Asianet Suvarna News Asianet Suvarna News

Ramanagara; ಅಧಿಕಾರಿಗಳಿಂದಲೇ ಕೋಟ್ಯಾಂತರ ಮೌಲ್ಯದ ಸರ್ಕಾರಿ ಜಮೀನು ಗುಳುಂ!

  • ಬೇಲಿಯೇ ಎದ್ದು ಹೊಲ ಮೇಯ್ದ ಕಥೆ
  • ಕೋಟ್ಯಾಂತರ ರೂ ಬೆಲೆ ಬಾಳುವ ಸರ್ಕಾರಿ ಜಮೀನು ಗುಳುಂ
  • ಜಿಲ್ಲಾಧಿಕಾರಿ,ಅಪರ ಜಿಲ್ಲಾಧಿಕಾರಿ ಹಾಗೂ ತಹಶಿಲ್ದಾರ್ ಗಳ ಸಹಿ ನಕಲು ಮಾಡಿದ ಅಧಿಕಾರಿಗಳು
government land golmaal from officials  in ramanagara gow
Author
Bengaluru, First Published Jun 9, 2022, 7:32 PM IST

ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್ 

ರಾಮನಗರ (ಜೂ.9): ಅದು ಸರಕಾರಿ ಗೋಮಾಳ. ಈ ಗೋಮಾಳವನ್ನ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿ ಮಾಡಿ ಪರಭಾರೆ ಮಾಡಿದ್ದಾರೆ. ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಹಾಗೂ ತಹಶಿಲ್ದಾರ್ ಗಳ ಸಹಿ ಕೂಡ ನಕಲು ಮಾಡಲಾಗಿದೆ.  ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಾಗವನ್ನ ಸರ್ಕಾರಿ ಅಧಿಕಾರಿಗಳೇ ಪರಭಾರೆ ಮಾಡಿ ಕಂಬಿ ಹಿಂದೆ ನಿಂತ್ತಿದ್ದಾರೆ.

ಹೌದು ರಾಮನಗರ ಜಿಲ್ಲೆ‌ ಬೆಂಗಳೂರಿಗೆ ತೀರ ಹತ್ತಿರ ಇರುವ ಕಾರಣ ಈ ಜಿಲ್ಲೆಯ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಹಾಗಾಗಿ ಜಮೀನುಗಳ ಅಕ್ರಮಗಳು ಸಹ ಜೋರಾಗಿವೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ಭೂ ಮಾಫಿಯಾದೊಂದಿಗೆ ಶಾಮೀಲಾಗಿ ಸರ್ಕಾರಿ ಗೋಮಾಳದ ಜಮೀನನ್ನು ಆಕ್ರಮವಾಗಿ ಪರಭಾರೆ ಮಾಡಿದ್ದಾರೆ. 

ಹಿಜಾಬ್ ಬಟ್ಟೆಯ ಹೋರಾಟವಲ್ಲ ಇದು ದೇಶ ವಿಭಜನೆಯ ಹುನ್ನಾರ; Kalladka

ಚನ್ನಪಟ್ಟಣ ತಹಶಿಲ್ದಾರ್ ಕಚೇರಿ ದ್ವಿತೀಯ ದರ್ಜೆ ಸಹಾಯಕನಾದ ಬಿ.ಕೆ. ಹರೀಶ್‌ಕುಮಾರ್, ಮತ್ತೊಬ್ಬ ಸಹಾಯಕ ನಾಗರಾಜು ಹಾಗೂ ಚನ್ನಪಟ್ಟಣ ನಗರಸಭಾ ಸದಸ್ಯ ಬೋರಲಿಂಗಯ್ಯ,ಜಿಲ್ಲಾಧಿಕಾರಿಗಳ ಕಚೇರಿ ದ್ವಿತೀಯ ದರ್ಜೆ ಕ್ಲರ್ಕ್ ಚಿಕ್ಕಸಿದ್ದಯ್ಯ, ಹಾಗೂ ಗ್ರಾ.ಪಂ ಸದಸ್ಯೆ ಪತಿ ಲೋಕೇಶ್ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಂಗಳೂರು ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಚನ್ನಪಟ್ಟಣ ತಾಲೂಕಿನ ಕೋಲೂರು ಗ್ರಾಮದ ಸರ್ವೇ ನಂಬರ್ 118 ರಲ್ಲಿ 192 ಎಕರೆ ಗೋಮಾಳ ಜಮೀನು ಇದೆ. ಈ ಗೋಮಾಳದಲ್ಲಿ ಸುಮಾರು 23 ಎಕರೆ ಜಾಗವನ್ನ ಈ ಮೇಲಿನ ಅಧಿಕಾರಿಗಳು ಹಣದ ಆಸೆಗೆ ಬಿದ್ದು ಕಡತಗಳನ್ನ ಬದಲಿಸಿ ಸಾಗುವಳಿ ಚೀಟಿ ನೀಡಿದ್ದಾರೆ. 

ಅಂದಹಾಗೇ ಚನ್ನಪಟ್ಟಣ ಉಪ ತಹಶಿಲ್ದಾರ್ ಲಕ್ಷ್ಮೀದೇವಮ್ಮ ಅವರು ಕಡತಗಳ ಪರಿಶೀಲನೆ ವೇಳೆ ಈ ಅಕ್ರಮ ಬೆಳಕಿಗೆ ಬಂದಿದೆ. ಈ ಮೇಲಿನ ಅಧಿಕಾರಿಗಳು ಸೇರಿ ಗೋಮಾಳ ಜಮೀನಿಗೆ ಸೇರಿದ ಕಡತವನ್ನ ಮನೆಗೆ ತಗೆದುಕೊಂಡು ಹೋಗಿ ಪುಟ ಸಂಖ್ಯೆ 6 ರಿಂದ 55 ವರೆಗಿನ ಮೂಲತಃ ಪುಟಗಳನ್ನ ತೆಗೆದು ಆ ಜಾಗಕ್ಕೆ ನಕಲು ಸೃಷ್ಟಿಸಿದ ಕಡತದ ಪುಟಗಳನ್ನ ಸೇರಿಸಿದ್ದಾರೆ. ಈ ನಕಲಿ ಪುಟದಲ್ಲಿ ಈ ಹಿಂದಿನ ಹಲವು ರಾಮನಗರ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು ಹಾಗೂ ಚನ್ನಪಟ್ಟಣ ತಹಶಿಲ್ದಾರ್ ಗಳ ಸಹಿಯನ್ನ ನಕಲು ಮಾಡಿದ್ದಾರೆ. ಈ ಸಂಬಂಧ ಚನ್ನಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಉಪ ತಹಶಿಲ್ದಾರ್ ಲಕ್ಷ್ಮಿ ದೇವಮ್ಮ ಪ್ರಕರಣ ದಾಖಲು ಮಾಡಿದ್ರು.

ಚಿತ್ರದುರ್ಗದಿಂದ ಸ್ಪರ್ಧಿಸಲು ಸಕಲ ಪ್ಲಾನ್ ಮಾಡಿರೋ ರಘು ಅಚಾರ್

ಇನ್ನೂ ಚನ್ನಪಟ್ಟಣದ ಮಾಜಿ ಶಾಸಕ ಹಾಗೂ ಹಾಲಿ ಎಂಎಲ್ಸಿ  ಸಿ ಪಿ ಯೋಗೇಶ್ವರ್ ಇದೆ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರಿದ ಅಧಿಕರಿಗಳ ಮಾಡಿರುವ ಹಗರಣವನ್ನು ಸಿಒಡಿಗೆ ವಹಿಸಿ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯವರನ್ನು ಬೇಟಿಮಾಡಿದರೆ. ಈ ಹಗರಣದ ಸಂಪುರ್ಣ ತನಿಖೆಯನ್ನು ಸಿಓಡಿ  ಮಾಡಬೇಕು ಎಂದು ಸ್ವತಹ ಸಿಪಿವೈ ಮುಖ್ಯಮಂತ್ರಿಗಳಿಗೆ  ಪತ್ರ ನೀಡಿ ಒತ್ತಾಯಿಸಿದ್ದಾರೆ.

ಕಳುವಾದ ಕಾರು ಇಟ್ಟುಕೊಂಡ ಮಾಲೀಕನಿಗೆ ಥಳಿಸಿದ ಪೊಲೀಸ್!

ಒಟ್ಟಾರೆ ಸರಕಾರಿ ಜಾಗವನ್ನ ಉಳಿಸಬೇಕಾದ ಅಧಿಕಾರಿಗಳೇ ಹಣದ ಆಸೆಗೆ ಬಿದ್ದು ಸರಕಾರಿ ಭೂಮಿಯನ್ನ ಅಕ್ರಮವಾಗಿ ಪರಭಾರೆ ಮಾಡಿ ಸಿಕ್ಕಿ ಬಿದ್ದಿದ್ದಾರೆ. ಈ ವಿಚಾರದಲ್ಲಿ ಇನ್ನಷ್ಟು ತನಿಖೆ ನಡೆದು ಮತ್ತಷ್ಟು ಭೂಗಳ್ಳರನ್ನ ಹೊರ ತರಬೇಕಿದೆ

Follow Us:
Download App:
  • android
  • ios