ಉತ್ತರಕನ್ನಡ: ಜನರನ್ನು ಬಲಿ ಪಡೆದಿದ್ದ ಗುಡ್ಡ ಕುಸಿತ ತಡೆಗೆ ಮುಂದಾದ ರಾಜ್ಯ ಸರ್ಕಾರ

ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಸುರಕ್ಷತಾ ಕ್ರಮಗಳನ್ನು ವಹಿಸಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಶಿರೂರು ದುರಂತ ನಡೆದ ಬೆನ್ನಲ್ಲೇ ಎಚ್ಚೆತ್ತಕೊಂಡಿರುವ ರಾಜ್ಯ ಸರ್ಕಾರದಿಂದ ಕ್ರಮತೆಗೆದುಕೊಂಡಿದೆ. 
 

government of karnataka come forward to prevent the landslides in Uttara Kananda grg

ಕಾರವಾರ(ಅ.18):  ಉತ್ತರಕನ್ನಡ ಜಿಲ್ಲೆಯ ಜನರನ್ನು ಬಲಿ ಪಡೆದಿದ್ದ ಗುಡ್ಡ ಕುಸಿತ ತಡೆಗೆ ರಾಜ್ಯ ಸರ್ಕಾರ ಮುಂದಾಗಿದೆ. 439 ಸ್ಥಳಗಳಲ್ಲಿ ಗುಡ್ಡ ಕುಸಿಯುವ ಮಾಹಿತಿಯನ್ನು ಜಿಎಸ್‌ಐ ತಜ್ಞರು ಕೊಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇದೀಗ ಎಚ್ಚೆತ್ತಕೊಂಡಿದೆ. 

ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಸುರಕ್ಷತಾ ಕ್ರಮಗಳನ್ನು ವಹಿಸಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಶಿರೂರು ದುರಂತ ನಡೆದ ಬೆನ್ನಲ್ಲೇ ಎಚ್ಚೆತ್ತಕೊಂಡಿರುವ ರಾಜ್ಯ ಸರ್ಕಾರದಿಂದ ಕ್ರಮತೆಗೆದುಕೊಂಡಿದೆ. 
ಜಿಯೋಗ್ರಾಫಿಕಲ್ ಸರ್ವೇ ಆಫ್ ಇಂಡಿಯಾ ಹಾಗೂ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಸಮ್ ತಂಡದಿಂದ ಜಿಲ್ಲೆಯಾದ್ಯಂತ ಸರ್ವೇ ನಡೆಸಿದೆ. ಸರ್ವೇ ಪ್ರಕಾರ 439 ಪಾಯಿಂಟ್‌ಗಳಲ್ಲಿ ಗುಡ್ಡ ಕುಸಿಯುವ ಸಾಧ್ಯತೆಯ ಆಘಾತಕಾರಿ ಮಾಹಿತಿ ಕೊಟ್ಟಿತ್ತು. 

ಶಿರೂರಲ್ಲಿ ಅರ್ಜುನ್ ಮೃತದೇಹ ಸಿಕ್ಕ ಬಳಿಕ ಟ್ರಕ್ ಮಾಲೀಕ-ಕುಟುಂಬಸ್ಥರ ನಡುವೆ ಜಟಾಪಟಿ ಜೋರು!

ತಜ್ಞರ ವರದಿಯ ಹಿನ್ನೆಲೆಯಲ್ಲಿ 100 ಕೋಟಿ ರೂ. ವೆಚ್ಚದ ಕಾಮಾಗಾರಿಗೆ ನೀಲಿ ನಕ್ಷೆ ಸಿದ್ಧಪಡಿಸಿ ಕಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಆದರೆ, ರಾಷ್ಟ್ರೀಯ ಹೆದ್ದಾರಿ ಪಕ್ಕದ ಪಾಯಿಂಟ್ ಗಳ ಜವಾಬ್ದಾರಿ NHAI ಹೆಗಲಿಗೆ ಇದೆ. 
ಜಿಲ್ಲೆಯಲ್ಲಾಗಿರುವ ಬಹಳಷ್ಟು ಗುಡ್ಡ ಕುಸಿತ ಪ್ರಕರಣಗಳು ಹೆದ್ದಾರಿ ಪಕ್ಕದಲ್ಲೇ ನಡೆದಿದ್ದು, ಜೀವ ಹಾನಿಯೂ ವರದಿಯಾಗಿವೆ. ಕರಾವಳಿಯಾದ್ಯಂತ ರಾಷ್ಟ್ರೀಯ ಹೆದ್ದಾರಿ ಬಳಿಯೇ ಸಾಕಷ್ಟು ಕಡೆಗಳಲ್ಲಿ ಗುಡ್ಡ ಕುಸಿತ ಸಂಭವಿಸಬಹುದಾದ ಸ್ಥಳಗಳಿವೆ. 

ರಾಷ್ಟ್ರಿಯ ಹೆದ್ದಾರಿ ನಿರ್ಮಾಣದ ವೇಳೆ ಕೈಗೊಂಡಿರುವ ಅವೈಜ್ಞಾನಿಕ ಕ್ರಮಗಳೇ ದುರ್ಘಟನೆಗೆ ಕಾರಣ ಎಂಬುದು ಬಹಿರಂಗವಾಗಿದೆ. ಈ ಹಿಂದೆ‌ ನಿರ್ಲಕ್ಷ್ಯ ಮಾಡಿದ್ದ NHAI ಕರ್ನಾಟಕ ಸರಕಾರದ ಆದೇಶ ಪಾಲಿಸುತ್ತಾ...?. ಗುಡ್ಡ ಕುಸಿತ ತಡೆಯಲು ಕ್ರಮ ಕೈಗೊಳ್ಳುತ್ತಾ..?  ಅನ್ನೋದು ಜನರ ಮುಂದಿರುವ ಪ್ರಶ್ನೆಯಾಗಿದೆ. 

Latest Videos
Follow Us:
Download App:
  • android
  • ios