟುಂಬದ ಜೀವನ ಸರಳವಾಗಿದೆ. ಅವಕಾಶ ಸಿಕ್ಕರೆ ಮುಂದಿನ ದಿನಗಳಲ್ಲಿ ಶಿಕ್ಷಕಿಯಾಗಬೇಕೆಂಬ ಆಸೆಯಿದೆ ಎಂದರು.

ಮೃತ ವೃದ್ಧನ ಸ್ವ್ಯಾಬ್ ತೆಗೆಯಲು ಶವದ ಗುಂಡಿಗೆ ಇಳಿದ ಶೋಭಾ; ಶಶಿಕಲಾ ಜೊಲ್ಲೆ ಮೆಚ್ಚುಗೆ

ಆದರೆ, ಅಷ್ಟರೊಳಗೆ ಕೊರೋನಾ ವಕ್ಕರಿಸಿ ಲಾಕ್‌ಡೌನ್‌ ಘೋಷಣೆಯಾದ್ದರಿಂದ ಎಲ್ಲಿಗೂ ಹೋಗಲು ಸಾಧ್ಯವಾಗಲಿಲ್ಲ. ವಯಸ್ಸಾದ ಅಪ್ಪ, ಅಮ್ಮ ಊರಲ್ಲಿ ಕೆಲಸ ಸಿಗದೇ ಕೂತಿದ್ದರು. ಆ ವೇಳೆಗೆ ಊರಲ್ಲಿ ಉದ್ಯೋಗ ಖಾತ್ರಿ ಯೋಜನೆ ಶುರುವಾಗಿತ್ತು. ಕುಟುಂಬದ ಜಾಬ್‌ ಕಾರ್ಡ್‌ ಇರುವುದನ್ನು ಗಮನಿಸಿದ ಲಾಲವ್ವ ಮರುದಿನವೇ ಕೂಲಿಗೆ ಹೋಗಲು ಶುರುಮಾಡಿದರು.

ಲಾಕ್‌ಡೌನ್‌ ಎಫೆಕ್ಟ್‌: ಕೂಲಿ ಮಾಡಿ ಬಡ ಕುಟುಂಬ ಸಲಹುತ್ತಿರುವ ಪದವೀಧರೆ..!

ಈ ಬಗ್ಗೆ ಪ್ರತಿಕ್ರಿಯಿಸಿದ ಲಾಲವ್ವ ಲಮಾಣಿ, ಸ್ವಾಭಿಮಾನದಿಂದ ದುಡಿಯಲು ಕೂಲಿ ಕೆಲಸ ತಪ್ಪಲ್ಲ. ಈ ಕಾರಣದಿಂದ ಉದ್ಯೋಗ ಖಾತ್ರಿ ಕೂಲಿಕಾರಳಾಗಿ ಕೆಲಸ ಮಾಡುತ್ತಿದ್ದೇನೆ. ಇದರಿಂದ ನನ್ನ ಕುಟುಂಬದ ಜೀವನ ಸರಳವಾಗಿದೆ. ಅವಕಾಶ ಸಿಕ್ಕರೆ ಮುಂದಿನ ದಿನಗಳಲ್ಲಿ ಶಿಕ್ಷಕಿಯಾಗಬೇಕೆಂಬ ಆಸೆಯಿದೆ ಎಂದರು.

Latest Videos
Follow Us:
Download App:
  • android
  • ios