ಯಾದಗಿರಿ: ಖಾತೆಯಲ್ಲಿ ಹಣವಿಲ್ಲ, ಸರ್ಕಾರದ ಚೆಕ್ ಬೌನ್ಸ್..!
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಗಿ (ಗುಲಸರಂ) ಗ್ರಾಮದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೀಡಿದ್ದ 31 ಸಾವಿರ ರು, ಚೆಕ್ ‘ಫಂಡ್ಸ್ ಇನ್ಸಫೀಷಿಯೆಂಟ್’ ಕಾರಣದಿಂದಾಗಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಮೇಲ್ವಿಚಾರಕ ಬನದಪ್ಪ ಎಂಬುವರಿಗೆ ಬ್ಯಾಂಕಿನಿಂದ “ರಿಟರ್ನ್ ಮೆಮೋ’ ಬಂದಿದೆ.
ಆನಂದ್ ಎಂ. ಸೌದಿ
ಯಾದಗಿರಿ(ಸೆ.03): ಪಂಚಾಯ್ತಿ ಗ್ರಂಥಾಲಯದ ಪತ್ರಿಕೆಗಳು ಹಾಗೂ ಶುಚಿಗಾರರ ಭತ್ಯೆ ಸೇರಿದಂತೆ ವಿವಿಧ ಖರ್ಚುಗಳ ಲೆಕ್ಕದ ಹಣಕ್ಕಾಗಿನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯೊಬ್ಬರು ನೀಡಿದ್ದ ಚೆಕ್ಕೊಂದು ಸರ್ಕಾರಿ ಖಾತೆಯಲ್ಲಿ ಹಣಿವಿಲ್ಲದ ಕಾರಣದಿಂದ ವಾಪಸ್ಸಾಗಿದೆ.
ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಗಿ (ಗುಲಸರಂ) ಗ್ರಾಮದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೀಡಿದ್ದ 31 ಸಾವಿರ ರು, ಚೆಕ್ ‘ಫಂಡ್ಸ್ ಇನ್ಸಫೀಷಿಯೆಂಟ್’ ಕಾರಣದಿಂದಾಗಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಮೇಲ್ವಿಚಾರಕ ಬನದಪ್ಪ ಎಂಬುವರಿಗೆ ಬ್ಯಾಂಕಿನಿಂದ “ರಿಟರ್ನ್ ಮೆಮೋ’ ಬಂದಿದೆ.
ಬಿಎಲ್ ಸಂತೋಷ್ ಸಂಪರ್ಕದಲ್ಲಿ 40 ಕಾಂಗ್ರೆಸ್ ಶಾಸಕರು: ಇದು ಶುದ್ಧ ಸುಳ್ಳು ಎಂದ ಶ್ರೀರಾಮುಲು!
ಜು.15ರಂದು ನೀಡಿದ್ದ ಈ ಚೆಕ್ ನಗದೀಕರಣಕ್ಕಾಗಿ ಅಲೆದಾಡಿದ್ದ ಬನದಪ್ಪ ಅವರಿಗೆ ಕರ್ನಾಟಕ ಬ್ಯಾಂಕಿನ ಚೆಕ್ ಆ.23ರಂದು ವಾಪಸ್ಸಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನೊಳಗೊಂಡ ಜಂಟಿ ಖಾತೆ ಇದಾಗಿದೆ.
ಚೆಕ್ ವಾಪಸ್ಸಾತಿ ಬಗ್ಗೆ ಪಿಡಿಓ ಅವರನ್ನು ಸಂಪರ್ಕಿಸಿದರೆ, “ದುಡ್ಡಿಲ್ಲದಿದ್ದರೆ ನಾನೇನು ಮಾಡಲಿ, ಕಂತು ಕಂತಿನಲ್ಲಿ ಹಣ ನೀಡುತ್ತೇನೆ, ಬೇಕಿದ್ದರೆ ತೊಗೊಳ್ಳಿ” ಎಂದು ಹಾರಿಕೆಯ ಉತ್ತರ ನೀಡುತ್ತಾರೆಂದು ಕನ್ನಡಪ್ರಭದೆದುರು ಬನದಪ್ಪ ನೋವು ತೋಡಿಕೊಂಡರು.
ಆಸ್ತಿಗಾಗಿ 5 ತಿಂಗಳ ಹಸುಗೂಸಿಗೆ ಹಾಲಿನಲ್ಲಿ ವಿಷ ಬೆರೆಸಿ ಕುಡಿಸಿದ ಮಲತಾಯಿ: ಕಂದಮ್ಮ ದಾರುಣ ಸಾವು
ಗ್ರಂಥಾಲಯದ ಪತ್ರಿಕೆಗಳ ಮೊತ್ತ, ಶುಚಿಗಾರರ ಭತ್ಯೆ, ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರಕ್ಕೆ ಬೇಕಾದ ಸಾಮಗ್ರಿಗಳು ಹಾಗೂ ತರಬೇತಿಗೆ ಹೋದ ಖರ್ಚು ಸೇರಿದಂತೆ 31 ಸಾವಿರ ರು. ಹಣ ಪಾವತಿಸುವಂತೆ ಬನದಪ್ಪ ಮನವಿ ಮಾಡಿಕೊಂಡಿದ್ದರು. ಇದಕ್ಕೆ ನೀಡಿದ್ದ ಚೆಕ್ ತಿಂಗಳಾದರೂ ನಗದೀಕರಣಗೊಳ್ಳದಿದ್ದರಿಂದ ಬ್ಯಾಂಕ್ ಹಾಗೂ ಪಂಚಾಯ್ತಿ ಕಚೇರಿಗೆ ಬನದಪ್ಪ ಅಲೆದಾಡಿದ್ದರೂ, ಸಂಬಂಧಿತರು ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರಲಿಲ್ಲ ಎನ್ನಲಾಗಿದೆ.
ಚೆಕ್ ವಾಪಸ್ಸಾಗಿದೆ ಎಂದು ಪಿಡಿಓ ಬಳಿ ಹೇಳಿದಾಗ, ಕರ (ಟ್ಯಾಕ್ಸ್) ವಸೂಲಿಯಾಗದ್ದರಿಂದ ಖಾತೆಯಲ್ಲಿ ಹಣವಿಲ್ಲ, ಬೇಕಿದ್ದರೆ ಕಂತಿನಲ್ಲಿ ಹಣ ತೊಗೊಳ್ಳಿ ಅಂತಾರೆ. ಅಲ್ಲದೆ, ಪಂಚಾಯ್ತಿ ಗ್ರಂಥಾಲಯ ಮೇಲ್ವಿಚಾರಕರ ವೇತನ ಜಮೆಯಾಗಿ 3 ತಿಂಗಳಾದರೂ ಪಿಡಿಓ ಅನುದಾನ ಬಂದಿಲ್ಲ ಎಂದು ಹೇಳುತ್ತಾರೆ ಎಂದು ಗುರುಸುಣಗಿ ಗ್ರಾಮದ ನೊಂದ ವ್ಯಕ್ತಿ ಬನದಪ್ಪ ತಿಳಿಸಿದ್ದಾರೆ.