ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಸೋಮವಾರ ದಿಢೀರ್‌ ಎಂದು ಶಿವಮೊಗ್ಗಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ಬಳಿಕ ಗೊತ್ತಾಗಿದ್ದು, ಅವರು ಕಾರವಾರದಿಂದ ಬೆಂಗಳೂರಿಗೆ ಹೊರಟಿದ್ದ ಹೆಲಿಕಾಪ್ಟರ್‌ ಇಂಧನ ತುಂಬಿಸಿಕೊಳ್ಳಲೆಂದು ಶಿವಮೊಗ್ಗದ ಹೆಲಿಪ್ಯಾಡ್‌ನಲ್ಲಿ ಇಳಿದಿದೆ ಎಂದು.

ಶಿವಮೊಗ್ಗ (ಡಿ.6) : ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಸೋಮವಾರ ದಿಢೀರ್‌ ಎಂದು ಶಿವಮೊಗ್ಗಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ಬಳಿಕ ಗೊತ್ತಾಗಿದ್ದು, ಅವರು ಕಾರವಾರದಿಂದ ಬೆಂಗಳೂರಿಗೆ ಹೊರಟಿದ್ದ ಹೆಲಿಕಾಪ್ಟರ್‌ ಇಂಧನ ತುಂಬಿಸಿಕೊಳ್ಳಲೆಂದು ಶಿವಮೊಗ್ಗದ ಹೆಲಿಪ್ಯಾಡ್‌ನಲ್ಲಿ ಇಳಿಯಿತು. ವಿಷಯ ತಿಳಿದ ಶಾಸಕ ಕೆ. ಎಸ್‌. ಈಶ್ವರಪ್ಪ ಸ್ಥಳಕ್ಕೆ ಭೇಟಿ ನೀಡಿ, ಶಾಲುಹೊದಿಸಿ ಗೌರವದೊಂದಿಗೆ ರಾಜ್ಯಪಾಲರನ್ನು ಸ್ವಾಗತಿದರು.

ಗೆಹ್ಲೋಟ್‌ ಅವರನ್ನು ಸ್ವಾಗತಿಸಿದ ಕೆ. ಎಸ್‌. ಈಶ್ವರಪ್ಪ ಕೆಲ ಹೊತ್ತು ಅವರ ಜೊತೆ ಕಳೆದರು. ಈ ವೇಳೆಯಲ್ಲಿ ಜಿಲ್ಲೆಯ ಅಡಕೆ ರೋಗ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದರು ಎನ್ನಲಾಗಿದೆ. ಬಳಿಕ ರಾಜ್ಯಪಾಲರು ಹೆಲಿಕಾಪ್ಟರ್‌ ಮೂಲಕ ರಾಜ್ಯ ರಾಜಧಾನಿ ಬೆಂಗಳೂರಿಗೆ ತೆರಳಿದರು.

Shivamogga: ಕೈದಿ ಬಳಿ ಗಾಂಜಾ ಪತ್ತೆ, ಪೊಲೀಸರಿಗೆ ಹುಟ್ಟಿತು ಹಲವು ಅನುಮಾನ

ಈ ವಿಷಯ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಈಶ್ವರಪ್ಪ ಅವರು ರಾಜ್ಯಪಾಲರು ಕಾರವಾರದಿಂದ ಬೆಂಗಳೂರಿಗೆ ಹೆಲಿಕಾಪ್ಟರ್‌ ಮೂಲಕ ಹೊರಟಿದ್ದರು. ಮಾರ್ಗ ಮಧ್ಯೆ ಇಂಧನ ತುಂಬಿಸಿಕೊಳ್ಳಲು ಶಿವಮೊಗ್ಗದಲ್ಲಿ ಇಳಿದಿತ್ತು. ಶಿವಮೊಗ್ಗದ ಜನತೆ ಪರವಾಗಿ ಅವರಿಗೆ ಶಾಲು ಹೊದೆಸಿ ಸನ್ಮಾನಿಸಿದ್ದೇನೆ ಎಂದರು.

ಶಿವಮೊಗ್ಗದಲ್ಲಿ ಇಂಧನ ತುಂಬಿಸಿಕೊಳ್ಳಲೆಂದು ತಾವು ಪ್ರಯಾಣಿಸುತ್ತಿದ್ದ ಹೆಲಿಪ್ಯಾಡ್‌ ಲ್ಯಾಂಡ್‌ ಆದ ಬಳಿಕ ಸಕ್ರ್ಯೂಟ್‌ ಹೌಸ್‌ಗೆ ಆಗಮಿಸಿದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರನ್ನು ಶಾಸಕ ಕೆ. ಎಸ್‌. ಈಶ್ವರಪ್ಪ ಸ್ವಾಗತಿಸಿದರು.

ಸರ್ಕಾರಿ ಕಾರ್ಯಕ್ರಮದಲ್ಲಿ ಈಶ್ವರಪ್ಪ ಪುತ್ರನ ಫೋಟೋ: ಪರಿಷತ್ ಸದಸ್ಯರು ಗರಂ