Asianet Suvarna News Asianet Suvarna News

ಸರ್ಕಾರಿ ಶಾಲೆಗಳೆಂದರೆ ಒಂದು ಕಾಲದಲ್ಲಿ ತಿರಸ್ಕಾರ ಭಾವವಿತ್ತು, ಇದೀಗ ಪುರಸ್ಕಾರ ಬಂದಿದೆ: ಸಚಿವ ಮಧು ಬಂಗಾರಪ್ಪ

ಸರ್ಕಾರಿ ಶಾಲೆಗಳೆಂದರೆ ಒಂದು ಕಾಲದಲ್ಲಿ ತಿರಸ್ಕಾರ ಭಾವವಿತ್ತು. ಈಗ ಅದಕ್ಕೆ ಪುರಸ್ಕಾರ ಬಂದಿದೆ. ಈ ಬಾರಿಯ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ನಮ್ಮ ಜಿಲ್ಲೆ ಮೂರನೇ ಸ್ಥಾನದಲ್ಲಿರುವುದೇ ಇದಕ್ಕೆ ಸಾಕ್ಷಿಯಾಗಿದೆ. 

Government schools once looked down upon now rewarded Says Minister Madhu Bangarappa gvd
Author
First Published Aug 4, 2024, 7:19 PM IST | Last Updated Aug 5, 2024, 9:12 AM IST

ಶಿವಮೊಗ್ಗ (ಆ.04): ಸರ್ಕಾರಿ ಶಾಲೆಗಳೆಂದರೆ ಒಂದು ಕಾಲದಲ್ಲಿ ತಿರಸ್ಕಾರ ಭಾವವಿತ್ತು. ಈಗ ಅದಕ್ಕೆ ಪುರಸ್ಕಾರ ಬಂದಿದೆ. ಈ ಬಾರಿಯ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ನಮ್ಮ ಜಿಲ್ಲೆ ಮೂರನೇ ಸ್ಥಾನದಲ್ಲಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಸರ್ಕಾರಿ ಶಾಲೆಗಳು ಮತ್ತೆ ವಿಜೃಂಭಿಸಲಿವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ನಗರದ ಕುವೆಂಪು ರಂಗಮಂದಿರದಲ್ಲಿ ಎನ್.ಎಸ್.ಯು.ಐ. ವತಿಯಿಂದ ಆಯೋಜಿಸಿದ್ದ ‘ನಮ್ಮೂರ ಹೆಮ್ಮೆ’ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಿಯುಸಿಯಲ್ಲಿಯೂ ಕೂಡ ಜಿಲ್ಲೆ ಉತ್ತಮ ಸಾಧನೆ ಮಾಡಿದೆ. 

ಸರ್ಕಾರಿ ಶಾಲೆಯ ಮಕ್ಕಳು ರ‍್ಯಾಂಕ್ ಪಡೆಯುತ್ತಿರುವುದು ಗುಣಮಟ್ಟದ ಸೂಚನೆಯಾಗಿದೆ. ಇದಕ್ಕೆ ಶಿಕ್ಷಕರು, ಪೋಷಕರು ಕಾರಣರಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದಾರೆ. ಇದು ನಮ್ಮೂರ ಹೆಮ್ಮೆ ಎಂದರು. ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೀಶ್ ಮಾತನಾಡಿ, ಇದೊಂದು ಪುಣ್ಯದ ಕೆಲಸವಾಗಿದೆ. ಎನ್.ಎಸ್.ಯು.ಐ. ಅತ್ಯುತ್ತಮ ಕೆಲಸ ಮಾಡುತ್ತಿದೆ. ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ. ಇದರ ಅಂಗವಾಗಿ ನೋಟ್‌ಬುಕ್‌ಗಳನ್ನು ನೀಡಲಾಗುತ್ತಿದೆ. ಮಧು ಬಂಗಾರಪ್ಪ ಅವರು ಸಚಿವರಾದ ಮೇಲೆ ಶಿಕ್ಷಣದ ಗುಣಮಟ್ಟ ಹೆಚ್ಚಿದೆ ಎಂದರು.

ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ವಿಜಯ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಆರ್.ಪ್ರಸನ್ನಕುಮಾರ್, ಕಲೀಂ ಪಾಷಾ, ಶಿವು, ಕಾಶೀ ವಿಶ್ವನಾಥ್, ರಮೇಶ್ ಹೆಗ್ಡೆ, ಜಿ.ಡಿ.ಮಂಜುನಾಥ್, ಎಸ್.ಪಿ.ಶೇಷಾದ್ರಿ, ಯಮುನಾ ರಂಗೇಗೌಡ, ಸಿ.ಜಿ.ಮಧುಸೂದನ್, ಕೆ.ಚೇತನ್, ಹರ್ಷಿತ್, ಚರಣ್, ರವಿ ಮುಂತಾದವರಿದ್ದರು. ಪ್ರಿಯಾಂಕಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನೂರಾರು ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಎನ್.ಎಸ್.ಯು.ಐ. ವತಿಯಿಂದ ಜಿಲ್ಲೆಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ ಸ್ಥಾಪನೆಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

ಸಿಎಂ ಸಿದ್ದರಾಮಯ್ಯ ಮುಗಿಸಲು ಬಿಜೆಪಿ ಷಡ್ಯಂತ್ರ: ಸಚಿವ ದಿನೇಶ್‌ ಗುಂಡೂರಾವ್‌ ಆರೋಪ

ಅಜೀಂ ಪ್ರೇಂ ಜೀ ಫೌಂಡೇಷನ್ ಜೊತೆಗೆ 3 ವರ್ಷಗಳ ಒಪ್ಪಂದ: ಸಹಕಾರಿ ಸಂಸ್ಥೆಗಳ ನೆರವನ್ನು ಶಿಕ್ಷಣ ಕ್ಷೇತ್ರಕ್ಕೆ ಬಳಸಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 76 ಸಾವಿರ ಶಾಲೆಗಳಿವೆ. ಅದರಲ್ಲಿ ಸರ್ಕಾರಿ ಶಾಲೆಗಳೇ 40 ಸಾವಿರ ಇವೆ. ಅನುದಾನಿತ ಶಾಲೆಗಳು 16 ಸಾವಿರ ಇವೆ. ಸುಮಾರು 56 ಲಕ್ಷ ಮಕ್ಕಳು ಇಲ್ಲಿ ಓದುತ್ತಿದ್ದಾರೆ. ಈ ಮಕ್ಕಳಿಗೆ ಈ ಹಿಂದೆ ವಾರಕ್ಕೊಮ್ಮೆ ಪೌಷ್ಠಿಕಾಂಶ ದ ರೀತಿಯಲ್ಲಿ ಒಂದು ಮೊಟ್ಟೆ ನೀಡಲಾಗುತ್ತಿತ್ತು. ವಾರಕ್ಕೆ 6 ಬಾರಿ ಮೊಟ್ಟೆ ನೀಡಲಾಗುತ್ತಿದೆ ಎಂದು ತಿಳಿಸಿದರು. ದೇಶದಲ್ಲಿ ಇದೇ ಮೊದಲ ಬಾರಿಗೆ ಅಜೀಂ ಪ್ರೇಂ ಜೀ ಫೌಂಡೇಷನ್ ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವ ಯೋಜನೆಯನ್ನು ಹಾಕಿಕೊಂಡಿದೆ. ಇದರ ಅಂಗವಾಗಿ ಈಗಾಗಲೇ ಸರ್ಕಾರದೊಂದಿಗೆ ಮೂರು ವರ್ಷದ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆ ಸಂಸ್ಥೆಯವರು ಇದಕ್ಕಾಗಿ 1500 ಕೋಟಿ ರು. ನೀಡುತ್ತಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

Latest Videos
Follow Us:
Download App:
  • android
  • ios