Shivamogga: ಕೈದಿ ಬಳಿ ಗಾಂಜಾ ಪತ್ತೆ, ಪೊಲೀಸರಿಗೆ ಹುಟ್ಟಿತು ಹಲವು ಅನುಮಾನ
ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಹಾಗೂ ಬಂಧನದ ಸಂದರ್ಭದಲ್ಲಿ ಪೊಲೀಸರ ಮೇಲೇ ಹಲ್ಲೆ ನಡೆಸಿದ್ದ ಶಾಹಿದ್ ಖುರೇಶಿ ಎಂಬಾತನ ಬಳಿ ಗಾಂಜಾ ಪತ್ತೆಯಾಗಿರುವುದು ಹಲವು ಅನುಮಾನ ಹುಟ್ಟು ಹಾಕಿದೆ.
ಶಿವಮೊಗ್ಗ (ಡಿ.3): ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಹಾಗೂ ಬಂಧನದ ಸಂದರ್ಭದಲ್ಲಿ ಪೊಲೀಸರ ಮೇಲೇ ಹಲ್ಲೆ ನಡೆಸಿದ್ದ ಶಾಹಿದ್ ಖುರೇಶಿ ಎಂಬಾತನ ಬಳಿ ಗಾಂಜಾ ಪತ್ತೆಯಾಗಿರುವುದು ಹಲವು ಅನುಮಾನ ಹುಟ್ಟು ಹಾಕಿದೆ. ಚರ್ಮ ಕಾಯಿಲೆಗೆ ಚಿಕಿತ್ಸೆಗೆಂದು ಈತನನ್ನು ಶನಿವಾರ ಸಂಜೆ ಶಿವಮೊಗ್ಗ ಜಿಲ್ಲಾ ಕಾರಾಗೃಹದಿಂದ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಮೂತ್ರ ವಿಸರ್ಜನೆಗೆ ಹೋಗುವುದಾಗಿ ಹೇಳಿದ್ದಾನೆ. ಅನುಮಾನಗೊಂಡ ಪೊಲೀಸರು ತಪಾಸಣೆ ನಡೆಸಿದಾಗ ಆತನ ಬಳಿ ಗಾಂಜಾ ಪತ್ತೆಯಾಗಿದೆ.
ಪ್ರಕರಣವೊದರ ಸಂಬಂಧ ಶಾಹಿದ್ ಖುರೇಶಿಯನ್ನು ಬಂಧಿಸಲು ತೆರಳಿದ್ದಾಗ ದೊಡ್ಡಪೇಟೆ ಪೊಲೀಸರ ಮೇಲೆಯೆ ಚಾಕುವಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ್ದ. ಘಟನೆ ಇತ್ತೀಚಿಗೆ ಕೆಆರ್ ಪುರಂ ಬಡಾವಣೆಯಲ್ಲಿ ನಡೆದಿತ್ತು. ಆ ಸಂದರ್ಭದಲ್ಲಿ ಖುರೇಶಿಯನ್ನು ಬಂಧಿಸಲು ತೆರಳಿದ್ದ ಪೊಲೀಸ್ ಸಿಬ್ಬಂದಿಯೋರ್ವರಿಗೆ ಗಂಭೀರ ಗಾಯಗಳಾಗಿದ್ದವು. ನಂತರ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಗಾಯಗೊಂಡಿದ್ದ ಖುರೇಶಿಗೆ ಚಿಕಿತ್ಸೆ ನೀಡಲಾಗಿದ್ದು, ನಂತರ ಆತನನ್ನು ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ಇದೀಗ ಚರ್ಮ ಕಾಯಿಲೆಗೆ ಚಿಕಿತ್ಸೆ ಪಡೆಯಲೆಂದು ಆಸ್ಪತ್ರೆಗೆ ಬಂದಿದ್ದ ಖುರೇಶಿ ಬಳಿ ಗಾಂಜಾ ಪತ್ತೆಯಾಗಿದೆ. ಈ ಹಿಂದೆ ಗಾಂಜಾ ವ್ಯಸನಿಯಾಗಿದ್ದ ಖುರೇಶಿ ಬಳಿ ಮತ್ತೆ ಗಾಂಜಾ ದೊರಕಿರುವುದು ಸಾಕಷ್ಟು ಅನುಮಾನ ಹುಟ್ಟು ಹಾಕಿದೆ. ಆತನಿಗೆ ಜೈಲಿನಲ್ಲಿಯೇ ಗಾಂಜಾ ದೊರಕಿದೆಯೇ ಅಥವಾ ಕುರೇಶಿಯನ್ನು ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯದಲ್ಲಿ ಗಾಂಜಾ ದೊರಕಿದೆಯೇ ಎಂಬ ಅನುಮಾನ ವ್ಯಕ್ತವಾಗಿದ್ದು, ಪೊಲೀಸರ ತನಿಖೆಯ ಬಳಿಕ ನಿಜ ಏನೆಂಬುದು ಹೊರಬರಲಿದೆ.
ರೈಲಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಕಿಡಿಗೇಡಿ ಬಂಧನ
ಬೆಂಗಳೂರು: ರೈಲಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಕಿಡಿಗೇಡಿಯೊಬ್ಬನ್ನು ಆಂಧ್ರಪ್ರದೇಶದ ಹಿಂದೂಪುರದ ಗಡಿಯಿಂದ ಬೆನ್ನು ಹತ್ತಿ ಕೊನೆಗೆ ನಗರದಲ್ಲಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಒಡಿಶಾ ರಾಜ್ಯದ ಕಾಲಕನ್ಹು ಪಾಣಿಗ್ರಾಹಿ ಬಂಧಿತನಾಗಿದ್ದು, ಆರೋಪಿಯಿಂದ 1.27 ಲಕ್ಷ ರು ಮೌಲ್ಯದ 8 ಕೆಜಿ ಗಾಂಜಾ, ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಜಪ್ತಿ ಮಾಡಲಾಗಿದೆ. ಒಡಿಶಾದಿಂದ ಬೆಂಗಳೂರಿಗೆ ಬಂದ ಪ್ರಶಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಆರೋಪಿ ಗಾಂಜಾ ಸಾಗಿಸುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಆಂಧ್ರಪ್ರದೇಶ ರೈಲಿನಲ್ಲಿ ತಪಾಸಣೆ ಆರಂಭಿಸಿದ್ದಾರೆ. ಆಗ ರೈಲಿನಲ್ಲಿ ಕಳ್ಳಾಟವಾಡಿದ ಆರೋಪಿ ಕೊನೆಗೂ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ತಿ ಮತ್ತು ಪ್ರೇಮಿಗಾಗಿ ಗಂಡನಿಗೆ ಸ್ಲೋ ಪಾಯಿಸನ್ ಹಾಕಿ ಕೊಂದ ಪತ್ನಿ ಅರೆಸ್ಟ್!
ಮೆಣಸಿನಕಾಯಿ ಹೊಲದಲ್ಲಿ ಗಾಂಜಾ ಪತ್ತೆ, ಆರೋಪಿ ಬಂಧನ
ರಾಯಚೂರು: ಸಿರವಾರ ತಾಲೂಕಿನ ಗಣದಿನ್ನಿ ಗ್ರಾಮದ ಮೆಣಸಿನಕಾಯಿ ಹೊಲದಲ್ಲಿ ಬೆಳೆದ ಗಾಂಜಾ ವಶಪಡಿಸಿಕೊಂಡ ಅಬಕಾರಿ ಅಧಿಕಾರಿಗಳು ಆರೋಪಿಯನ್ನು ಬುಧವಾರ ಬಂಧಿಸಿದ್ದಾರೆ.
DHARWAD: ನಾಲ್ಕು ಕಳ್ಳತನ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದ ಆರೋಪಿಗಳಿಗೆ 3 ವರ್ಷ ಶಿಕ್ಷೆ
ಅಬಕಾರಿ ನಿರೀಕ್ಷಕ ಬಸವರಾಜ ಕಾಕರಗಲ್ ನೇತೃತ್ವದ ತಂಡ ದಾಳಿನಡೆಸಿ ದೊಡ್ಡ ಯಂಕಣ್ಣ ಅವರ ಹೊಲದ ಮೇಲೆ ದಾಳಿ ನಡೆಸಿ 5 ಕೆಜಿ 350 ಗ್ರಾಂ ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ಗ್ರಾಮದ ದೊಡ್ದ ಯಂಕಣ್ಣ ಎಂಬುವರರ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಬಕಾರಿ ಉಪ ನಿರೀಕ್ಷಕಿ ಈರಮ್ಮ, ಅಬಕಾರಿ ಉಪ ನಿರೀಕ್ಷಕ ಶಿವಲಿಂಗ ಸ್ವಾಮಿ, ಅಬಕಾರಿ ಪೇದೆಗಳಾದ ವೆಂಕೋಬ, ರಾಜು, ಮಂಜುನಾಥ ಕಲ್ಯಾಣ, ಮಹೆಬೂಬ್ ಇದ್ದರು.