ಮಂಡ್ಯ ಎಸಿ ಶಿವಮೂರ್ತಿ, ತಹಸಿಲ್ದಾರ್ ಶಿವಕುಮಾರ್ ಬಿರಾದರ್ ನೇತೃತ್ವದಲ್ಲಿ ಧ್ವಜ‌ ಇಳಿಸಲು ಯತ್ನ ನಡೆಸಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸುತ್ತಿದ್ದಂತೆ ಆತಂಕದಿಂದ ಗ್ರಾಮಸ್ಥರು ಜಮಾಯಿಸಿದ್ದರು. ಜೈ ಶ್ರೀರಾಮ್, ಜೈ ಹನುಮ ಘೋಷಣೆ‌ ಕೂಗಿ ಗ್ರಾಮಸ್ಥರು ಪ್ರತಿಭಟನೆ‌ ಆರಂಭಿಸಿದ್ದಾರೆ. 

ಮಂಡ್ಯ(ಜ.28): ಮಂಡ್ಯ ತಾಲೂಕಿನ ಕೆರಗೋಡು ಹನುಮಧ್ವಜ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹನುಮ ಧ್ವಜ ತೆರವಿಗೆ ಅಧಿಕಾರಿಗಳು ರಾತ್ರೋ ರಾತ್ರಿ ಎಂಟ್ರಿ ಕೊಟ್ಟಿದ್ದಾರೆ. ಇದರಿಂದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಸಿಡಿದೆದಿದ್ದಾರೆ. ಹನುಮ ಧ್ವಜ ತೆರವು ಮಾಡದಂತೆ ನೂರಾರು ಜನರು ಜಮಾಯಿಸಿದ್ದಾರೆ. 

ಕೆರೆಗೋಡು ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಇಂದು(ಭಾನುವಾರ) ಮುಂಜಾನೆ 3 ಗಂಟೆಗೆ ಧ್ವಜ‌ ತೆರವಿಗೆ ಅಧಿಕಾರಿಗಳು ಯತ್ನಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 
ಮಂಡ್ಯ ಎಸಿ ಶಿವಮೂರ್ತಿ, ತಹಸಿಲ್ದಾರ್ ಶಿವಕುಮಾರ್ ಬಿರಾದರ್ ನೇತೃತ್ವದಲ್ಲಿ ಧ್ವಜ‌ ಇಳಿಸಲು ಯತ್ನ ನಡೆಸಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸುತ್ತಿದ್ದಂತೆ ಆತಂಕದಿಂದ ಗ್ರಾಮಸ್ಥರು ಜಮಾಯಿಸಿದ್ದರು. ಜೈ ಶ್ರೀರಾಮ್, ಜೈ ಹನುಮ ಘೋಷಣೆ‌ ಕೂಗಿ ಗ್ರಾಮಸ್ಥರು ಪ್ರತಿಭಟನೆ‌ ಆರಂಭಿಸಿದ್ದಾರೆ. 

'ನಾನು ಯಾರು ಗೊತ್ತಾ ಡಿಕೆಶಿ ಸಂಬಂಧಿ'; ಟೋಲ್ ಕಟ್ಟುವಂತೆ ಹೇಳಿದ ಮಹಿಳಾ ಸಿಬ್ಬಂದಿ ಮೇಲೆ ಪುಡಾರಿಯಿಂದ ಹಲ್ಲೆ!

ಮಹಿಳೆಯರು ಹಾಗೂ ಯುವಕರು ಧ್ವಜದ ಕಂಬದ ಬಳಿಯೇ ಕುಳಿತಿದ್ದಾರೆ. ಕೆರೆಗೋಡು ಗ್ರಾಮಸ್ಥರಿಗೆ ಸಾಥ್ ನೀಡಲು ಹಲವೆಡೆಯಿಂದ‌ ಹಿಂದೂ ಕಾರ್ಯಕರ್ತರ ಆಗಮಿಸಿದ್ದಾರೆ. ತಾಕತ್ತಿದ್ದರೇ ಹನುಮ ಧ್ವಜ ಹಾರುವುದನ್ನ‌ ತಡೆಯಲು ಬನ್ನಿ, ಧರ್ಮಕ್ಕಾಗಿ ಕುದಿಯದ ರಕ್ತ, ರಕ್ತವೇ ಅಲ್ಲ. ಕಳ್ಳರಂತೆ ಧ್ವಜ ಬಿಚ್ಚಲು ಬಂದ ಅಧಿಕಾರಿಗಳಿಗೆ ಧಿಕ್ಕಾರ ಕೂಗಿದ್ದೇವೆ. ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಗ್ರಾಮಸ್ಥರು, ಹಿಂದೂ ಕಾರ್ಯಕರ್ತರು ಧ್ವಜ ಕಂಬದ ಮುಂದೆ ಶ್ರೀರಾಮನ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.