ರಾಜ್ಯದ ಪ್ರವಾಸಿ ಮಾರ್ಗದರ್ಶಿ (ಗೈಡ್‌)ಗಳಿಗೆ ರಾಜ್ಯ ಸರ್ಕಾರ ಬಂಪರ್‌ ಕೊಡುಗೆ ನೀಡಿದ್ದು, ಮಾಸಿಕ ಪೋ›ತ್ಸಾಹ ಧನ .5000ಗೆ ಏರಿಕೆ ಮಾಡಿದೆ. ವಾಸೋದ್ಯಮದ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತಿರುವ ರಾಜ್ಯದ 400 ಪ್ರವಾಸಿ ಗೈಡ್‌ಗಳಿಗೆ ಈ ಆದೇಶದಿಂದ ಅನುಕೂಲವಾಗಲಿದೆ. ಪ್ರವಾಸಿ ಗೈಡ್‌ಗಳು ಕೂಡ ಫುಲ್‌ ಖುಷಿಯಾಗಿದ್ದಾರೆ.

ಕೃಷ್ಣ ಎನ್‌.ಲಮಾಣಿ

ಹೊಸಪೇಟೆ (ಜ.22) ರಾಜ್ಯದ ಪ್ರವಾಸಿ ಮಾರ್ಗದರ್ಶಿ (ಗೈಡ್‌)ಗಳಿಗೆ ರಾಜ್ಯ ಸರ್ಕಾರ ಬಂಪರ್‌ ಕೊಡುಗೆ ನೀಡಿದ್ದು, ಮಾಸಿಕ ಪೋ›ತ್ಸಾಹ ಧನ .5000ಗೆ ಏರಿಕೆ ಮಾಡಿದೆ. ಹಾಗಾಗಿ ಪ್ರವಾಸಿ ಗೈಡ್‌ಗಳು ಕೂಡ ಫುಲ್‌ ಖುಷಿಯಾಗಿದ್ದಾರೆ.

ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತಿರುವ ರಾಜ್ಯದ 400 ಪ್ರವಾಸಿ ಗೈಡ್‌ಗಳಿಗೆ ಈ ಆದೇಶದಿಂದ ಅನುಕೂಲವಾಗಲಿದೆ. 2022ರ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರ ಪ್ರವಾಸಿ ಮಾರ್ಗದರ್ಶಿಗಳಿಗೆ ಮಾಸಿಕ ಪೋ›ತ್ಸಾಹ ಧನ ನೀಡಲಾಗುವುದು ಎಂದು ಘೋಷಿಸಿದ್ದರು. ಇದರನ್ವಯ 2022ರ ಏ.8ರಿಂದ ಪೋ›ತ್ಸಾಹ ಧನ ಮಾಸಿಕ .2000 ನೀಡಲು ಸರ್ಕಾರ ಆದೇಶಿಸಿತ್ತು. ಜತೆಗೆ ಸಂವಹನ ತರಬೇತಿ ನೀಡಲು ಕೂಡ ಘೋಷಣೆ ಮಾಡಲಾಗಿತ್ತು. ಈಗ ಸರ್ಕಾರ ಈ ಆದೇಶ ಮಾರ್ಪಡಿಸಿ ಮತ್ತೆ .3000 ಪೋ›ತ್ಸಾಹ ಧನ ಹೆಚ್ಚಳ ಮಾಡಿ 2023ರ ಜ.11ರಂದು ಆದೇಶಿಸಿದೆ.

ಸ್ವಿಜರ್‌ಲ್ಯಾಂಡ್‌ ರೀತಿ ಕೊಡಗು, ಚಿಕ್ಕಮಗ್ಳೂರು ಅಭಿವೃದ್ಧಿ: ಸಿಎಂ ಬೊಮ್ಮಾಯಿ

ಯಾಕೆ ಹೆಚ್ಚಳ?

ಪ್ರವಾಸೋದ್ಯಮಕ್ಕೆ ಪೂರಕವಾಗಿ ಕೆಲಸ ಮಾಡುತ್ತಿರುವ ಪ್ರವಾಸಿ ಮಾರ್ಗದರ್ಶಿಗಳಿಗೆ ಮಾಸಿಕ ಪೋ›ತ್ಸಾಹ ಧನ ಹೆಚ್ಚಳ ಮಾಡಬೇಕು ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನ ಸೆಳೆದಿದ್ದರು. ಅಲ್ಲದೇ, ಈ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ವಿಶ್ವ ಪ್ರವಾಸೋದ್ಯಮ ದಿನಾಚರಣೆ ವೇಳೆ ಘೋಷಣೆ ಮಾಡಿದ್ದರು. ಈಗ ಒಂದು ಕೋಟಿ .44 ಲಕ್ಷ ಹೆಚ್ಚಳವಾದರೂ ಸರ್ಕಾರ ಅಸ್ತು ಎಂದಿದೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ಅಧೀನ ಕಾರ್ಯದರ್ಶಿ ವಿಮಲಾಕ್ಷಿ ಬಿ. ಆದೇಶ ಹೊರಡಿಸಿದ್ದಾರೆ.

ಪ್ರವಾಸೋದ್ಯಮಕ್ಕೆ ಪೂರಕ:

ರಾಜ್ಯದ ಪ್ರವಾಸಿ ಮಾರ್ಗದರ್ಶಿಗಳಿಗೆ ಮಾಸಿಕ ಪೋ›ತ್ಸಾಹ ಧನ ನೀಡಬೇಕು ಎಂದು ಪ್ರವಾಸಿ ಮಾರ್ಗದರ್ಶಿಗಳ ಸಂಘ ಒತ್ತಾಯ ಮಾಡಿತ್ತು. ಇದಕ್ಕೆ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಬಜೆಟ್‌ನಲ್ಲಿ ಘೋಷಣೆ ಮಾಡಿ, ಈಗ ಮತ್ತೆ ಮಾಸಿಕ .5000 ಪೋ›ತ್ಸಾಹ ಧನಕ್ಕೆ ಆದೇಶ ನೀಡಲಾಗಿದೆ. ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುವ ಪ್ರವಾಸಿ ಗೈಡ್‌ಗಳು ದೇಶ-ವಿದೇಶಿ ಪ್ರವಾಸಿಗಳಿಗೆ ರಾಜ್ಯದ ಪ್ರವಾಸಿ ತಾಣಗಳ ಮಾಹಿತಿ ನೀಡುತ್ತಾರೆ. ಇಂಗ್ಲಿಷ್‌, ಹಿಂದಿ, ಕನ್ನಡ, ರಷ್ಯನ್‌ ಸೇರಿದಂತೆ ಇತರೆ ಭಾಷೆಗಳಲ್ಲಿ ವ್ಯವಹರಿಸುವ ಈ ಗೈಡ್‌ಗಳು ರಾಜ್ಯಕ್ಕೆ ಪ್ರವಾಸಿಗಳನ್ನು ಸೆಳೆಯಲು ಪ್ರಮುಖ ಪಾತ್ರವಹಿಸುತ್ತಾರೆ.

ಈಗಾಗಲೇ ರಾಜ್ಯದ ಮೈಸೂರು, ಹಂಪಿ,ಗೋಳಗುಂಬಜ್‌, ಬೇಲೂರು, ಹಳೇಬಿಡು ಸೇರಿದಂತೆ ವಿವಿಧ ಕಡೆ 400 ಪ್ರವಾಸಿ ಮಾರ್ಗದರ್ಶಿಗಳು ನೋಂದಣಿಯಾಗಿದ್ದಾರೆ. ಈ ಮಾರ್ಗದರ್ಶಿಗಳಿಗೆ ರಾಜ್ಯ ಸರ್ಕಾರದಿಂದ ಗುರುತಿನ ಪತ್ರ ಕೂಡ ನೀಡಲಾಗಿದೆ. ಜತೆಗೆ ತರಬೇತಿ ಕೂಡ ನೀಡಲಾಗುತ್ತಿದೆ.

Hampi Utsav 2023: ವಿಜಯನಗರದ ಗತ ವೈಭವದ ಹಂಪಿ ಉತ್ಸವಕ್ಕೆ ಭರದ ಸಿದ್ಧತೆ

ರಾಜ್ಯದ 400 ಪ್ರವಾಸಿ ಗೈಡ್‌ಗಳಿಗೆ ಮಾಸಿಕ .5000 ಪೋ›ತ್ಸಾಹ ಧನ ನೀಡಲಾಗುತ್ತಿದೆ. ಸರ್ಕಾರ ಈ ಹಿಂದೆ .2000 ನೀಡುವ ಆದೇಶ ಮಾಡಿತ್ತು. ಈಗ ಮತ್ತೆ .3000 ಹೆಚ್ಚಳ ಮಾಡಲಾಗಿದೆ. ಇದರಿಂದ ಪ್ರವಾಸಿ ಗೈಡ್‌ಗಳಿಗೆ ಅನುಕೂಲ ಆಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಬೇಡಿಕೆಗೆ ಸ್ಪಂದಿಸಿದ್ದಾರೆ.

ಆನಂದ ಸಿಂಗ್‌, ಪ್ರವಾಸೋದ್ಯಮ ಸಚಿವರು.

ಸರ್ಕಾರ ಪ್ರವಾಸಿ ಗೈಡ್‌ಗಳಿಗೆ ಮಾಸಿಕ .5000 ಪೋ›ತ್ಸಾಹ ಧನ ಹೆಚ್ಚಳ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಮಳೆ, ಗಾಳಿ, ಚಳಿ ಎನ್ನದೇ ಕೆಲಸ ಮಾಡುವ ಗೈಡ್‌ಗಳಿಗೆ ಇದರಿಂದ ಅನುಕೂಲ ಆಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ಉತ್ತಮ ಕೆಲಸ ಮಾಡಿದ್ದಾರೆ.

ವಿರುಪಾಕ್ಷಿ ವಿ. ಹಂಪಿ