Asianet Suvarna News Asianet Suvarna News

ಸರ್ಕಾರಿ ಶಾಲೆ ಅಭಿವೃದ್ಧಿಗೆ ಪಣ: ಸಚಿವ ನಾಗೇಶ್‌

ರಾಜ್ಯ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಪಣತೊಟ್ಟಿದ್ದು ಪ್ರತಿ ವರ್ಷ ರಾಜ್ಯದಲ್ಲಿ 8 ಸಾವಿರ ನೂತನ ಶಾಲಾ ಕಟ್ಟಡಗಳನ್ನು ನಿರ್ಮಿಸುವ ಗುರಿ ಹೊಂದಿದ್ದು ಹಣ ಬಿಡುಗಡೆ ಮಾಡಿ ಕಾರ್ಯೋನ್ಮುಖವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು.

Government school development stake: Minister Nagesh snr
Author
First Published Jan 13, 2023, 5:53 AM IST

 ತಿಪಟೂರು (ಹ.. 13) :  ರಾಜ್ಯ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಪಣತೊಟ್ಟಿದ್ದು ಪ್ರತಿ ವರ್ಷ ರಾಜ್ಯದಲ್ಲಿ 8 ಸಾವಿರ ನೂತನ ಶಾಲಾ ಕಟ್ಟಡಗಳನ್ನು ನಿರ್ಮಿಸುವ ಗುರಿ ಹೊಂದಿದ್ದು ಹಣ ಬಿಡುಗಡೆ ಮಾಡಿ ಕಾರ್ಯೋನ್ಮುಖವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು.

ತಾಲೂಕಿನ ಹೊನ್ನವಳ್ಳಿ ಕೆಪಿಎಸ್‌ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2 ಕೋಟಿ ರು.ಗಳ ನೂತನ ಶಾಲಾ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ 1.17 ಕೋಟಿ ರು.ಗಳಲ್ಲಿ ನಿರ್ಮಾಣವಾಗಿರುವ ನೂತನ ನಾಲ್ಕು ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕಿನಲ್ಲಿಯೂ ಎಲ್ಲಾ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಿ ಗುರಿ ತಲುಪಿದ್ದೇವೆ. ಪೋಷಕರು, ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ಸಹಕರಿಸಬೇಕು. ಸಮಯಕ್ಕೆ ಸರಿಯಾಗಿ ಬಸ್‌ ಇಲ್ಲ ಎಂಬ ದೂರುಗಳು ಬರುತ್ತಿದ್ದು ಬೆಳಿಗ್ಗೆ ನಿಗದಿತ ವೇಳೆಗೆ ಎಲ್ಲಾ ಕಡೆ ಏಕ ಕಾಲದಲ್ಲಿ ಬಸ್‌ ಸಂಚಾರ ಕಲ್ಪಿಸುವುದು ಸಾಧ್ಯವಿಲ್ಲ. ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ಗ್ರಾಮಾಂತರ ಪ್ರದೇಶದ ಶಾಲೆಗಳಿಗೆ ಸೇರಿಸಬೇಕೆಂದು ಸಚಿವರು ಹೇಳಿದರು.

ಕೆಲ ಪೋಷಕರು ಮಕ್ಕಳನ್ನು ನಗರದಲ್ಲಿ ಓದಿಸಬಾರದೇ ಎಂದು ಕೇಳುತ್ತಾರೆ. ಆದರೆ ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿಯೂ ಅತ್ಯಾಧುನಿಕ ಪ್ರಯೋಗಾಲಯ, ಸುಸಜ್ಜಿತ ಶೌಚಾಲಯ, ಕೊಠಡಿ ಸೇರಿದಂತೆ ಮೂಲಭೂತ ಸೌಕರ್ಯಗಳಿದ್ದು ಪೋಷಕರು ಇಲ್ಲಿಯೇ ಮಕ್ಕಳನ್ನು ದಾಖಲು ಮಾಡಿದರೆ ಎಲ್ಲಿರಿಗೂ ಒಳಿತಾಗಲಿದೆ. ಆರು ತಿಂಗಳ ಒಳಗಾಗಿ ಉತ್ತಮ ಗುಣಮಟ್ಟದ ಕಟ್ಟಡವನ್ನು ನಿರ್ಮಿಸಿ ಕೊಡುವುದಾಗಿ ಜನತೆಗೆ ಭರವಸೆ ನೀಡಿದರು.

ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್‌.ಆರ್‌.ಶ್ರೀಕಂಠಮೂರ್ತಿ ವಹಿಸಿದ್ದರು. ಈ ಸಂದರ್ಭದಲ್ಲಿ ಸಚಿವರನ್ನು ಗ್ರಾಮಸ್ಥರು ಹಾಗೂ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ಎಚ್‌.ಎಸ್‌. ಪ್ರಸಾದ್‌, ಉಪಾಧ್ಯಕ್ಷೆ ಗೌರಮ್ಮ, ಮಾಜಿ ಅಧ್ಯಕ್ಷರಾದ ಸುರೇಶ್‌, ಮುಪ್ಪುನೇಗೌಡ, ಮೈಲಾರಿ ರಾಜ ಅರಸ್‌, ಎಸ್‌ಡಿಎಂಸಿ ಉಪಾಧ್ಯಕ್ಷೆ ವಸಂತಮ್ಮ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಎಚ್‌.ಎನ್‌. ಹೊನ್ನೇಶಪ್ಪ, ಸಹಾಯಕ ಎಂಜಿನಿಯರ್‌ ಎಸ್‌.ಎಸ್‌. ತಿಮ್ಮಣ್ಣ, ಗುತ್ತಿಗೆದಾರ ಚಂದ್ರಶೇಖರ್‌, ಪ್ರಾಂಶುಪಾಲ ಬಿ. ನಾಗರಾಜು, ಮುಖ್ಯಶಿಕ್ಷಕ ರೇಣುಕಮ್ಮ, ಉಪನ್ಯಾಸಕರಾದ ನಟೇಶ್‌, ವರದರಾಜು ಸಏರಿದಂತೆ ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.

ಮಕ್ಕಳ ಅಭ್ಯುದಯವೇ ಶಿಕ್ಷಣ ಸಂಸ್ಥೆ ಗುರಿ

  ತುಮಕೂರು (ಜ. 11) :  ಮಕ್ಕಳ ಕಲಿಕಾಭ್ಯುದಯವೇ ನಮ್ಮ ಸಂಸ್ಥೆಯ ಗುರಿ ಎಂದು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನಾಡೋಜ ಡಾ. ಪಿ.ಕೃಷ್ಣ ತಿಳಿಸಿದ್ದಾರೆ.

ನಗರದ ಶೇಷಾದ್ರಿಪುರಂ ಶಾಲೆಯ 4ನೇ ವಾರ್ಷಿಕೋತ್ಸವದ ಅಂಗವಾಗಿ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಪಲ್ಲವ ಪ್ರಭ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸುಮಾರು 93 ವರ್ಷ ಇತಿಹಾಸವಿರುವ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಗೆ ಪ್ಲೇ ಗ್ರೂಫ್‌,ಮಾಂಟೆಸರಿ ತರಗತಿಯಿಂದ 10ನೇ ತರಗತಿವರೆಗೆ ಕಲಿಸಲಾಗುತ್ತಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ,ಅವರ ಭವಿಷ್ಯವನ್ನು ಉಜ್ವಲ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಸಂಸ್ಥೆಯ ಶಿಕ್ಷಕರು ತಮ್ಮ ಪಾಠ-ಪ್ರವಚನಗಳಿಂದ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗ ತೋರುವ ಕೆಲಸ ಮಾಡುತ್ತಿದ್ದಾರೆ. ಮಕ್ಕಳ ಕಲಿಕೆಗಾಗಿ ಶಾಲೆಯಿಂದ ಅಗತ್ಯವಿರುವ ಪಾಠೋಪಕರಣ, ಸಲಕರಣೆಗಳನ್ನು ನೀಡಿದರೂ ಸಹ ಮಕ್ಕಳ ಮನಸನ್ನು ಅರಳಿಸುವ ಹಾಗೂ ಅವರ ಉತ್ತಮ ಭವಿಷ್ಯ ರೂಪಿಸುವ ಸೇವೆಯನ್ನು ಶಿಕ್ಷಕರು ಮಾಡುತ್ತಿದ್ದಾರೆ. ಶೇಷಾದ್ರಿಪುರಂ ಕಾಲೇಜಿಗೆ ಶೇ.100ರಷ್ಟುಫಲಿತಾಂಶ ಲಭಿಸಲು ಹಗಲಿರಳು ಶ್ರಮಿಸುತ್ತಿರುವ ಶಿಕ್ಷಕರ ಸೇವೆಗೆ ಸಂಸ್ಥೆ ಆಭಾರಿಯಾಗಿದೆ ಎಂದರು.

Follow Us:
Download App:
  • android
  • ios