ರೋಗನಿರೋಧಕ ಶಕ್ತಿ ವೃದ್ಧಿಸಲು ಉತ್ತಮ ಆಹಾರ ವಿಧಾನ ಒಳ್ಳೆಯ ಆಯ್ಕೆ

ಕೊರೋನಾ ಸೋಂಕಿನ ಲಕ್ಷಣಗಳನ್ನು ಸಮರ್ಥವಾಗಿ ನಿಭಾಯಿಸಲು ಆಯುರ್ವೇದ ಔಷಧಗಳು, ಯುನಾನಿ ಕಷಾಯಗಳು ಮತ್ತು ಮನೆಮದ್ದುಗಳು ಪೂರಕವಾಗಿವೆ ಎಂದು ಜಿಲ್ಲಾ ಆಯುಷ್‌ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ದೊಡ್ಡಮನಿ ಹೇಳಿದರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

Good Food habits good options for increasing resistance Power Says Shivamogga Ayush Collage principal Doddamani

ಶಿವಮೊಗ್ಗ(ಜೂ.24): ಕೊರೋನಾ ವೈರಸ್‌ ನಮ್ಮ ದುರ್ಬಲವಾದ ದೇಹದಲ್ಲಿ ಬೆಳೆಯುತ್ತದೆ. ಹಾಗಾಗಿ ಪ್ರತಿಯೊಬ್ಬರೂ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಹಾರ ವಿಧಾನ ಮತ್ತು ಮನೆಮದ್ದು ಪಾಲಿಸುವುದು ತುಂಬಾ ಕ್ಷೇಮ ಎಂದು ಜಿಲ್ಲಾ ಆಯುಷ್‌ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ದೊಡ್ಡಮನಿ ಹೇಳಿದರು.

ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ಕೊರೋನಾ ನಿಯಂತ್ರಿಸಲು ಶ್ರಮಿಸುತ್ತಿರುವ ಪಾಲಿಕೆ ಅಧಿ​ಕಾರಿ-ಸಿಬ್ಬಂ​ದಿ ಹಾಗೂ ಪೌರಸೇವಾ ಕಾರ್ಮಿಕರಿಗಾಗಿ ಆಯುಷ್‌ ಇಲಾಖೆಯಿಂದ ನೀಡಲಾದ ಔಷಧಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೊರೋನಾ ಸೋಂಕಿನ ಲಕ್ಷಣಗಳನ್ನು ಸಮರ್ಥವಾಗಿ ನಿಭಾಯಿಸಲು ಆಯುರ್ವೇದ ಔಷಧಗಳು, ಯುನಾನಿ ಕಷಾಯಗಳು ಮತ್ತು ಮನೆಮದ್ದುಗಳು ಪೂರಕವಾಗಿವೆ ಎಂದರು. ಅಮೃತಬಳ್ಳಿ ಸೇರಿ ವಿವಿಧ ಗಿಡಮೂಲಿಕೆ ಮತ್ತು ಆಹಾರ ಪದಾರ್ಥಗಳ ಸಂಯೋಗದೊಂದಿಗೆ ಉತ್ಪತ್ತಿಯಾದ ಔಷಧಗಳನ್ನು ಸೇವಿಸುವ ಮೂಲಕ ದೇಹಕ್ಕೆ ಆರೋಗ್ಯಕವಚ ಸೃಷ್ಟಿಸಿ ಕೊಳ್ಳಬಹುದಾಗಿದೆ ಎಂದ ಅವರು, ಆಯುರ್ವೇದದ ಔಷಧಗಳನ್ನು ಬಳಸಿದ ಸೋಂಕಿತರು ಗುಣಮುಖರಾಗಿರುವುದು ವೈಜ್ಞಾನಿಕವಾಗಿ ದೃಢೀಕರಿಸಲಾಗಿದೆ ಎಂದೂ ವಿವರಿಸಿದರು.

ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ಮಾತನಾಡಿ, ಅನಾದಿಕಾಲದಿಂದಲೂ ಮಾನವ ತನ್ನ ದೇಹವನ್ನು ರೋಗ ರುಜಿನಗಳಿಂದ ರಕ್ಷಿಸಿಕೊಳ್ಳಲು ಆಯುರ್ವೇದ ಔಷಧಗಳ ಮೊರೆಹೋಗುತ್ತಿದ್ದುದು ಸರ್ವವಿ​ತ. ಇಂತಹ ಮೌಲಿಕವಾದ ಆಯುರ್ವೇದ ಔಷಧಗಳನ್ನು ವೈದ್ಯರ ಸಲಹೆಯ ಮೇರೆಗೆ ನಿಯಮಿತವಾಗಿ ಸೇವಿಸುತ್ತಿದ್ದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವುದು ಎಂದು ತಿಳಿಸಿದರು.

ಕೇಂದ್ರ ಆಯುಷ್‌ ಮಂತ್ರಾಲಯವು ಹೋಮಿಯೋಪಥಿ ಮತ್ತು ಯುನಾನಿ ಔಷಧಗಳು ಕೊರೋನಾ ಸೋಂಕು ಪರಿಣಾಮಕಾರಿಯಾಗಿ ನಿಯಂತ್ರಿಸಬಲ್ಲವು ಎಂದು ಶಿಫಾರಸು ಮಾಡಿದೆ ಎಂದ ಅವರು, ಪ್ರಧಾನಿ ಮೋದಿಯವರು ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಜಗತ್ತಿಗೆ ಪರಿಚಯಿಸುತ್ತಿರುವುದರ ಜೊತೆಗೆ ಇಲ್ಲಿನ ಯೋಗ ಮತ್ತು ಆಯುರ್ವೇದ ವೈದ್ಯಕೀಯ ಪದ್ದತಿಯನ್ನು ತಿಳಿಸುತ್ತಿರುವುದು ದೇಶದ ಗೌರವ ಹೆಚ್ಚಿಸಲಿದೆ ಎಂದು ಅಭಿಪ್ರಾಯಿಸಿದರು.

ಹಸುಗೂಸುಗಳಿಗೂ ಮಹಾಮಾರಿ ಕೊರೋನಾ ಕಾಟ: ಪೋಷಕರಲ್ಲಿ ಹೆಚ್ಚಿದ ಆತಂಕ

ಕೊರೋನಾ ಹಿನ್ನೆಲೆ ಜಗತ್ತಿನಾದ್ಯಂತ ಜನರು ಆಯುರ್ವೇದ ಮತ್ತು ಯೋಗದ ಮಹತ್ವವನ್ನು ಅರಿಯುವುದಕ್ಕೆ ವಿಶೇಷ ಗಮನ ನೀಡುತ್ತಿದ್ದಾರೆ. ವೈರಸ್‌ ನಿಯಂತ್ರಣಕ್ಕಾಗಿ ಆಯುಷ್‌ ಇಲಾಖೆಯ ಸೂಚನೆಗಳನ್ನು ಅನುಸರಿಸುವಂತೆ ಸೂಚಿಸಿದ ಅವರು, ಇಲ್ಲಿನ ಜನರ ಜೀವನಶೈಲಿ, ಆಹಾರ ಪದ್ದತಿ ಮತ್ತು ಸಾಂಪ್ರದಾಯಿಕ ಚಿಕಿತ್ಸಾ ವಿಧಾನ ಸೋಂಕಿನ ನಿಯಂತ್ರಣಕ್ಕೆ ಸಹಕಾರಿಯಾಗಿವೆ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಮಹಾನಗರಪಾಲಿಕೆ ಮೇಯರ್‌ ಸುವರ್ಣ ಶಂಕರ್‌ ಅವರು ಸಾಂಕೇತಿಕವಾಗಿ ಪಾಲಿಕೆ ಸಿಬ್ಬಂ​ದಿಗಳಿಗೆ ಔಷಧಿ ವಿತರಿಸಿದರು. ಉಪಮೇಯರ್‌ ಸುರೇಖಾ ಮುರಳೀಧರ್‌, ಜ್ಞಾನೇಶ್ವರ್‌, ಗನ್ನಿಶಂಕರ್‌, ಪಾಲಿಕೆ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಪದಾ​ಧಿಕಾರಿಗಳು ಹಾಗೂ ಆಯುಷ್‌ ಇಲಾಖೆ ವೈದ್ಯಾಧಿ​ಕಾರಿಗಳು ಉಪಸ್ಥಿತರಿದ್ದರು.
 

Latest Videos
Follow Us:
Download App:
  • android
  • ios