ಸೌಜನ್ಯಾ ಅತ್ಯಾಚಾರಿಗಳಿಗೆ ‘ದೈವದ ಶಿಕ್ಷೆ’ ಕಾದಿದೆ: ಮಹೇಶ ಶೆಟ್ಟಿ
ವಿದ್ಯಾರ್ಥಿನಿ ಸೌಜನ್ಯಾ ಮೇಲಿನ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣದ ನ್ಯಾಯಾಂಗ ವ್ಯವಸ್ಥೆಯಡಿ ತನಿಖೆ ಕೈಗೊಂಡು, ನ್ಯಾಯ ಕೊಡಿಸಬೇಕು. ನ್ಯಾಯ ಸಿಗದಿದ್ದರೆ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ, ಶ್ರೀ ಅಣ್ಣಪ್ಪ ಸ್ವಾಮಿಯೇ ನ್ಯಾಯ ಕೊಡಿಸುತ್ತಾರೆ ಎಂದು ಪ್ರಜಾಪ್ರಭುತ್ವ ವೇದಿಕೆ ರಾಜ್ಯಾಧ್ಯಕ್ಷ ಮಹೇಶ ಶೆಟ್ಟಿ ತಿಮರೋಡಿ ಹೇಳಿದ್ದಾರೆ.
ದಾವಣಗೆರೆ (ಆ.20): ವಿದ್ಯಾರ್ಥಿನಿ ಸೌಜನ್ಯಾ ಮೇಲಿನ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣದ ನ್ಯಾಯಾಂಗ ವ್ಯವಸ್ಥೆಯಡಿ ತನಿಖೆ ಕೈಗೊಂಡು, ನ್ಯಾಯ ಕೊಡಿಸಬೇಕು. ನ್ಯಾಯ ಸಿಗದಿದ್ದರೆ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ, ಶ್ರೀ ಅಣ್ಣಪ್ಪ ಸ್ವಾಮಿಯೇ ನ್ಯಾಯ ಕೊಡಿಸುತ್ತಾರೆ ಎಂದು ಪ್ರಜಾಪ್ರಭುತ್ವ ವೇದಿಕೆ ರಾಜ್ಯಾಧ್ಯಕ್ಷ ಮಹೇಶ ಶೆಟ್ಟಿ ತಿಮರೋಡಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ. ಆದರೆ, ಕಳೆದ 11 ವರ್ಷದಲ್ಲಿ ನ್ಯಾಯ ಪೀಠದಲ್ಲಿ ನ್ಯಾಯ ಸಿಗುವುದಿಲ್ಲವೆಂಬಂತಾಗಿದೆ. ಸೌಜನ್ಯಾ ಮತ್ತು ಆಕೆಯ ಕುಟುಂಬಕ್ಕೆ ದೈವದ ನ್ಯಾಯವಾದರೂ ಸಿಕ್ಕೇ ಸಿಗಲಿದೆ. ಸೌಜನ್ಯಾ ಪ್ರಕರಣದಲ್ಲಿ ಸಂತೋಷ್‌ರಾವ್ ಆರೋಪಿಯಾಗಿ 6 ವರ್ಷ ಜೈಲು ಶಿಕ್ಷೆ ಅನುಭವಿಸಿ, ಈಗ 11 ವರ್ಷದ ನಂತರ ನಿರ್ದೋಷಿಯೆಂದು ಹೊರ ಬರುತ್ತಾರೆ. ಹಾಗಾದರೆ ಸೌಜನ್ಯಾ ಪ್ರಕರಣದ ನಿಜವಾದ ಅಪರಾಧಿಗಳು ಯಾರು? ಸೌಜನ್ಯಾಳನ್ನು ಒಬ್ಬರಲ್ಲ ಸಾಮೂಹಿಕ ಅತ್ಯಾಚಾರ ಎಸಗಿ, ಹತ್ಯೆ ಮಾಡಲಾಗಿದೆಯೆಂದಿದೆ. ನ್ಯಾಯ, ಧರ್ಮದೇವತೆ ಜಾಗದಲ್ಲಿ ಈ ಘಟನೆ ಆಗಿದೆ ಎಂದು ತಿಳಿಸಿದರು.
ತಮಿಳುನಾಡಿಗೆ ನೀರು ಬಿಟ್ಟರೆ ಕುಡಿಯುವ ನೀರಿನ ತತ್ವಾರ: ಶೋಭಾ ಕರಂದ್ಲಾಜೆ
ಭೂಮಿ, ರಸ್ತೆ, ನೀರು, ಹೆಣ್ಣಿಗಾಗಿ ಅಲ್ಲಿ ಸಾವಿರಾರು ಕಾನೂನು ಬಾಹಿರ ಕೃತ್ಯಗಳಾಗಿವೆ. ಆದರೆ, ಒಂದೇ ಒಂದು ಎಫ್‌ಐಆರ್ ಸಹ ದಾಖಲಾಗುವುದಿಲ್ಲ. ಅಲ್ಲಿನ ಎಸಿ, ಡಿಸಿ ನ್ಯಾಯಾಲಯ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಆದೇಶ ಮಾಡಿದರೂ, ಹೈಕೋರ್ಚ್ ಸೂಚನೆ ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲ್ಲ. ಸೌಜನ್ಯಾ ಪ್ರಕರಣದ ನಿಜವಾದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಈ ಪ್ರಕರಣದ ಮೂವರು ಸಾಕ್ಷಿಗಳ ನಿಗೂಢವಾಗಿ ನಾಶ ಮಾಡಲಾಯಿತು ಎಂದು ಹೇಳಿದರು.
ಶೀಘ್ರ ದಾವಣಗೆರೆಯಲ್ಲೂ ಹೋರಾಟ ಶುರು: ಸೌಜನ್ಯಾನ ಸಾಮೂಹಿಕ ಅತ್ಯಾಚಾರ ಎಸಗಿದ ನಿಜವಾದ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆ ಆಗದಿದ್ದರೂ, ಅಣ್ಣಪ್ಪ ಸ್ವಾಮಿಯಂತೂ ಸುಮ್ಮನೆ ಬಿಡುವುದಿಲ್ಲ. ಕಡೆಗೊಂದು ದಿನ ಅತ್ಯಾಚಾರಿ, ಹಂತಕರು ಮಾನಸಿಕ ಅಸ್ವಸ್ಥರಾಗಿ ತಾವೇ ಅತ್ಯಾಚಾರ, ಕೊಲೆ ಮಾಡಿದ್ದು ಎಂಬುದಾಗಿ ಹೇಳಿ ಸುತ್ತುವ ದಿನಗಳೂ ಬರುತ್ತವೆ. ಸೌಜನ್ಯಾಳಲ್ಲಿ ನನ್ನ ತಾಯಿ, ಸಹೋದರಿ, ಮಗಳನ್ನು ಕಾಣುತ್ತೇವೆ. ಅಪ್ರಾಪ್ತ ಮಗು ಸೌಜನ್ಯಾಗೆ ನ್ಯಾಯ ಸಿಗುವವರೆಗೂ ನಾವು ಸುಮ್ಮನಿರುವುದಿಲ್ಲ. ಶೀಘ್ರದಲ್ಲೇ ದಾವಣಗೆರೆಯಲ್ಲೂ ಹೋರಾಟ ಶುರು ಮಾಡಲಿದ್ದು, ರಾಜ್ಯವ್ಯಾಪಿ ಪ್ರತಿಭಟಿಸಲಿದ್ದೇವೆ ಎಂದು ತಿಳಿಸಿದರು. ಪ್ರಜಾಪ್ರಭುತ್ವ ವೇದಿಕೆಯ ಅನಿಲಕುಮಾರ, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್, ಶ್ರೀಧರ್, ರಾಹುಲ್, ಪರಶುರಾಮ, ರಾಜು, ಮಾರ್ಕಂಡೇಯ, ಶ್ರೀಧರ, ರಘು ಇತರರಿದ್ದರು.
ಇಡೀ ರಾಜ್ಯ ಬರಗಾಲಪೀಡಿತ ಎಂದು ಘೋಷಿಸಿ: ಸಂಸದ ರಾಘವೇಂದ್ರ ಆಗ್ರಹ
ಸೌಜನ್ಯಾ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಆಕೆಯ ಅಮಾನುಷವಾಗಿ ಹತ್ಯೆ ಮಾಡಿದವರ ನಾನು ಬಿಡುವುದಿಲ್ಲ. ಸೌಜನ್ಯಾ ಪ್ರಕರಣದ ಆಗಿನ ತನಿಖಾಧಿಕಾರಿ, ಅಂದು ಪೋಸ್ಟ್ ಮಾರ್ಟಂ ಮಾಡಿದ್ದ ವೈದ್ಯ ಸೇರಿ ಐದಾರು ಜನರನ್ನು ಹಿಡಿದು, ವಿಚಾರಣೆಗೆ ಒಳಪಡಿಸಿದರೆ ಅತ್ಯಾಚಾರಿ, ಹಂತಕರು ಯಾರು, ಇದರ ಹಿಂದೆ ಯಾರೆಲ್ಲಾ ಇದ್ದಾರೆಂಬ ಸಂಗತಿ ಹೊರ ಬರುತ್ತದೆ.
-ಮಹೇಶ ಶೆಟ್ಟಿ ತಿಮರೋಡಿ ಪ್ರಜಾಪ್ರಭುತ್ವ ವೇದಿಕೆ