ಪ್ರಕೃತಿ ವಿಕೋಪ ಸಂತ್ರಸ್ತರಿಗಿಂದು 463 ಮನೆ ಹಸ್ತಾಂತರ

ಜಿಲ್ಲೆಯಲ್ಲಿ 2018ರಲ್ಲಿ ಸುರಿದ ಭಾರಿ ಮಳೆಯಿಂದ ಮನೆ ಕಳೆದುಕೊಂಡಿದ್ದ ಸಂತ್ರಸ್ತರಿಗೆ ಸೋಮವಾರಪೇಟೆ ತಾಲೂಕಿನ ಜಂಬೂರಿನಲ್ಲಿ ಮತ್ತು ಮಡಿಕೇರಿ ತಾಲೂಕಿನ ಮೆದೆ ಗ್ರಾಮಗಳಲ್ಲಿ ಒಟ್ಟು 463 ಮನೆಗಳನ್ನು ಸರ್ಕಾರದ ವತಿಯಿಂದ ಬುಧವಾರ ಹಸ್ತಾಂತರಿಸಲಾಗುವುದು.

Govt to handover houses for kodagu flood victims

ಮಡಿಕೇರಿ(ಜೂ. 04): ಜಿಲ್ಲೆಯಲ್ಲಿ 2018ರಲ್ಲಿ ಸುರಿದ ಭಾರಿ ಮಳೆಯಿಂದ ಮನೆ ಕಳೆದುಕೊಂಡಿದ್ದ ಸಂತ್ರಸ್ತರಿಗೆ ಸೋಮವಾರಪೇಟೆ ತಾಲೂಕಿನ ಜಂಬೂರಿನಲ್ಲಿ ಮತ್ತು ಮಡಿಕೇರಿ ತಾಲೂಕಿನ ಮೆದೆ ಗ್ರಾಮಗಳಲ್ಲಿ ಒಟ್ಟು 463 ಮನೆಗಳನ್ನು ಸರ್ಕಾರದ ವತಿಯಿಂದ ಬುಧವಾರ ಹಸ್ತಾಂತರಿಸಲಾಗುವುದು.

ಬೆಳಗ್ಗೆ 11 ಗಂಟೆಗೆ ಜಂಬೂರು ಗ್ರಾಮದ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಬಡಾವಣೆ ಮತ್ತು ಮಧ್ಯಾಹ್ನ 12.30ಕ್ಕೆ ಮದೆ ಗ್ರಾಮದಲ್ಲಿ ಮನೆ ಹಸ್ತಾಂತರ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ವಸತಿ ಸಚಿವ ವಿ.ಸೋಮಣ್ಣ ಮತ್ತು ಕಂದಾಯ ಸಚಿವ ಆರ್‌.ಅಶೋಕ್‌, ಸಂಸದ ಪ್ರತಾಪ ಸಿಂಹ, ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌, ಕೆ.ಜಿ.ಬೋಪಯ್ಯ ಸೇರಿದಂತೆ ಅನೇಕ ಜನಪ್ರತನಿಧಿನಿಧಿಗಳು, ಗಣ್ಯರು ಉಪಸ್ಥಿತರಿರುವರು.

ಗೋವಾದಲ್ಲಿ ಮಲ್ಪೆ ಬೋಟು ಮುಳುಗಡೆ, 7 ಮೀನುಗಾರರ ರಕ್ಷಣೆ

ಒಟ್ಟು 653 ಮನೆ ಹಸ್ತಾಂತರ

ಜಂಬೂರಿನಲ್ಲಿ 383 ಮತ್ತು ಮದೆನಾಡಿನಲ್ಲಿ 80 ಎರಡು ಬೆಡ್‌ರೂಂ ಸುಸಜ್ಜಿತ ಮನೆಗಳನ್ನು ತಲಾ 9.84 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಸೋಮವಾರ ಹಸ್ತಾಂತರಿಸಲಾಗುವುದು. ಕರ್ಣಂಗೇರಿ ಗ್ರಾಮದಲ್ಲಿ ನಿರ್ಮಿಸಿದ 35 ಮನೆಗಳನ್ನು ಈಗಾಗಲೇ ಅರ್ಹ ಸಂತ್ರಸ್ತರಿಗೆ ಹಸ್ತಾಂತರಿಸಲಾಗಿದೆ. ಅಲ್ಲದೆ ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಬಯಸಿದ್ದ 65 ಫಲಾನುಭವಿಗಳಿಗೆ ತಲಾ 9.85 ಲಕ್ಷ ಮೊತ್ತವನ್ನು ಪಾವತಿಸಲಾಗಿದೆ. ಹೀಗಾಗಿ ಒಟ್ಟು 563 ಸಂತ್ರಸ್ತರಿಗೆ ಮುಖ್ಯಮಂತ್ರಿಗಳ ಪರಿಹಾರ ನಿ​ಧಿಯಿಂದ ಸುಸಜ್ಜಿತ ಬಡಾವಣೆಯೊಂದಿಗೆ ಮನೆಗಳನ್ನು ನೀಡಲಾಗಿದೆ.

Latest Videos
Follow Us:
Download App:
  • android
  • ios