ಮುಂಬರುವ ಹಬ್ಬದ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ರೈಲ್ವೆ ಇಲಾಖೆ ವಿಶೇಷ ರೈಲುಗಳ ಸಂಚಾರಕ್ಕೆ ಅನುಮತಿ ನೀಡಿದೆ. ಚರ್ಲಪಲ್ಲಿ-ಬೆಂಗಳೂರು ಮತ್ತು ಮುಂಬೈ-ಬೆಂಗಳೂರು ನಡುವೆ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಈ ವಿಶೇಷ ರೈಲುಗಳು ಓಡಾಟ ನಡೆಸಲಿವೆ. ಇದರಿಂದ ಹಬ್ಬಕ್ಕೆ ಊರಿಗೆ ತೆರಳುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಬೆಂಗಳೂರು: ಮುಂಬರುವ ಹಬ್ಬ ದಿನಗಳಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಯಂತ್ರಿಸಲು ಮಾಡಲು ರೈಲ್ವೆ ಇಲಾಖೆ ಮಹತ್ವದ ಕ್ರಮಕೈಗೊಂಡಿದೆ. ಪ್ರಯಾಣಿಕರ ಅನುಕೂಲಕ್ಕೆ ವಿಶೇಷ ರೈಲು ಸಂಚಾರಕ್ಕೆ ಅನುಮತಿ ನೀಡಿದ್ದು, ಚರ್ಲಪಲ್ಲಿ ಮತ್ತು ಬೆಂಗಳೂರು ನಡುವೆ ವಿಶೇಷ ರೈಲು ಓಡಾಟ ನಡೆಸಲಾಗಿದೆ.
ವೇಳಾಪಟ್ಟಿ ಇಲ್ಲಿದೆ
ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿಂದ ತೆಲಂಗಾಣದ ಚರ್ಲಪಲ್ಲಿಗೆ ವಿಶೇಷ ರೈಲು ಸಂಚಾರ ನಡೆಸಲಿದೆ. ರೈಲು ಸಂಖ್ಯೆ 07065 ಚರ್ಲಪಲ್ಲಿ–SMVT ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ಓಡಾಟ ನಡೆಸಲಿದೆ. ಅಕ್ಟೋಬರ್ 5, 12, 19, 26 ಹಾಗೂ ನವೆಂಬರ್ 2, 9, 16, 23, 30 ರಂದು ರೈಲು ಸಂಚಾರ ನಡೆಯಲಿದೆ.
ಈ ರೈಲು ರಾತ್ರಿ 09:50 ಗಂಟೆಗೆ ಚರ್ಲಪಲ್ಲಿಯಿಂದ ಹೊರಟು, ಮರುದಿನ ಮಧ್ಯಾಹ್ನ 01:15 ಗಂಟೆಗೆ SMVT ಬೆಂಗಳೂರು ತಲುಪಲಿದೆ. ವಿಶೇಷ ರೈಲಿನಿಂದ ಸಿಕಂದರಾಬಾದ್ ಜಂಕ್ಷನ್, ಬೇಗಂಪೇಟೆ, ಲಿಂಗಂಪಲ್ಲಿ, ವಿಕಾರಾಬಾದ್ ಜಂಕ್ಷನ್, ಸೇಡಂ, ಯಾದಗಿರಿ, ಕೃಷ್ಣ, ರಾಯಚೂರು ಜಂಕ್ಷನ್, ಮಂತ್ರಾಲಯಂ ರೋಡ್, ಆದೋನಿ, ಗುಂತಕಲ್ ಜಂಕ್ಷನ್, ಅನಂತಪುರ, ಧರ್ಮಾವರಂ ಜಂಕ್ಷನ್, ಹಿಂದೂಪುರ ಪ್ರಯಾಣಿಕರಿಗೆ ಅನುಕೂಲ ಆಗಲಿದೆ.
ವಿಶಾಖಪಟ್ಟಣ ಮತ್ತು ಬೆಂಗಳೂರು ನಡುವೆ ವಿಶೇಷ ರೈಲು
ಅಷ್ಟೇ ಅಲ್ಲದೆ, ವಿಶಾಖಪಟ್ಟಣ ಮತ್ತು ಬೆಂಗಳೂರು ನಡುವೆ ವಿಶೇಷ ರೈಲುಗಳ ಸಂಚಾರಕ್ಕೆ ಅವಕಾಶ ನೀಡಿದೆ. ರೈಲು ನಂಬರ್ 01013 ಅಕ್ಟೋಬರ್ 10ರಿಂದ ನವೆಂಬರ್ 21ರ ವರೆಗೂ ಪ್ರತಿ ಶನಿವಾರ ನಡುರಾತ್ರಿ 12:35ಕ್ಕೆ CSMT ಮುಂಬೈನಿಂದ ಪ್ರಾರಂಭವಾಗಿ, ಸುಮಾರು 24 ಗಂಟೆಗಳ ಪ್ರಯಾಣದ ನಂತರ ರಾತ್ರಿ 11:55ಕ್ಕೆ ಗಂಟೆಗೆ SMVT ಬೆಂಗಳೂರಿಗೆ ಆಗಮಿಸಲಿದೆ.
ಮತ್ತೆ ಪ್ರಯಾಣಿಸಲು ರೈಲು ನಂಬರ್ 01014, ಅಕ್ಟೋಬರ್ 11ರಿಂದ ನವಂಬರ್ 22ರ ವರೆಗೂ ಪ್ರತಿ ಭಾನುವಾರ 4:30ಕ್ಕೆ SMVT ಬೆಂಗಳೂರಿನಿಂದ ಆರಂಭವಾಗ, ಬೆಳಗ್ಗೆ 4:05ಕ್ಕೆ CSMT ಮುಂಬೈಗೆ ತಲುಪಲಿದೆ. ಈ ಎರಡು ರೈಲುಗಳು ಪ್ರತಿ ಮಾರ್ಗದಲ್ಲಿ ಏಳು ಬಾರಿ ಪ್ರಯಾಣಿಸಲಿದೆ. ಈ ಎರಡು ರೈಲುಗಳು ದಾದರ್. ಥಾಣೆ, ಕಳ್ಯಾಣ್, ಲೋನಾವಾಲಾ, ಪುಣೆ, ಲೋನಂದ್, ಸತರಾ, ಕರಾಡ್, ಸಾಂಗ್ಲಿ, ಮಿರಾಜ್, ಕುಡಾಚಿ, ರಾಯಭಾಗ್, ಘಟಪ್ರಭ, ಬೆಳಗಾವಿ, ಲೋಂಡಾ, ಧಾರವಾಡ, ಹುಬ್ಬಳ್ಳಿ, ಹಾವೇರಿ, ರಾಣಿಬೆನ್ನೂರ್, ಹರಿಹರ, ದಾವಣಗೆರೆ, ರಾಯಭಾಗ, ಬೆಳಗಾವಿ, ಅರಿಸಿಕರೆ, ತುಮಕೂರು ಮಾರ್ಗದಲ್ಲಿ ಸಂಚರಿಸಲಿದೆ.


