ಗೋವಾದಲ್ಲಿ ಮಲ್ಪೆ ಬೋಟು ಮುಳುಗಡೆ, 7 ಮೀನುಗಾರರ ರಕ್ಷಣೆ

ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಆಳಸಮುದ್ರ ಬೋಟೊಂದು ಮಂಗಳವಾರ ಗೋವಾ ತೀರದಲ್ಲಿ ಸಮುದ್ರ ಪಾಲಾಗಿದೆ. ಬೋಟ್‌ನಲ್ಲಿದ್ದ 7 ಮಂದಿ ಮೀನುಗಾರರನ್ನು ಬೇರೆ ಬೋಟ್‌ನ ಮೀನುಗಾರರು ರಕ್ಷಿಸಿದ್ದಾರೆ.

Malpe Fishing boat drowned in goa 7 fishermen saved

ಉಡುಪಿ(ಜೂ.04): ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಆಳಸಮುದ್ರ ಬೋಟೊಂದು ಮಂಗಳವಾರ ಗೋವಾ ತೀರದಲ್ಲಿ ಸಮುದ್ರ ಪಾಲಾಗಿದೆ. ಬೋಟ್‌ನಲ್ಲಿದ್ದ 7 ಮಂದಿ ಮೀನುಗಾರರನ್ನು ಬೇರೆ ಬೋಟ್‌ನ ಮೀನುಗಾರರು ರಕ್ಷಿಸಿದ್ದಾರೆ.

ಮಲ್ಪೆಯ ವಡಭಾಂಡೇಶ್ವರದ ದೀಪಿಕಾ ಎಂಬುವರ ಶ್ರೀ ದುರ್ಗಾಹನುಮ ಎಂಬ ಈ ಬೋಟು ಮೇ 23ರಂದು ಮೀನುಗಾರಿಕೆಗೆ ತೆರಳಿತ್ತು. ಮಹಾರಾಷ್ಟ್ರ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ವಾಪಸ್‌ ಬರುವಾಗ ಅವಘಢ ಸಂಭವಿಸಿದೆ. ಸುಮಾರು 60 ಲಕ್ಷ ರು.ಮೌಲ್ಯದ ಬೋಟು, ಅದರಲ್ಲಿದ್ದ ಸುಮಾರು 8 ಲಕ್ಷ ರು. ಮೌಲ್ಯದ ಮೀನು, ಬಲೆ, ಡಿಸೇಲ್‌ ಸಮುದ್ರ ಪಾಲಾಗಿದೆ.

1 ಲಕ್ಷ ಭಾರತೀಯರ ಆಧಾರ್‌, ಪಾನ್‌ ದಾಖಲೆ ಸೇಲ್‌ಗಿಟ್ಟ ನಟ!

ಮಧ್ಯಾಹ್ನ 2 ಗಂಟೆಗೆ ಗೋವಾದಿಂದ ಸುಮಾರು 27 ನಾಟಿಕಲ್‌ ಮೈಲು ದೂರದಲ್ಲಿ ಗಾಳಿಯ ಹೊಡೆತಕ್ಕೆ ಬೋಟ್‌ನ ಮುಂಭಾಗ ಒಡೆದು ನೀರು ಒಳನುಗ್ಗಿತ್ತು. ತಕ್ಷಣ ಬೋಟಿನಲ್ಲಿದ್ದ ಮೀನುಗಾರರು ಸಮೀಪದಲ್ಲಿದ್ದ ಶಿವಬೈರವ ಎಂಬ ಬೋಟ್‌ನಲ್ಲಿದ್ದ ಮೀನುಗಾರರಿಗೆ ಮಾಹಿತಿ ನೀಡಿದರು.

ಅವರು ಧಾವಿಸಿ ಬಂದು ಮುಳುಗುತಿದ್ದ ಬೋಟ್‌ನಲ್ಲಿದ್ದ ಉ.ಕನ್ನಡ ಜಿಲ್ಲೆಯ ಕೇಶವ ಮಾದೇವ ಮೊಗೇರ, ನಾಗರಾಜ್‌ ಈಶ್ವರ ಮೊಗೇರ, ರಾಮಚಂದ್ರ ನಾರಾಯಣ ನಾಯ್ಕ್, ಈಶ್ವರ ವೆಂಕಟರಮಣ ಹರಿಕಾಂತ್ರ, ದಿನೇಶ್‌ ಜಟ್ಟಮೊಗೇರ, ಗುರುರಾಜ್‌ ಮಂಜುನಾಥ ಮೊಗೇರ, ಚಿದಂಬರ ಗಣಪತಿ ಹರಿಕಾಂತ್ರ ಅವರನ್ನು ರಕ್ಷಿಸಿದ್ದಾರೆ.

Latest Videos
Follow Us:
Download App:
  • android
  • ios