ಲಾಕ್‌ಡೌನ್ ಎಫೆಕ್ಟ್: ಕೂಲಿ ಮಾಡಿ ಬಡ ಕುಟುಂಬ ಸಲಹುತ್ತಿರುವ ಪದವೀಧರೆ..!
ಹಾವೇರಿ(ಮೇ.14): ಕೊರೋನಾ ವೈರಸ್ ಹಾವಳಿಯಿಂದ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ದುಡಿಯುವ ಕೈಗಳಿಗೆ ದುಡಿಮೆ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಕುಟುಂಬವನ್ನ ಸಾಕಲು ಮೂರು ತಿಂಗಳ ಹಿಂದಷ್ಟೇ ಬಿಎಡ್ ಮುಗಿಸಿರುವ ಯುವತಿಯೊಬ್ಬಳು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಮಾಡುತ್ತಿದ್ದಾಳೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾಳೆ.
ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಚಿಕ್ಕಹರಳಹಳ್ಳಿ ಗ್ರಾಮದ ಲಾಲವ್ವ ಲಮಾಣಿ ಎಂಬ ಯುವತಿಯೇ ನರೇಗಾದಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿರುವ ಪದವೀಧರೆ
ಹರಿಹರದ ಶ್ರೀಶೈಲ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮೂರು ತಿಂಗಳ ಹಿಂದಷ್ಟೇ ಬಿಎಡ್ ಪದವಿ ಪೂರೈಸಿದ್ದ ಲಾಲವ್ವ ಲಮಾಣಿ
ಶೇ.76ರಷ್ಟು ಫಲಿತಾಂಶದೊಂದಿಗೆ ಬಿಎಡ್ ಪಾಸಾಗಿರುವ ಲಾಲವ್ವ ಯಾವುದಾದರೂ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಬಯಕೆ ಹೊಂದಿದ್ದರು
ಸ್ವಾಭಿಮಾನದಿಂದ ದುಡಿಯಲು ಕೂಲಿ ಕೆಲಸ ತಪ್ಪಲ್ಲ. ಇದರಿಂದ ನನ್ನ ಕುಟುಂಬದ ಜೀವನ ಸರಳವಾಗಿದೆ. ಅವಕಾಶ ಸಿಕ್ಕರೆ ಮುಂದಿನ ದಿನಗಳಲ್ಲಿ ಶಿಕ್ಷಕಿಯಾಗಬೇಕೆಂಬ ಆಸೆಯಿದೆ ಎಂದ ಲಾಲವ್ವ ಲಮಾಣಿ