ಕೋಲಾರ(ಮಾ.21): ಪಾಕಿಸ್ತಾನ ವಿರುದ್ಧದ ಯುದ್ದದಲ್ಲಿ ಪಾಕಿಗಳಿಂದ ತಪ್ಪಿಸಿಕೊಂಡ ನನಗೆ ಇಲ್ಲಿನ ಅಧಿಕಾರಿಗಳ ಶೋಷಣೆಯಿಂದ ಬಚಾವ್‌ ಆಗಲು ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಯೋಧರೊಬ್ಬರು ತಾಲೂಕು ಕಚೇರಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ತನ್ನ ಜಮೀನಿನ ದಾಖಲೆಯ ಕಡತ ಡಿ.ಸಿ.ಅಫೀಸ್‌ ನಲ್ಲಿ ಕಳೆದು ಹೋಗಿದ್ದ ಹಿನ್ನೆಲೆಯಲ್ಲಿ ಮತ್ತೇ ದಾಖಲೆ ನೀಡುವಂತೆ ಇಲ್ಲಿನ ತಾಲೂಕು ಕಚೇರಿಗೆ ಕಳೆದ ಹನ್ನೊಂದು ವರ್ಷದಿಂದ ಅಲೆಯುತ್ತಿದ್ದ ನಿವೃತ್ತ ಯೋಧ ವೆಂಕಟೇಶ್‌ಪ್ಪ ತನ್ನ ಜಮೀನಿನ ದಾಖಲೆ ಸಿದ್ಧ ಮಾಡಲು 50 ಸಾವಿರ ಲಂಚ ಕೇಳಿ ಸತ್ತಾಯಿಸುತ್ತಿದ್ದ ಎಫ್‌ಡಿಎ ಅಧಿಕಾರಿಯನ್ನು ತರಾಟೆ ತೆಗೆದುಕೊಂಡರು.

ಘಟನೆ ವಿವಿರ:

ತಾಲೂಕಿನ ಮಣಿಶೆಟ್ಟಿಹಳ್ಳಿ ಗ್ರಾಮದಲ್ಲಿರುವ ತನ್ನ ಅನುಭವದಲ್ಲಿದ್ದ ಜಮೀನಿನ ವಿಚಾರವಾಗಿ ಮಾಜಿ ಯೋಧ ವೆಂಕಟೇಶಪ್ಪ ಎಂಬುವರ ಜಮೀನಿನ ಕಡತ ವಿಲೇವಾರಿಗಾಗಿ ಸುಮಾರು ವರ್ಷಗಳಿಂದ ಕಚೇರಿಗೆ ಅಲೆದಾಡಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಳೆದು ಹೋಗಿದ್ದ ತನ್ನ ದಾಖಲೆಗಳ ಕಡತವನ್ನು ಮತ್ತೇ ಸಿದ್ಧಗೊಳಿಸಿ ವಿಲೇವಾರಿ ಮಾಡಲು 50 ಸಾವಿರ ರು.ಲಂಚದ ಬೇಡಿಕೆಯನ್ನು ಎಫ್‌ಡಿಎ ಇಟ್ಟಿದ್ದರು ಎನ್ನಲಾಗಿದೆ.

ಕೋಲಾರ: ಗುಡುಗು, ಸಿಡಿಲು ಸಹಿತ ಭಾರೀ ಮಳೆ

ಲಂಚದ ಹಣ ನೀಡದಿರುವ ಕಾರಣ ಕೆಲಸ ಮಾಡಿಕೊಡಲು ಎಫ್‌ಡಿಎ ಸತಾಯಿಸುತ್ತಿದ ಎನ್ನುವುದು ಮಾಜಿ ಯೋಧದ ಆರೋಪ. ದಿನ ನಿತ್ಯ ಕಚೇರಿಗೆ ಅಲೆದು ಬೇಸತ್ತಿದ್ದ ಮಾಜಿ ಯೋಧ ಇಂದು ಸತ್ತಾಯಿಸಿದ ಹಿನ್ನೆಲೆಯಲ್ಲಿ ಎಫ್‌ಡಿಎ ವಿರುದ್ದ ಆಕ್ರೋಶಗೊಂಡು ಅತನನ್ನು ತರಾಟೆಗೆ ತೆಗೆದುಕೊಂಡರು.

ತಹಸೀಲ್ದಾರ್‌ ಮಧ್ಯಸ್ಥಿಕೆ:

ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಇದು ಪಕ್ಕದ ಕೋಣೆಯಲ್ಲಿದ್ದ ತಹಸೀಲ್ದಾರ್‌ ಗಮನಕ್ಕೆ ಬಂದಿತ್ತು. ತಕ್ಷಣ ತಹಸೀಲ್ದಾರ್‌ ಕೆ.ಮುನಿರಾಜು ಅವರು ಪೊಲೀಸ್‌ ವೃತ್ತ ನಿರೀಕ್ಷ ಕೆ.ನಾಗರಾಜ್‌, ಪಿಎಸ್‌ಐ ಆಂಜಿನಪ್ಪ ಅವರನ್ನು ಕಚೇರಿಗೆ ಕರೆಸಿದರಲ್ಲದೇ ಅವರುಗಳ ಮಧ್ಯಸ್ಥಿಕೆಯಲ್ಲಿ ಮಾಜಿ ಯೋಧ ಹಾಗೂ ಎಫ್‌ಡಿಎ ಅಧಿಕಾರಿಯ ಅಹವಾಲುಗಳನ್ನು ಕೇಳಿದರು. ಈ ಸಂದರ್ಭದಲ್ಲಿ ಲಂಚ ಕೇಳಲಿಲ್ಲ ಎಂಬ ಎಫ್‌ಡಿಎ ಮಾತಿನಿಂದ ಮತ್ತೇ ಇಬ್ಬರ ನಡುವೆ ಮಾತಿನ ವಾಗ್ವಾದ ನಡೆಯಿತು. ನಂತರ ತಹಸೀಲ್ದಾರ್‌ ಮುನಿರಾಜು ಅವರು ರಾಜೀ ಸಂಧಾನ ನಡೆಸಿ ಕಡತ ವಿಲೇವಾರಿ ಮಾಡಲು ಹರಿಪ್ರಸಾದ್‌ಗೆ ಸೂಚಿಸಿದ ಮೇಲೆ ಮಾಜಿ ಯೋಧ ಸಮಾಧಾನಗೊಂಡರು.