ಉಡುಪಿ (ಆ.03): ಪ್ರಸ್ತುತ ಬಾಧಿಸುತ್ತಿರುವ ಕೊರೋನಾ, ಮುಂದೆ ಬಾಧಿಸಬಹುದಾದ ಇತರ ರೋಗಗಳ ಉಪಶಮನದಲ್ಲಿ ‘ಸಕಾಲ ನಿದ್ರಾ ಮತ್ತು ಸಕಾಲ ಆಹಾರ ಪದ್ಧತಿಗಳು’ ಅದ್ಭುತ ಪರಿಣಾಮ ಬೀರಬಲ್ಲವು. ಕೊರೋನಾ ಪೀಡಿತರಾದ ಸಂದರ್ಭ ಇದನ್ನು ಸ್ವಂತ ಅನುಭವದಿಂದ ಕಂಡುಕೊಂಡಿದ್ದೇವೆ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಜತೆಗೆ, ಈ ಪದ್ಧತಿಯನ್ನು ಜನ ತಪ್ಪದೇ ಪಾಲಿಸುವಂತೆ, ಆಧು​ನಿ​ಕ ಜೀವನಶೈಲಿ ಬದಲಿಸುವಂತೆ ಮಾಡಲು ಪೂರಕ ಶಾಸನಾತ್ಮಕ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಪ್ರಧಾನಿ ಮೋದಿ ಅವ​ರನ್ನು ಶ್ರೀಗಳು ಇದೇ ವೇಳೆ ಒತ್ತಾ​ಯಿ​ಸಿ​ದ್ದಾ​ರೆ.

ಹಾಸನದ ಕಾರ್ಖಾನೆಯ 50 ಕಾರ್ಮಿಕರಿಗೆ ಒಂದೇ ಬಾರಿ ವಕ್ಕರಿಸಿದ ವೈರ​ಸ್...

ಕೊರೋನಾ ಚಿಕಿತ್ಸೆ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮಠಕ್ಕೆ ಹಿಂತಿರುಗಿರುವ ಸ್ವಾಮೀಜಿ, ಸಕಾಲದ ನಿದ್ರೆ ಮತ್ತು ಸಕಾಲದಲ್ಲಿ ಆಹಾರ ಸೇವನೆಯಿಂದ ತಮ್ಮ ದೇಹದ ರೋಗನಿರೋಧಕ ಶಕ್ತಿಯ​ಲ್ಲಾದ ಹೆಚ್ಚಳ ಕುರಿತು ತಮ್ಮ ಅನುಭವವನ್ನು ಭಾನು​ವಾ​ರ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

ಸೋಂಕಿತ ಮಗುವಿನೊಂದಿಗೆ ತಾಯಿ ಇರಲು ಲಂಚ ಕೇಳಿದ ಬಿಬಿಎಂಪಿ ಸಿಬ್ಬಂದಿ?.

‘ನಮಗೆ ಕೊರೋನಾ ಬಾಧೆ ಶುರುವಾದದ್ದು ಕೆಮ್ಮಿನ ಮೂಲಕ. ಅದು ಪ್ರತಿನಿತ್ಯ ಬೆಳಗ್ಗೆ 4ಕ್ಕೆ ಆರಂಭವಾಗುತ್ತಿತ್ತು. ಈ ಬಗ್ಗೆ ತಜ್ಞರನ್ನು ವಿಚಾರಿಸಿದಾಗ, ವಿಳಂಬ ನಿದ್ರೆಯಿಂದ ಹಾಗಾಗುತ್ತದೆ ಎಂದರು. ನಂತರ ಪ್ರಯತ್ನಪಟ್ಟು ರಾತ್ರಿ 9ಕ್ಕೆ ಮಲಗಲಾರಂಭಿಸಿದಾಗ ಕೆಮ್ಮು ಇಳಿಮುಖವಾದದ್ದನ್ನು ಕಂಡು ಅಚ್ಚ​ರಿಪಟ್ಟೆವು’ ಎಂದ​ರು.

ಆಸ್ಪತ್ರೆಯಲ್ಲಿ ರಾತ್ರಿ 8ಕ್ಕೆ ಮಲಗಿ, ಬೆಳಗ್ಗೆ 4ಕ್ಕೆ ಏಳು​ವು​ದ​ರಿಂದ ದೇಹದಲ್ಲಿ ಪ್ರತಿರೋಧ ಶಕ್ತಿ ಜಾಗೃತವಾಗುವುದನ್ನು ಕಂಡುಕೊಂಡೆವು. ಶಾಸ್ತ್ರೀಯವಾಗಿ ಚಿಂತಿಸಿದಾಗ, ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಯುಕ್ತಾಹಾರವಿಹಾರಸ್ಯ, ಯುಕ್ತ ಸ್ವಪ್ನಾವಬೋಧಸ್ಯ ಎಂದು ಯುಕ್ತ ಸಮಯದ ಆಹಾರ ನಿದ್ರೆಗೆ ಮಹತ್ವ ಕೊಟ್ಟಿದ್ದನ್ನು ಗಮನಿಸಿದೆವು. ಮುಂದೆಯೂ ಭೀಕರವಾದ ಜೈವಿಕ ಅಸ್ತ್ರಗಳು ಪ್ರಯೋಗವಾಗುವ ಸಂದರ್ಭವಿದ್ದು, ಜನ ಮತ್ತು ಯೋಧ​ರ​ಲ್ಲಿ ಪ್ರತಿರೋಧ ಶಕ್ತಿ ಸಂವರ್ಧನೆಗೆ ವಿಶೇಷ ಮಹತ್ವ ಕೊಡಬೇಕಿದೆ. ಅದಕ್ಕಾಗಿ ಯೋಗ, ಪ್ರಾಣಾಯಾಮ ಆಯುರ್ವೇದಗಳಿಗೆ ಸರ್ಕಾ​ರ ಹೆಚ್ಚಿನ ಮಹತ್ವ ಕೊಡಬೇಕಾದ ತುರ್ತು ಬಂದಿದೆ ಎಂದಿದ್ದಾ​ರೆ.

ಬಿಎಸ್‌ವೈ ಬೆನ್ನಲ್ಲೇ ಮಗಳಿಗೂ ಕೊರೋನಾ, ಆಸ್ಪತ್ರೆಗೆ ದಾಖಲು!

ರಾಷ್ಟ್ರೀಯ ವಿಶ್ರಾಂತಿ ಸಮಯ: ಸೂರ್ಯಾಸ್ತಕ್ಕಿಂತ ಮೊದಲು ಆಹಾರ ಸೇವನೆ, ರಾತ್ರಿ 8ರಿಂದ ಬೆಳಗ್ಗೆ 4ರ ತನಕ ರಾಷ್ಟ್ರೀಯ ವಿಶ್ರಾಂತಿ ಸಮಯ ಎಂದು ಘೋಷಿಸಿ. ಈ ಸಮಯದಲ್ಲಿ ಯಾವುದೇ ಟೀವಿ, ಮನೋರಂಜನೆ ಕಾರ್ಯಕ್ರಮ ನಿರ್ಬಂಧಿಸಿ, ದೇಶದ ಆರೋಗ್ಯಕ್ಕಾಗಿ ರಾತ್ರಿ ಲಾಕ್‌ಡೌನ್‌ ನಂಥ ಕಠಿಣ ಕ್ರಮ ಜಾರಿ ತರಬೇಕು ಎಂದು ಶ್ರೀಗಳು ಪ್ರತಿ​ಪಾ​ದಿ​ಸಿ​ದ್ದಾ​ರೆ.