ನೆರೆಹೊರೆಯವರ ಕಿರುಕುಳಕ್ಕೆ ಬೇಸತ್ತು ನದಿಗೆ ಹಾರಿದ ಗೋವಾ ವಿಮೋಚನಾ ಹೋರಾಟಗಾರ: ಪತ್ತೆಯಾಗದ ಮೃತದೇಹ

• ನದಿಗೆ ಹಾರಿದ್ರಾ ಗೋವಾ ವಿಮೋಚನಾ ಹೋರಾಟಗಾರ..?
• ನದಿ ಬಳಿಯಲ್ಲಿ ಪಿಂಚಣಿ ಪಾಸ್‌ ಬುಕ್‌ ಮತ್ತು ಚಪ್ಪಲಿ ಪತ್ತೆ 
• ಶವ ಪತ್ತೆಗೆ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ..!
• ಅಕ್ಕಪಕ್ಕದ ಮನೆಯವರ ಕಿರುಕುಳಕ್ಕೆ ಮನೆ ಬಿಟ್ಟರಾ ಹೋರಾಟಗಾರ.?

Goa liberation fighter was tired of the harassment of neighbors jump River sat

ವರದಿ- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯಪುರ (ಜ.24) : ತಾಳಿಕೋಟಿ ತಾಲೂಕಿನ ದೇವರ ಹುಲಗಬಾಳದ ಗೋವಾ ವಿಮೋಚನಾ ಹೋರಾಟಗಾರ ಹಣಮಪ್ಪ ಮುದಕಪ್ಪ ಚಲವಾದಿ (90) ಕೃಷ್ಣಾ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದ್ದು ಅವರ ಮೃತದೇಹ ಪತ್ತೆಗೆ ಮಂಗಳವಾರ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆಸಲಾಗುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಕಳೆದ ಎರಡು ದಿನಗಳ ಹಿಂದೆ ಮನೆಯಿಂದ ಹೊರ ಹೋಗಿರುವ ಹಣಮಪ್ಪ ಅವರು ತಂಗಡಗಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಬಳಿ ಓಡಾಡಿದ್ದಾರೆ ಎನ್ನಲಾಗಿದೆ. ಹೀಗೆ ಹೊರಗೆ ಹೋದವರು ಮನೆಗೆ ವಾಪಸ್ ಆಗಿಲ್ಲ.. ಹಣಮಂತಪ್ಪರಿಗಾಗಿ ಮನೆಯವರು ಹುಡುಕಾಡಿದ್ದಾರೆ. ಆದ್ರೆ ಸೇತುವೆ ಮೇಲೆ ಓಡಾಡುತ್ತಿದ್ದರು ಎನ್ನುವ ಮಾಹಿತಿ ಕುಟುಂಬಸ್ಥರಿಗೆ ಸಿಕ್ಕಿದೆ.

Vijayapura: ದ್ರಾಕ್ಷಿ ಬೆಳೆ ರಕ್ಷಣೆಗೆ ಹೊಸ ಅಸ್ತ್ರ ಹುಡುಕಿಕೊಂಡ ರೈತರು: ಹಕ್ಕಿಗಳ ಕಾಟಕ್ಕೆ ಸಿಕ್ತು ಮುಕ್ತಿ

ಸೇತುವೆ ಮೇಲೆ ಪಿಂಚಣಿ ಪುಸ್ತಕ, ಚಪ್ಪಲಿ ಪತ್ತೆ: ಸೇತುವೆ ಮೇಲೆ ಅವರಿಗೆ ಸೇರಿರುವ ಮೊಬೈಲ್ ಫೋನ್, ಪಿಂಚಣಿ ಪಡೆಯುತ್ತಿದ್ದ ಪುಸ್ತಕ, ಚಪ್ಪಲಿ ದೊರೆತಿವೆ. ಇದರ ಆಧಾರದ ಮೇಲೆಯೇ ಹಣಮಪ್ಪ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಮಾತನಾಡಿರುವ ಅವರ ಪುತ್ರಿ ನೀಲಮ್ಮ ಚಲವಾದಿ, ನಮ್ಮ ತಂದೆ ಬಳಸುತ್ತಿದ್ದ ಮೊಬೈಲ್ ಫೋನ್, ಧರಿಸುತ್ತಿದ್ದ ಚಪ್ಪಲಿ ಸೇತುವೆ ಮೇಲೆ ಸಿಕ್ಕಿರುವುದನ್ನು ನೋಡಿದರೆ ಭಯವಾಗುತ್ತಿದೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರನಿಗೆ ಕಿರಿಕಿರಿ: ಹಣಮಂತ ಮನೆ ಬಿಡುವುದರ ಹಿಂದೆ ಕಿರಿಕಿರಿ ನೀಡಿರುವುದು. ಕಿರುಕುಳ ಕೊಟ್ಟಿದ್ದರು ಎನ್ನುವ ಮಾಹಿತಿ ಲಭ್ಯವಾಗ್ತಿದೆ. ಮನೆಯ ಅಕ್ಕಪಕ್ಕದವರು ನಿತ್ಯ ಹೋರಾಟಗಾರನಿಗೆ ಕಿರಿಕಿರಿ ಮಾಡುತ್ತಿದ್ದರು ಎನ್ನಲಾಗಿದೆ. ವಯಸ್ಸಾಗಿದ್ದ ಹಣಮಂತಪ್ಪನವರು   ಅಕ್ಕಪಕ್ಕದ ಮನೆಗಳ ಬಳಿ ಕೂರುವುದು, ಅಡ್ಡಾಡುವುದು ಮಾಡುತ್ತಿದ್ದರು. ಇದರಿಂದ ಆ ಮನೆಗಳವರು ಅವರಿಗೆ ಕಿರುಕುಳ ಕೊಡ್ತಿದ್ದರು ಎನ್ನಲಾಗಿದೆ. ಮನೆಯ ಅಕ್ಕಪಕ್ಕದವರು ನೀಡಿದ ಕಿರಿಕಿರಿಯಿಂದ ಮನೆ ಬಿಟ್ಟು ಬಂದಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈಗ ಕಾಣುತ್ತಿಲ್ಲ. ನದಿಗೆ ಬಿದ್ದಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಈ ವಸ್ತುಗಳು ಇಲ್ಲಿ ಸಿಕ್ಕಿರುವುದನ್ನು ನೋಡಿದರೆ ನದಿಗೆ ಹಾರಿರುವ ಅನುಮಾನ ಕಾಡುತ್ತಿದೆ. ಅವರನ್ನು ಹುಡುಕಿಕೊಡುವಂತೆ ತಾಲೂಕಾಡಳಿತವನ್ನು ಕೋರುತ್ತೇನೆ ಎಂದು ಮನವಿ ಮಾಡಿಕೊಂಡಿದ್ದಾರೆ.

ವಿಜಯಪುರ: ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯ ಬರ್ಬರ ಹತ್ಯೆ

ಗೋವಾ ವಿಮೋಚನೆಗಾಗಿ ಹೋರಾಡಿದ್ದರು: ಹಣಮಪ್ಪ ಅವರಿಗೆ ಗೋವಾ ವಿಮೋಚನಾ ಹೋರಾಟಗಾರರ ಹೆಸರಿನಲ್ಲಿ ಪ್ರತಿ ತಿಂಗಳು ನಾಲ್ಕು ಸಾವಿರ ರೂ.ಪಿಂಚಣಿ ಬರುತ್ತಿತ್ತು ಎಂದು ಮೂಲಗಳು ತಿಳಿಸಿವೆ.  ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯ ಈಜುಗಾರರ ಸಹಕಾರದಿಂದ ಹಿರಿಯ ಹೋರಾಟಗಾರರ ಶವ ಶೋಧಕ್ಕೆ ಕಾರ್ಯಾಚರಣೆ ಮುಂದುವರೆಸಿದ್ದಾರೆ.

Latest Videos
Follow Us:
Download App:
  • android
  • ios