Asianet Suvarna News Asianet Suvarna News

.ಮಕ್ಕಳ ಸುರಕ್ಷತೆ ಬಗ್ಗೆ ಸರ್ಕಾರದ ಆದೇಶ ಪಾಲಿಸಿ :ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ಕೃಷ್ಣಪ್ಪ

ಖಾಸಗಿ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಅವರು ಮಕ್ಕಳ ಸುರಕ್ಷತೆ ಬಗ್ಗೆ ರಾಜ್ಯ ಶಿಕ್ಷಣ ಇಲಾಖೆ ಹೊರಡಿಸಿದ ಆದೇಶವನ್ನು ಖಡ್ಡಾಯವಾಗಿ ಪಾಲಿಸಬೇಕು. ಮಕ್ಕಳ ಸುರಕ್ಷತೆಗೆ ಹೆಚ್ಚು ಒತ್ತು ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ಕೃಷ್ಣಪ್ಪ ಹೇಳಿದರು.

 Government order policy about children's safety: Field education officer C.N. Krishnappa snr
Author
First Published Jan 11, 2024, 10:17 AM IST | Last Updated Jan 11, 2024, 10:17 AM IST

  ಶಿರಾ:  ಖಾಸಗಿ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಅವರು ಮಕ್ಕಳ ಸುರಕ್ಷತೆ ಬಗ್ಗೆ ರಾಜ್ಯ ಶಿಕ್ಷಣ ಇಲಾಖೆ ಹೊರಡಿಸಿದ ಆದೇಶವನ್ನು ಖಡ್ಡಾಯವಾಗಿ ಪಾಲಿಸಬೇಕು. ಮಕ್ಕಳ ಸುರಕ್ಷತೆಗೆ ಹೆಚ್ಚು ಒತ್ತು ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ಕೃಷ್ಣಪ್ಪ ಹೇಳಿದರು.

ನಗರದ ಜಿ.ಕೆ.ಎಂ.ಎಚ್.ಬಿ.ಎಸ್ ಶಾಲೆಯಲ್ಲಿ ಎಲ್ಲಾ ಖಾಸಗಿ ಅನುದಾನ ರಹಿತ, ಶಾಲೆಗಳ ಮುಖ್ಯ ಶಿಕ್ಷಕರ ಹಾಗೂ ಆಡಳಿತ ಮಂಡಳಿಯ ಸಭೆ ನಡೆಸಿ ಮಾತನಾಡಿದರು. ಶಾಲಾ ಆಡಳಿತ ಮಂಡಳಿಯವರು ಶಾಲಾ ವಾಹನ, ಆಟೋ, ವ್ಯಾನ್, ಚಾಲಕರು ಹಾಗೂ ಸಹಾಯಕರಿಗೆ ಪೊಲೀಸ್ ಇಲಾಖೆಯಿಂದ ಪರಿಶೀಲನೆ ನಡೆಸಿದ ನಡತೆ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಪಡೆಯತಕ್ಕದ್ದು ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ಆನ್‌ಲೈನ್ ಮುಖೇನ ಚಾಲಕರ ಹಾಗೂ ಸಹಾಯಕಿಯರ ನಡತೆ ಪ್ರಮಾಣ ಪತ್ರ ಸಲ್ಲಿಕೆ ಮಾಡಿ. ಶಾಲಾ ವಾಹನಗಳಲ್ಲಿ, ಸಿಸಿಟಿವಿಗಳನ್ನು ಕಡ್ಡಾಯವಾಗಿ, ಅಳವಡಿಸಬೇಕು.

ಕರ್ನಾಟಕ ಮೋಟಾರು, ವಾಹನ ಕಾಯ್ದೆ 1989 ಅಡಿಯಲ್ಲಿ ಪ್ರತಿ ವಾಹನಕ್ಕೆ ನಿರ್ದಿಷ್ಟಪಡಿಸಿದ ಮಕ್ಕಳನ್ನಷ್ಟೇ ಕರೆದುಕೊಂಡಬರಬೇಕು. 1098 ಮಕ್ಕಳ ಸಹಾಯವಾಣಿ ನಂಬರ್‌ಅನ್ನು ಎಲ್ಲಾ ಶಾಲೆಗಳ ಗೋಡೆಯ ಮೇಲೆ ನಮೂದಿಸಬೇಕು. ಸಹಾಯವಾಣಿಯ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು. 1098 ಗೆ ಕರೆಮಾಡುವ, ಪ್ರತಿಯೊಂದು ಮಗುವಿನ ಸುರಕ್ಷತೆ ಹಾಗು ಆರೈಕೆಗೆ ಸಂಬಂಧಿಸಿದಂತೆ ಸೇವೆಯನ್ನು ಒದಗಿಸುವುದು ಸಂಸ್ಥೆಳ ಮುಖ್ಯ ಉದ್ದೇಶವಾಗಿರುತ್ತದೆ. ಎಲ್ಲಾ ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಕ್ಲಬ್ ರಚನೆಯಾಗಬೇಕು. ಎಲ್ಲಾ ಶಾಲಾ ಆಡಳಿತ ಮಂಡಳಿಗಳು, ಮಗುವಿನ ರಕ್ಷಣೆ ಬಗ್ಗೆ, ಹೆಚ್ಚು ಆದ್ಯತೆ ನೀಡುವುದು ಹಾಗೂ ಜವಾಬ್ದಾರಿ ವಹಿಸುವಂತೆ ಸೂಚಿಸಿದರು. ಆಗಾಗ ಶಾಲೆಗಳಲ್ಲಿ ಮಕ್ಕಳ ಆತ್ಮ ಅವಲೋಕನ ಸಭೆ ನಡೆಸುವುದು ಮತ್ತು ಶಾಲೆಯಲ್ಲಿ ದೂರು ಪೆಟ್ಟಿಗೆ ವ್ಯವಸ್ಥೆ ಮಾಡುವುದು, ಅತೀ ಸೂಕ್ತ ದೂರು ಪೆಟ್ಟಿಗೆಯಲ್ಲಿ, ಮಕ್ಕಳ ಹೆಸರಾಗಲಿ, ಅಥವಾ ಬರಹದ ಮೇಲೆ ಗುರುತಿಸಿ, ಮಕ್ಕಳ ಮೇಲೆ, ಶಾಲಾ ಆಡಳಿತ ಮಂಡಳಿಯಾಗಲಿ, ಅಥವಾ ಶಿಕ್ಷಕರಾಗಲಿ, ಪ್ರಭಾವ ಬೀರಬಾರದು.

ಈ ಎಲ್ಲಾ ಮಾಹಿತಿ ದೊರೆತ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿಗಳು ತಕ್ಷಣವೇ ಎಚ್ಚೇತ್ತು ರಾಜ್ಯ ಶಿಕ್ಷಣದ ಆದೇಶವನ್ನು, ಪಾಲಿಸತಕ್ಕದ್ದು. ಮುಂದಿನ 15 ರಿಂದ 20 ದಿನದ ಒಳಗಾಗಿ, ಪ್ರತಿಯೊಂದು ಶಾಲೆ ಹಾಗೂ ಶಾಲಾ ಬಸ್‌ಗಳನ್ನು, ಪರಿಶೀಲಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಖಾಸಗಿ ಶಾಲೆಯ ಆಡಳಿತ ಮಂಡಳಿಯವರು ಹಾಗೂ ಮುಖ್ಯ ಶಿಕ್ಷಕರು ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios